معلومات وأوصاف التطبيقات في المتاجر
ಪವಿತ್ರ ಕುರಾನ್ ವಿಶ್ವಕೋಶ
ಪವಿತ್ರ ಕುರಾನ್ ವಿಶ್ವಕೋಶ
QuranEnc. ವಿವಿಧ ಭಾಷೆಗಳಲ್ಲಿ ಪವಿತ್ರ ಕುರ್‌ಆನ್‌ನ ಅರ್ಥಗಳ ವಿಶ್ವಾಸಾರ್ಹ ಅನುವಾದಗಳು.
ಅಪ್ಲಿಕೇಶನ್ ವಿವರಣೆ:
ಇದು ಪವಿತ್ರ ಕುರ್‌ಆನ್‌ನ ಅರ್ಥ ಮತ್ತು ಅದರ ವಿವರಣೆಯ ಉಚಿತ, ವಿಶ್ವಾಸಾರ್ಹ ಮತ್ತು ಸುಧಾರಿತ ಅನುವಾದಗಳಿಗಾಗಿ ಇರುವ ಒಂದು ಆನ್‌ಲೈನ್ ಆಕರವಾಗಿದೆ. ಇದು ವಿಶ್ವದ ಹಲವು ಭಾಷೆಗಳಲ್ಲಿ ಲಭ್ಯವಿದೆ. ಇದನ್ನು ರಬ್ವಾದಲ್ಲಿರುವ ದಅವಾ (ಇಸ್ಲಾಮಿನ ಪ್ರಚಾರ), ಮಾರ್ಗದರ್ಶನ ಮತ್ತು ಸಮುದಾಯಗಳ ಜಾಗೃತಿ ಸಂಘ ಹಾಗೂ ವಿವಿಧ ಭಾಷೆಗಳಲ್ಲಿ ಇಸ್ಲಾಮಿ ವಿಷಯಗಳನ್ನು ಒದಗಿಸುವ ಸೇವಾ ಸಂಘ.' ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ಸಿದ್ಧಪಡಿಸಿ, ಅಭಿವೃದ್ಧಿಪಡಿಸಲಾಗಿದೆ.
ಅಪ್ಲಿಕೇಶನ್ ವೈಶಿಷ್ಟ್ಯಗಳು:
ಹೆಚ್ಚಿನ ವಿಶ್ವಾಸಾರ್ಹತೆ: 'ಅಹ್ಲುಸ್ ಸುನ್ನತ್ ವಲ್ ಜಮಾಅತ್' ಅವರ ಮಾನ್ಯತೆ ಪಡೆದ ಮೂಲಗಳಿಂದ ನಿಖರವಾದ ಮಾನದಂಡಗಳ ಅನ್ವಯ ಅತ್ಯುತ್ತಮ ಅನುವಾದಗಳನ್ನು ಆಯ್ಕೆ ಮಾಡಿ, ಅವುಗಳನ್ನು ಪರಿಶೀಲಿಸಿ ಅಭಿವೃದ್ಧಿಪಡಿಸಲಾಗಿದೆ. ಕೆಲವು ಭಾಷೆಗಳಿಗೆ ಹೊಸ ಅನುವಾದಗಳನ್ನು ಸಹ ರಚಿಸಲಾಗಿದ್ದು, ಅವುಗಳ ಸುಧಾರಣೆಯು ನಿರಂತರವಾಗಿ ನಡೆಯುತ್ತಿದೆ.
ಬಳಕೆದಾರರ ಸಂವಾದ: ನಿಖರತೆ ಮತ್ತು ನಿರಂತರ ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು, ಅನುವಾದಗಳ ಕುರಿತು ಅಭಿಪ್ರಾಯಗಳನ್ನು ನೀಡಲು ಮತ್ತು ಅವುಗಳನ್ನು ಮೌಲ್ಯಮಾಪನ ಮಾಡಲು ಭಾಗವಹಿಸುವ ಅವಕಾಶ.
ಉಚಿತ ಪ್ರವೇಶ: ಅನುವಾದಗಳಿಗೆ ಸಂಪೂರ್ಣ ಪ್ರವೇಶವನ್ನು ಉಚಿತವಾಗಿ ಆನಂದಿಸಿ. ಜೊತೆಗೆ, ವಿವಿಧ ರೂಪಗಳಲ್ಲಿ ಡೌನ್‌ಲೋಡ್ ಮಾಡುವ ಆಯ್ಕೆಗಳೂ ಇವೆ.
