فَمَنۡ حَآجَّكَ فِيهِ مِنۢ بَعۡدِ مَا جَآءَكَ مِنَ ٱلۡعِلۡمِ فَقُلۡ تَعَالَوۡاْ نَدۡعُ أَبۡنَآءَنَا وَأَبۡنَآءَكُمۡ وَنِسَآءَنَا وَنِسَآءَكُمۡ وَأَنفُسَنَا وَأَنفُسَكُمۡ ثُمَّ نَبۡتَهِلۡ فَنَجۡعَل لَّعۡنَتَ ٱللَّهِ عَلَى ٱلۡكَٰذِبِينَ
ನಿಮ್ಮ ಬಳಿಗೆ ಜ್ಞಾನವು ಬಂದ ಬಳಿಕವೂ ಅವರ (ಈಸಾರ) ವಿಷಯದಲ್ಲಿ ಯಾರಾದರೂ ನಿಮ್ಮೊಂದಿಗೆ ತರ್ಕಿಸಿದರೆ ನೀವು ಹೇಳಿರಿ: “ಬನ್ನಿ! ನಾವು ನಮ್ಮ ಮಕ್ಕಳನ್ನು ಮತ್ತು ನಿಮ್ಮ ಮಕ್ಕಳನ್ನು, ನಮ್ಮ ಮಹಿಳೆಯರನ್ನು ಮತ್ತು ನಿಮ್ಮ ಮಹಿಳೆಯರನ್ನು, ನಮ್ಮನ್ನು ಮತ್ತು ನಿಮ್ಮನ್ನು (ಎಲ್ಲರನ್ನೂ) ಕರೆದು ಒಟ್ಟುಗೂಡೋಣ. ನಂತರ ಮನಸಾರೆ ಪ್ರಾರ್ಥಿಸಿ ಸುಳ್ಳು ಹೇಳುವವರ ಮೇಲೆ ಅಲ್ಲಾಹನ ಶಾಪವವಿರಲೆಂದು ಬೇಡಿಕೊಳ್ಳೋಣ.”
- ಈ ವಚನವನ್ನು ಆಯತುಲ್ ಮುಬಾಹಲ (ಶಾಪಪ್ರಾರ್ಥನೆಯ ವಚನ) ಎಂದು ಕರೆಯಲಾಗುತ್ತದೆ. ಎರಡು ಗುಂಪುಗಳ ನಡುವೆ ಭಿನ್ನಮತವಿರುವ ಒಂದು ವಿಷಯವು ಮಾತುಕತೆಯಿಂದ ಅಥವಾ ಇತರ ವಿಧಾನಗಳಿಂದ ಪರಿಹಾರವಾಗದೆ, ಎರಡು ಗುಂಪುಗಳೂ ನಾವೇ ಸತ್ಯದಲ್ಲಿರುವವರು ಎಂದು ಹಟ ಹಿಡಿದರೆ, ಆ ಎರಡು ಗುಂಪುಗಳು ಸೇರಿ ಅಸತ್ಯದಲ್ಲಿರುವ ಗುಂಪಿನ ಮೇಲೆ ಅಲ್ಲಾಹನ ಶಾಪವಿರಲಿ ಎಂದು ಅಲ್ಲಾಹನಲ್ಲಿ ಮನಸಾರೆ ಪ್ರಾರ್ಥಿಸುವುದನ್ನು ಶಾಪ ಪ್ರಾರ್ಥನೆ ಎನ್ನಲಾಗುತ್ತದೆ.