ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ
ಸಹ್ಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. (ಆ ದಿನ) 'ಉಪವಾಸಿಗರು ಎಲ್ಲಿ?' ಎಂದು ಕರೆಯಲಾಗುವುದು. ಆಗ ಅವರು ಎದ್ದು ನಿಲ್ಲುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. ಅವರೆಲ್ಲರೂ ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುವುದು. ನಂತರ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ".
«إِنَّ فِي الْجَنَّةِ بَابًا يُقَالُ لَهُ الرَّيَّانُ، يَدْخُلُ مِنْهُ الصَّائِمُونَ يَوْمَ الْقِيَامَةِ، لَا يَدْخُلُ مِنْهُ أَحَدٌ غَيْرُهُمْ، يُقَالُ: أَيْنَ الصَّائِمُونَ، فَيَقُومُونَ لَا يَدْخُلُ مِنْهُ أَحَدٌ غَيْرُهُمْ، فَإِذَا دَخَلُوا أُغْلِقَ، فَلَمْ يَدْخُلْ مِنْهُ أَحَدٌ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸ್ವರ್ಗದ ಬಾಗಿಲುಗಳಲ್ಲಿ ಒಂದು ಬಾಗಿಲನ್ನು 'ಬಾಬು ರ್ರಯ್ಯಾನ್' ಎಂದು ಕರೆಯಲಾಗುತ್ತದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು, ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. 'ಉಪವಾಸಿಗರು ಎಲ್ಲಿ?' ಎಂದು ಕರೆಯಲಾಗುವುದು. ಆಗ ಅವರು ಎದ್ದು ನಿಂತು ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. ಅವರಲ್ಲಿ ಕೊನೆಯವರು ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುವುದು. ನಂತರ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ.
ಇಮಾಮ್ ನವವಿ ಹೇಳುತ್ತಾರೆ: "ಈ ಹದೀಸ್‌ನಲ್ಲಿ ಉಪವಾಸದ ಶ್ರೇಷ್ಠತೆಯನ್ನು ಮತ್ತು ಉಪವಾಸಿಗರ ಗೌರವವನ್ನು ತಿಳಿಸಲಾಗಿದೆ."
ಅಲ್ಲಾಹು ಉಪವಾಸಿಗರಿಗಾಗಿ ಸ್ವರ್ಗದ ಎಂಟು ಬಾಗಿಲುಗಳಲ್ಲಿ ಒಂದು ಬಾಗಿಲನ್ನು ವಿಶೇಷವಾಗಿ ಮೀಸಲಿಟ್ಟಿದ್ದಾನೆ. ಅವರು ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುತ್ತದೆ.
ಸ್ವರ್ಗಕ್ಕೆ ಬಾಗಿಲುಗಳಿವೆ ಎಂದು ವಿವರಿಸಲಾಗಿದೆ.
ಸಿಂದಿ ಹೇಳುತ್ತಾರೆ: "ಅವರ ಮಾತು: 'ಉಪವಾಸಿಗರು ಎಲ್ಲಿ?'. ಇದರ ಉದ್ದೇಶ ಬಹುಶಃ ಉಪವಾಸವನ್ನು ಹೆಚ್ಚಾಗಿ ಆಚರಿಸುವವರು ಆಗಿರಬಹುದು. ಹೇಗೆ 'ಆದಿಲ್' (ನ್ಯಾಯವಂತ) ಅಥವಾ 'ಝಾಲಿಮ್' (ಅನ್ಯಾಯಗಾರ) ಎಂದು ಆ ಗುಣವನ್ನು ರೂಢಿ ಮಾಡಿಕೊಂಡವರಿಗೆ ಹೇಳಲಾಗುತ್ತದೆಯೋ ಹಾಗೆ. ಒಮ್ಮೆ ಮಾತ್ರ ಮಾಡಿದವರಿಗೆ ಇದು ಅನ್ವಯಿಸುವುದಿಲ್ಲ."
'ಅರ್-ರಯ್ಯಾನ್' ಅಂದರೆ ದಾಹವನ್ನು ನೀಗಿಸುವವನು. ಏಕೆಂದರೆ ಉಪವಾಸಿಗರು ದಾಹವನ್ನು ಅನುಭವಿಸುತ್ತಾರೆ. ವಿಶೇಷವಾಗಿ ಬೇಸಿಗೆಯ ದೀರ್ಘ, ಬಿಸಿ ದಿನಗಳಲ್ಲಿ. ಆದ್ದರಿಂದ ಅವರಿಗೆ ವಿಶೇಷವಾಗಿರುವ ಹೆಸರನ್ನು (ಬಾಬು ರ್ರಯ್ಯಾನ್) ಈ ಬಾಗಿಲಿಗೆ ನೀಡುವ ಮೂಲಕ ಅವರಿಗೆ ಪ್ರತಿಫಲ ನೀಡಲಾಗುತ್ತದೆ. 'ರಯ್ಯಾನ್' ಎಂದರೆ ಅತ್ಯಧಿಕ 'ರಯ್' (ದಾಹ ನೀಗುವುದು) ದಿಂದ ಬಂದಿದ್ದು, 'ಅತಶ್' (ದಾಹ) ದ ವಿರುದ್ಧ ಪದವಾಗಿದೆ ಎಂದೂ ಹೇಳಲಾಗಿದೆ. ಉಪವಾಸಿಗಳ ದಾಹ ಮತ್ತು ಹಸಿವಿಗೆ ಪ್ರತಿಫಲವಾಗಿ ಅದಕ್ಕೆ ಈ ಹೆಸರಿಡಲಾಗಿದೆ.