‘ಪವಿತ್ರ ಕುರ್‌ಆನ್‌ನ ಅರ್ಥಾನುವಾದಗಳ ವಿಶ್ವಕೋಶ’ ಅಪ್ಲಿಕೇಶನ್ ಅನ್ನು ಏಕೆ ಆಯ್ದುಕೊಳ್ಳಬೇಕು?
ನಿಖರತೆ, ಪರಿಪೂರ್ಣತೆ ಮತ್ತು ನಿರಂತರ ನವೀಕರಣದ ಬಗೆಗಿನ ನಮ್ಮ ಬದ್ಧತೆಯಿಂದಾಗಿ, ಈ ಅನ್ವಯವು ಇತರ ವಿದ್ಯುನ್ಮಾನ ಆಕರಗಳಿಗೆ ಒಂದು ಪ್ರಬಲ ಪರ್ಯಾಯವಾಗಿದೆ. ನಿಮ್ಮ ಮೆಚ್ಚಿನ ಭಾಷೆಯಲ್ಲಿ ಮಹೋನ್ನತನಾದ ಅಲ್ಲಾಹನ ಗ್ರಂಥವನ್ನು ಅರಿಯಲು ನಾವು ನಿಮಗೆ ಒಂದು ಪರಿಣಾಮಕಾರಿ ಸಾಧನವನ್ನು ಒದಗಿಸುತ್ತೇವೆ.
ಅನುವಾದಕ್ಕೆ ಲಭ್ಯವಿರುವ ಸ್ವರೂಪಗಳು:
XLSX - CSV - XML - API - JSON - PDF - EPUB
ಪವಿತ್ರ ಕುರಾನ್‌ನ ಲಭ್ಯವಿರುವ ಅನುವಾದಗಳ ಪಟ್ಟಿ:
ನಮ್ಮ ಸಮುದಾಯದೊಂದಿಗೆ ಸೇರಿಕೊಳ್ಳಿ.
ನಮ್ಮ ಸಕ್ರಿಯ ಸಮುದಾಯದ ಭಾಗವಾಗಿ ಮತ್ತು ಪವಿತ್ರ ಕುರಾನ್‌ನ ಭಾವಾರ್ಥದ ಅನುವಾದಗಳನ್ನು ಅಭಿವೃದ್ಧಿಪಡಿಸಲು ನಿಮ್ಮ ಕೊಡುಗೆಯನ್ನು ನೀಡಿ. ನಿಮ್ಮ ಅಭಿಪ್ರಾಯಗಳು ಮತ್ತು ಮೌಲ್ಯಮಾಪನಗಳನ್ನು ಹಂಚಿಕೊಳ್ಳಿ. ಈ ಅಪ್ಲಿಕೇಶನ್ ಅನ್ನು, ಪ್ರಪಂಚದಾದ್ಯಂತದ ಮಾನವಕುಲವು ವಿವಿಧ ಭಾಷೆಗಳಲ್ಲಿ ಪವಿತ್ರ ಕುರಾನ್ ಅನ್ನು ಅರ್ಥಮಾಡಿಕೊಳ್ಳಲು ಒಂದು ಪ್ರಮುಖ ಮೂಲವನ್ನಾಗಿ ಮಾಡಲು ನಮಗೆ ಸಹಾಯ ಮಾಡಿ.
ಇಂದು 'ಪವಿತ್ರ ಕುರಾನ್‌ನ ಭಾವಾರ್ಥದ ಅನುವಾದಗಳ ವಿಶ್ವಕೋಶ' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ನೆಚ್ಚಿನ ಭಾಷೆಯಲ್ಲಿ ಪವಿತ್ರ ಕುರಾನ್ ಅನ್ನು ಅರ್ಥಮಾಡಿಕೊಳ್ಳುವ ನಿಮ್ಮ ಪ್ರಯಾಣವನ್ನು ಆರಂಭಿಸಿ..
