32 : 12
وَلَوۡ تَرَىٰٓ إِذِ ٱلۡمُجۡرِمُونَ نَاكِسُواْ رُءُوسِهِمۡ عِندَ رَبِّهِمۡ رَبَّنَآ أَبۡصَرۡنَا وَسَمِعۡنَا فَٱرۡجِعۡنَا نَعۡمَلۡ صَٰلِحًا إِنَّا مُوقِنُونَ
ಅಪರಾಧಿಗಳು ಅವರ ಪರಿಪಾಲಕನ (ಅಲ್ಲಾಹನ) ಮುಂದೆ ತಲೆತಗ್ಗಿಸಿ ನಿಂತು, “ನಮ್ಮ ಪರಿಪಾಲಕನೇ! ನಾವು ಕಣ್ಣಾರೆ ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದ್ದರಿಂದ ನಮ್ಮನ್ನು ಭೂಮಿಗೆ ಮರಳಿ ಕಳುಹಿಸು. ನಾವು ಸತ್ಕರ್ಮಗಳನ್ನು ಮಾಡುತ್ತೇವೆ. ಖಂಡಿತವಾಗಿಯೂ ಈಗ ನಮಗೆ ದೃಢನಂಬಿಕೆ ಬಂದಿದೆ” ಎಂದು ಹೇಳುವ ದೃಶ್ಯವನ್ನು ನೀವು ನೋಡಿರುತ್ತಿದ್ದರೆ!