ಸಹೀಹುಲ್ ಬುಖಾರಿ. (3/ 25) (1896).
ಸಹೀಹ್ ಮುಸ್ಲಿಮ್. (2/ 808) (1152).
ಇನ್ನಷ್ಟು (6)
بهجة الناظرين شرح رياض الصالحين.
لسليم الهلالي (2/ 360).
نزهة المتقين شرح رياض الصالحين.
لمجموعة من الباحثين (2/ 868).
شرح رياض الصالحين.
لابن عثيمين (5/ 270).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
6 ಗ್ರಂಥಗಳುಇನ್ನಷ್ಟು (6)
- أسئلة وأجوبة عن شهر رمضان للصغار، ولا يستغني عنها الكبار«إِنَّ فِي الْجَنَّةِ بَابًا يُقَالُ لَهُ: الرَّيَّانُ، يَدْخُلُ مِنْهُ الصَّائِمُونَ يَوْمَ الْقِيَامَةِ، لَا يَدْخُلُ مِنْهُ أَحَدٌ غَيْرُهُمْ، يُقَالُ: أَيْنَ الصَّائِمُونَ؟ فَيَقُومُونَ لَا يَدْخُلُ مِنْهُ أَحَدٌ غَيْرُهُمْ، فَإِذَا دَخ
- المنتقى من المتجر الرابح في ثواب العمل الصالح - المعتمدالمنتقى من المتجر الرابح في ثواب العمل الصالح“إن في الجنة بابا يقال له الريان، يدخل منه الصائمون يوم القيامة، لا يدخل منه أحد غيرهم، يقال: أين الصائمون؟ فيقومون لا يدخل منه أحد غيرهم، فإذا دخلوا أغلق فلم يدخل منه أحد”.
- رياض الصالحينرياض الصالحين مع فوائد وهدايات - 6«إنَّ في الجَنَّة باباً يُقالُ لَهُ: الرَّيَّانُ، يدخل منهُ الصائمونَ يومَ القيامةِ، لا يدخلُ منهْ أحدٌ غيرُهُم، يقال: أينَ الصَّائمون؟ فيقومون لا يدخلُ منهُ أحدٌ غيرهُم، فإذا دَخلُوا أُغلقَ، فلم يدخل منه أحدٌ».
- قاموس الكبائر موسوعة الكبائر - المجموعة الأولى«إِنَّ فِي الجَنَّةِ بَابًا يُقَالُ لَهُ الرَّيَّانُ، يَدْخُلُ مِنْهُ الصَّائِمُونَ يَوْمَ القِيَامَةِ، لَا يَدْخُلُ مِنْهُ أَحَدٌ غَيْرُهُمْ، يُقَالُ: أَيْنَ الصَّائِمُونَ؟ فَيَقُومُونَ لَا يَدْخُلُ مِنْهُ أَحَدٌ غَيْرُهُمْ، فَإِذَا دَخَلُ
- قاموس الكبائر«إِنَّ فِي الجَنَّةِ بَابًا يُقَالُ لَهُ الرَّيَّانُ، يَدْخُلُ مِنْهُ الصَّائِمُونَ يَوْمَ القِيَامَةِ، لَا يَدْخُلُ مِنْهُ أَحَدٌ غَيْرُهُمْ، يُقَالُ: أَيْنَ الصَّائِمُونَ؟ فَيَقُومُونَ لَا يَدْخُلُ مِنْهُ أَحَدٌ غَيْرُهُمْ، فَإِذَا دَخَلُ
- مجموعة زاد الفقه (3)الفقه 3«إِنَّ فِي الجَنَّةِ بَابًا يُقَالُ لَهُ الرَّيَّانُ، يَدْخُلُ مِنْهُ الصَّائِمُونَ يَوْمَ القِيَامَةِ، لَا يَدْخُلُ مِنْهُ أَحَدٌ غَيْرُهُمْ، يُقَالُ: أَيْنَ الصَّائِمُونَ؟ فَيَقُومُونَ لَا يَدْخُلُ مِنْهُ أَحَدٌ غَيْرُهُمْ، فَإِذَا دَخَلُ