5 : 35
يَٰٓأَيُّهَا ٱلَّذِينَ ءَامَنُواْ ٱتَّقُواْ ٱللَّهَ وَٱبۡتَغُوٓاْ إِلَيۡهِ ٱلۡوَسِيلَةَ وَجَٰهِدُواْ فِي سَبِيلِهِۦ لَعَلَّكُمۡ تُفۡلِحُونَ
ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಅವನಿಗೆ ಸಮೀಪಗೊಳಿಸುವ ವಸೀಲ (ಮಾಧ್ಯಮ)ವನ್ನು ಹುಡುಕಿರಿ; ಮತ್ತು ಅವನ ಮಾರ್ಗದಲ್ಲಿ ಹೋರಾಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
Explanation & meanings · 1
- ವಸೀಲ ಎಂದರೆ ಗುರಿ ಸಾಧನೆಗಿರುವ ಮಾಧ್ಯಮ; ಅಥವಾ ಗುರಿಯ ಕಡೆಗೆ ಹತ್ತಿರಗೊಳಿಸುವ ಮಾಧ್ಯಮ. ಅಲ್ಲಾಹನಿಗೆ ಹತ್ತಿರಗೊಳಿಸುವ ಮಾಧ್ಯಮ ಎಂದರೆ ಅಲ್ಲಾಹು ಆದೇಶಿಸಿದ ಕಾರ್ಯಗಳನ್ನು ಮಾಡುವುದು ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಿರುವುದು.