Skip to content

"ನಿನಗೆ ಸಂಶಯವನ್ನುಂಟುಮಾಡುವುದನ್ನು, ನಿನಗೆ ಸಂಶಯವನ್ನುಂಟುಮಾಡದ ವಿಷಯಕ್ಕಾಗಿ ತ್ಯಜಿಸು".

ಅಬೂ ಮುಹಮ್ಮದ್ ಅಲ್-ಹಸನ್ ಇಬ್ನ್ ಅಲೀ ಇಬ್ನ್ ಅಬೀ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) - ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಮ್ಮಗ ಮತ್ತು ಅವರ 'ರೈಹಾನ್' (ಪ್ರೀತಿಯ ಸುಗಂಧ ಪುಷ್ಪ) - ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ಕಂಠಪಾಠ ಮಾಡಿದ್ದೇನೆ:

"ನಿನಗೆ ಸಂಶಯವನ್ನುಂಟುಮಾಡುವುದನ್ನು, ನಿನಗೆ ಸಂಶಯವನ್ನುಂಟುಮಾಡದ ವಿಷಯಕ್ಕಾಗಿ ತ್ಯಜಿಸು".

«دَعْ مَا يَرِيبُك إلَى مَا لَا يَرِيبُكَ».

ಇದನ್ನು ತಿರ್ಮಿದಿ ಮತ್ತು ನಸಾಈ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುವುದೇನೆಂದರೆ, ನಿಮಗೆ ಯಾವುದಾದರೂ ಮಾತುಗಳು ಮತ್ತು ಕಾರ್ಯಗಳ ಬಗ್ಗೆ ಸಂಶಯವಿದ್ದರೆ (ಅಂದರೆ, ಅದು ನಿಷಿದ್ಧವಾಗಿರಬಹುದೋ ಅಲ್ಲವೋ, ಹರಾಮ್ ಆಗಿರಬಹುದೋ ಅಥವಾ ಹಲಾಲ್ ಆಗಿರಬಹುದೋ ಎಂದು ಸಂಶಯವಿದ್ದರೆ), ಅದನ್ನು ಬಿಟ್ಟುಬಿಡಿ, ಮತ್ತು ಯಾವುದರ ಕುರಿತು ಅದು ಒಳಿತಾಗಿದೆ ಮತ್ತು ಅದನ್ನು ಮಾಡಲು ಅನುಮತಿಯಿದೆ ಎಂದು ನಿಮಗೆ ಖಾತ್ರಿಯಿದೆಯೋ (ಅಂದರೆ, ಅದರ ಬಗ್ಗೆ ಯಾವುದೇ ಸಂಶಯವಿಲ್ಲವೋ), ಅದನ್ನು ನಿರ್ವಹಿಸಿರಿ.

ಹದೀಸಿನ ಪ್ರಯೋಜನಗಳು

ಮುಸಲ್ಮಾನನು ದೃಢ ತಿಳುವಳಿಕೆಯ ಆಧಾರದಲ್ಲಿ ಕರ್ಮವೆಸಗಬೇಕು ಮತ್ತು ಸಂಶಯವಿರುವ ಕಾರ್ಯಗಳನ್ನು ಬಿಟ್ಟುಬಿಡಬೇಕು. ಧರ್ಮದ ವಿಷಯದಲ್ಲಿ ಒಳನೋಟವನ್ನು ಹೊಂದಿರಬೇಕು.

ಸಂಶಯಗಳಲ್ಲಿ ಒಳಪಡುವುದನ್ನು ನಿಷೇಧಿಸಲಾಗಿದೆ.

ನಿಶ್ಚಿಂತೆ ಮತ್ತು ಸಮಾಧಾನ ಬೇಕಾದರೆ ಸಂಶಯವಿರುವ ಕಾರ್ಯಗಳನ್ನು ಬಿಟ್ಟುಬಿಡಬೇಕು.

ಅಲ್ಲಾಹನಿಗೆ ಮನುಷ್ಯರ ಮೇಲಿರುವ ದಯೆಯನ್ನು ತಿಳಿಸಲಾಗಿದೆ. ಏಕೆಂದರೆ, ಅವನು ಮನಸ್ಸಿಗೆ ನೆಮ್ಮದಿ ನೀಡುವ ಕಾರ್ಯಗಳನ್ನು ಆದೇಶಿಸಿದ್ದಾನೆ ಮತ್ತು ಮನಸ್ಸಿಗೆ ಆತಂಕ ಮತ್ತು ಚಿಂತೆ ತರುವ ವಿಷಯಗಳನ್ನು ನಿಷೇಧಿಸಿದ್ದಾನೆ.

ಉಲ್ಲೇಖಗಳು

ಸುನನು ನ್ನಸಾಈ. (8/ 327) (5711).

ಸುನನು ತ್ತಿರ್ಮಿದಿ. (4/ 286) (2518).

ಮುಸ್ನದ್ ಅಹ್ಮದ್. (3/ 248) (1723).

ಇನ್ನಷ್ಟು (5)

التحفة الربانية في شرح الأربعين حديثًا النووية.

لإسماعيل الأنصاري (ص29).

شرح الأربعين النووية.

لابن عثيمين (ص153).

فتح القوي المتين في شرح الأربعين وتتمة الخمسين للنووي وابن رجب (ص56).