Skip to content
النِّسَاء /

ಆಯತ್ 91

4 : 91

ಆಯತ್ 91 of النِّسَاء (4 : 91). This page carries the verse in the Uthmani script with a translation of its meaning, at a stable URL that can be cited on its own.

النِّسَاء ಆಯತ್‌ಗಳು 176
ಸೂರ · النِّسَاء
ಕನ್ನಡ · Hamza
4 : 91

سَتَجِدُونَ ءَاخَرِينَ يُرِيدُونَ أَن يَأۡمَنُوكُمۡ وَيَأۡمَنُواْ قَوۡمَهُمۡ كُلَّ مَا رُدُّوٓاْ إِلَى ٱلۡفِتۡنَةِ أُرۡكِسُواْ فِيهَاۚ فَإِن لَّمۡ يَعۡتَزِلُوكُمۡ وَيُلۡقُوٓاْ إِلَيۡكُمُ ٱلسَّلَمَ وَيَكُفُّوٓاْ أَيۡدِيَهُمۡ فَخُذُوهُمۡ وَٱقۡتُلُوهُمۡ حَيۡثُ ثَقِفۡتُمُوهُمۡۚ وَأُوْلَٰٓئِكُمۡ جَعَلۡنَا لَكُمۡ عَلَيۡهِمۡ سُلۡطَٰنٗا مُّبِينٗا

ನೀವು ಇನ್ನೊಂದು ರೀತಿಯ ಜನರನ್ನು ಕಾಣುವಿರಿ. ಅವರು ನಿಮ್ಮಿಂದ ಮತ್ತು ತಮ್ಮದೇ ಜನರಿಂದ ಸುರಕ್ಷಿತರಾಗಿರಲು ಬಯಸುತ್ತಾರೆ. ಆದರೆ, ಅವರನ್ನು ಕ್ಷೋಭೆಗೆ (ಯುದ್ಧಕ್ಕೆ) ಮರಳಿಸಿದಾಗಲೆಲ್ಲಾ ಅವರು ಅದರಲ್ಲಿ ತಲೆಕೆಳಗಾಗಿ ಬೀಳುತ್ತಾರೆ. ಅವರು ಯುದ್ಧದಿಂದ ದೂರ ಸರಿಯದಿದ್ದರೆ ಮತ್ತು ಶಾಂತಿ ಪ್ರಸ್ತಾಪವನ್ನು ಮುಂದಿಡದಿದ್ದರೆ, ಹಾಗೂ ತಮ್ಮ ಕೈಗಳನ್ನು ತಡೆಹಿಡಿಯದಿದ್ದರೆ, ಅವರನ್ನು ಹಿಡಿಯಿರಿ ಮತ್ತು ಕಂಡಲ್ಲಿ ಕೊಲ್ಲಿರಿ. ಅವರ ವಿರುದ್ಧ ನಾವು ನಿಮಗೆ ಸ್ಪಷ್ಟ ಅಧಿಕಾರವನ್ನು ನೀಡಿದ್ದೇವೆ.

Explanation & meanings · 1
  1. ಇವರು ಮುಸಲ್ಮಾನರೊಡನೆ ಶಾಂತಿ ಒಪ್ಪಂದ ಮಾಡಿಕೊಂಡವರಲ್ಲ; ಮುಸಲ್ಮಾನರೊಡನೆ ಸಹಾನುಭೂತಿಯುಳ್ಳವರೂ ಅಲ್ಲ. ಬದಲಾಗಿ, ಯುದ್ಧದ ಸಮಯದಲ್ಲಿ ತಟಸ್ಥರಾಗಿದ್ದು ಯುದ್ಧದ ಗತಿಯನ್ನು ವೀಕ್ಷಿಸುವವರು. ಇವರಿಗೆ ಮುಸಲ್ಮಾನರ ವಿರುದ್ಧ ಯುದ್ಧ ಮಾಡುವ ಉತ್ತಮ ಅವಕಾಶ ಸಿಕ್ಕಿದರೆ ಅವರು ಯುದ್ಧ ಮಾಡಲು ಹಿಂಜರಿಯುವುದಿಲ್ಲ. ಕೆಲವು ವ್ಯಾಖ್ಯಾನಕಾರರು ಕ್ಷೋಭೆ ಎಂದರೆ ದೇವಸಹಭಾಗಿತ್ವ (ಶಿರ್ಕ್) ಎಂದು ಅರ್ಥ ನೀಡಿದ್ದಾರೆ.