ಹದೀಸ್ ವಿಶ್ವಕೋಶ
ವಿವಿಧ ಭಾಷೆಗಳಲ್ಲಿ ಹದೀಸ್‌ಗಳ ವಿಶ್ವಾಸಾರ್ಹ ಅನುವಾದಗಳು
ಅಪ್ಲಿಕೇಶನ್ ವಿವರಣೆ:
ಇದು ಪ್ರಪಂಚದ ಭಾಷೆಗಳಲ್ಲಿ ಪ್ರವಾದಿಯ ಹದೀಸ್‌ಗಳು ಮತ್ತು ಅವುಗಳ ವಿವರಣೆಗಳ ವಿಶ್ವಾಸಾರ್ಹ ಹಾಗೂ ಸುಧಾರಿತ ಅನುವಾದಗಳಿಗೆ ಇರುವ ಒಂದು ಉಚಿತ ಎಲೆಕ್ಟ್ರಾನಿಕ್ ಆಕರವಾಗಿದೆ. ಇದನ್ನು ರಬ್ವಾದಲ್ಲಿರುವ 'ದಅವಾ, ಮಾರ್ಗದರ್ಶನ ಮತ್ತು ಸಮುದಾಯ ಜಾಗೃತಿ ಸಂಘ' ಮತ್ತು 'ವಿವಿಧ ಭಾಷೆಗಳಲ್ಲಿ ಇಸ್ಲಾಮಿಕ್ ವಿಷಯ ಸೇವಾ ಸಂಘ'ದ ಮೇಲ್ವಿಚಾರಣೆಯಲ್ಲಿ ಸಿದ್ಧಪಡಿಸಿ, ಅಭಿವೃದ್ಧಿಪಡಿಸಲಾಗಿದೆ.
ಅಪ್ಲಿಕೇಶನ್‌ನ ವೈಶಿಷ್ಟ್ಯಗಳು:
ಹೆಚ್ಚಿನ ವಿಶ್ವಾಸಾರ್ಹತೆ: ಅಹ್ಲುಸ್ಸುನ್ನತ್ ವಲ್ ಜಮಾಅತ್‌ನ ಅಧಿಕೃತ ಮೂಲಗಳಿಂದ ಪಡೆದ ನಿಖರವಾದ ಮಾನದಂಡಗಳಿಗೆ ಅನುಗುಣವಾಗಿ ಅತ್ಯುತ್ತಮ ಅನುವಾದಗಳನ್ನು ಆಯ್ಕೆಮಾಡಿ, ನಂತರ ಅವುಗಳನ್ನು ಪರಿಶೀಲಿಸಿ ಅಭಿವೃದ್ಧಿಪಡಿಸಲಾಗಿದೆ. ಕೆಲವು ಭಾಷೆಗಳಿಗೆ ಹೊಸ ಅನುವಾದಗಳನ್ನು ಸಹ ರಚಿಸಲಾಗಿದ್ದು, ಅವುಗಳನ್ನು ನಿರಂತರವಾಗಿ ಸುಧಾರಿಸಲಾಗುತ್ತಿದೆ.
ಬಳಕೆದಾರರ ಸಂವಾದ: ನಿಖರತೆ ಮತ್ತು ನಿರಂತರ ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಅನುವಾದಗಳನ್ನು ಮೌಲ್ಯಮಾಪನ ಮಾಡುವ ಮೂಲಕ ಭಾಗವಹಿಸುವ ಅವಕಾಶ.
ಉಚಿತ ಪ್ರವೇಶ: ಅನುವಾದಗಳಿಗೆ ಸಂಪೂರ್ಣ ಪ್ರವೇಶವನ್ನು ಉಚಿತವಾಗಿ ಆನಂದಿಸಿ, ಜೊತೆಗೆ ವಿವಿಧ ಸ್ವರೂಪಗಳಲ್ಲಿ ಡೌನ್‌ಲೋಡ್ ಮಾಡುವ ಆಯ್ಕೆಗಳಿವೆ.
'ಹದೀಸ್ ವಿಶ್ವಕೋಶ' ಅಪ್ಲಿಕೇಶನ್ ಅನ್ನು ಏಕೆ ಆರಿಸಬೇಕು?
ಈ ಅಪ್ಲಿಕೇಶನ್ ಇತರ ಎಲೆಕ್ಟ್ರಾನಿಕ್ ಆಕರಗಳಿಗೆ ಒಂದು ಪ್ರಬಲ ಪರ್ಯಾಯವಾಗಿದೆ. ನಿಖರತೆ, ಪರಿಪೂರ್ಣತೆ ಮತ್ತು ನಿರಂತರ ನವೀಕರಣಗಳಿಗೆ ನಮ್ಮ ಬದ್ಧತೆಯ ಮೂಲಕ, ಅಲ್ಲಾಹನ ಸಂದೇಶವಾಹಕರನ್ನು ನಿಮ್ಮ ನೆಚ್ಚಿನ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ನಾವು ನಿಮಗೆ ಒಂದು ಪರಿಣಾಮಕಾರಿ ಸಾಧನವನ್ನು ಒದಗಿಸುತ್ತೇವೆ.
ವಿಶ್ವಕೋಶದಲ್ಲಿ ಲಭ್ಯವಿರುವ ಭಾಷೆಗಳ ಪಟ್ಟಿ:
ನಮ್ಮ ಸಮುದಾಯಕ್ಕೆ ಸೇರಿ:
ನಮ್ಮ ಸಕ್ರಿಯ ಸಮುದಾಯದ ಭಾಗವಾಗಿ, ಪ್ರವಾದಿಯ ಹದೀಸ್‌ಗಳು ಮತ್ತು ಅವುಗಳ ವಿವರಣೆಗಳ ಅನುವಾದಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಕರಿಸಿ. ನಿಮ್ಮ ಅಭಿಪ್ರಾಯಗಳು ಮತ್ತು ಮೌಲ್ಯಮಾಪನಗಳನ್ನು ಹಂಚಿಕೊಳ್ಳಿ ಮತ್ತು ಈ ಅಪ್ಲಿಕೇಶನ್ ಅನ್ನು ಪ್ರಪಂಚದಾದ್ಯಂತ ಮಾನವಕುಲಕ್ಕೆ ವಿವಿಧ ಭಾಷೆಗಳಲ್ಲಿ ಪ್ರವಾದಿಯ ಹದೀಸ್‌ಗಳನ್ನು ಅರ್ಥಮಾಡಿಕೊಳ್ಳಲು ಒಂದು ಪ್ರಮುಖ ಆಕರವನ್ನಾಗಿ ಮಾಡಲು ನಮಗೆ ಸಹಾಯ ಮಾಡಿ.
ಇಂದು 'ಹದೀಸ್ ವಿಶ್ವಕೋಶ' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ನೆಚ್ಚಿನ ಭಾಷೆಯಲ್ಲಿ ಪ್ರವಾದಿಯ ಹದೀಸ್‌ಗಳನ್ನು ಅರ್ಥಮಾಡಿಕೊಳ್ಳುವ ನಿಮ್ಮ ಪ್ರಯಾಣವನ್ನು ಆರಂಭಿಸಿ.
ಇಸ್ಲಾಂಹೌಸ್ (IslamHouse) ಅಪ್ಲಿಕೇಶನ್
ವಿಶ್ವದ ಭಾಷೆಗಳಲ್ಲಿ ಇಸ್ಲಾಂ ಧರ್ಮವನ್ನು ಪರಿಚಯಿಸಲು ಒಂದು ವಿಶ್ವಾಸಾರ್ಹ, ಉಚಿತ, ಎಲೆಕ್ಟ್ರಾನಿಕ್ ಆಕರ.
ಅಪ್ಲಿಕೇಶನ್‌ನ ವಿವರಣೆ:
ವಿಶ್ವದ ಭಾಷೆಗಳಲ್ಲಿ ಇಸ್ಲಾಂ ಧರ್ಮವನ್ನು ಪರಿಚಯಿಸಲು ಒಂದು ವಿಶ್ವಾಸಾರ್ಹ, ಉಚಿತ, ಎಲೆಕ್ಟ್ರಾನಿಕ್ ಆಕರ. 120 ಕ್ಕೂ ಹೆಚ್ಚು ಭಾಷೆಗಳಲ್ಲಿ 70,000 ಕ್ಕೂ ಅಧಿಕ ಧಾರ್ಮಿಕ ಪ್ರಚಾರ ಸಾಮಗ್ರಿಗಳು (ಪುಸ್ತಕಗಳು - ಲೇಖನಗಳು - ಆಡಿಯೋಗಳು - ವೀಡಿಯೊಗಳು) ಲಭ್ಯವಿದೆ.
ಇಸ್ಲಾಂಹೌಸ್ (IslamHouse) ಅಪ್ಲಿಕೇಶನ್ ವೈಶಿಷ್ಟ್ಯಗಳು
ಹೆಚ್ಚಿನ ವಿಶ್ವಾಸಾರ್ಹತೆ: ಈ ಅಪ್ಲಿಕೇಶನ್, ನಿಖರವಾದ ಮಾನದಂಡಗಳ ಪ್ರಕಾರ ಅತ್ಯುತ್ತಮ ಇಸ್ಲಾಮಿಕ್ ವಿಷಯಗಳನ್ನು ಆಯ್ಕೆ ಮಾಡುವುದಕ್ಕೆ ಕಾಳಜಿ ವಹಿಸುತ್ತದೆ. ಈ ವಿಷಯವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ನಿರಂತರವಾಗಿ ಅಭಿವೃದ್ಧಿಪಡಿಸಲಾಗುತ್ತದೆ.
ಸುಲಭ ಬಳಕೆ: ಈ ಅಪ್ಲಿಕೇಶನ್, ವಿಷಯವನ್ನು ಸರಳ ಮತ್ತು ಸ್ಪಷ್ಟವಾದ ರೀತಿಯಲ್ಲಿ ಪ್ರದರ್ಶಿಸುತ್ತದೆ ಹಾಗೂ ಅದನ್ನು ಹಲವು ವಿಧಗಳಲ್ಲಿ ವಿಂಗಡಿಸುವ ಸೌಲಭ್ಯವನ್ನು ಹೊಂದಿದೆ.
ಉಚಿತ ಪ್ರವೇಶ: ಬಳಕೆದಾರರು ಅಪ್ಲಿಕೇಶನ್‌ನ ಸಂಪೂರ್ಣ ವಿಷಯವನ್ನು ಉಚಿತವಾಗಿ ಪ್ರವೇಶಿಸಬಹುದು, ಜೊತೆಗೆ ಸುಲಭ ಪ್ರವೇಶ ಮತ್ತು ಬಳಕೆಗಾಗಿ ಬಹು ಮಾದರಿಗಳಲ್ಲಿ ಡೌನ್‌ಲೋಡ್ ಮಾಡುವ ಆಯ್ಕೆಗಳೂ ಇವೆ.
ಇಸ್ಲಾಂಹೌಸ್ (IslamHouse) ಅಪ್ಲಿಕೇಶನ್ ಏಕೆ ಆಯ್ಕೆಮಾಡಬೇಕು?
ನಿಖರತೆ, ಪರಿಪೂರ್ಣತೆ ಮತ್ತು ನಿರಂತರ ನವೀಕರಣಕ್ಕೆ ತನ್ನ ಬದ್ಧತೆಯ ಕಾರಣ, ಈ ಅಪ್ಲಿಕೇಶನ್ ಇತರ ಎಲೆಕ್ಟ್ರಾನಿಕ್ ಆಕರಗಳಿಗೆ ಒಂದು ಪ್ರಬಲ ಪರ್ಯಾಯವಾಗಿದೆ. ಈ ಅಪ್ಲಿಕೇಶನ್ ಹಲವು ಭಾಷೆಗಳಲ್ಲಿ ಇಸ್ಲಾಂ ಧರ್ಮವನ್ನು ಅರ್ಥಮಾಡಿಕೊಳ್ಳಲು ಒಂದು ಪರಿಣಾಮಕಾರಿ ಸಾಧನವನ್ನು ಒದಗಿಸುತ್ತದೆ, ಇದು ಸರಿಯಾದ ಜ್ಞಾನವನ್ನು ಹರಡಲು ಸಹಕರಿಸುತ್ತದೆ.
ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಭಾಷೆಗಳ ಪಟ್ಟಿ:
ನಮ್ಮ ಸಮುದಾಯದಲ್ಲಿ ಸೇರಿ:
ನಮ್ಮ ಸಮುದಾಯದ ಭಾಗವಾಗಿ, ಧಾರ್ಮಿಕ ಪ್ರಚಾರ ಸಾಮಗ್ರಿಗಳ ಅನುವಾದಗಳು ಮತ್ತು ಅವುಗಳ ವಿವರಣೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಕರಿಸಿ. ನಿಮ್ಮ ಅಭಿಪ್ರಾಯಗಳು ಮತ್ತು ಮೌಲ್ಯಮಾಪನಗಳನ್ನು ಹಂಚಿಕೊಳ್ಳಿ ಮತ್ತು ಈ ಅಪ್ಲಿಕೇಶನ್ ಅನ್ನು ವಿಶ್ವದ ವಿವಿಧ ಭಾಷೆಗಳಲ್ಲಿ ಇಸ್ಲಾಂ ಧರ್ಮವನ್ನು ಅರ್ಥಮಾಡಿಕೊಳ್ಳಲು ಒಂದು ಪ್ರಮುಖ ಆಕರವನ್ನಾಗಿ ಮಾಡಲು ನಮಗೆ ಸಹಾಯ ಮಾಡಿ.
ಇಂದು 'ಇಸ್ಲಾಂಹೌಸ್ (IslamHouse)' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ನೆಚ್ಚಿನ ಭಾಷೆಯಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಸಂದೇಶವನ್ನು ಅರ್ಥಮಾಡಿಕೊಳ್ಳುವ ನಿಮ್ಮ ಪ್ರಯಾಣವನ್ನು ಆರಂಭಿಸಿ.