Skip to content
آل عِمران /

ಆಯತ್ 183

3 : 183

ಆಯತ್ 183 of آل عِمران (3 : 183). This page carries the verse in the Uthmani script with a translation of its meaning, at a stable URL that can be cited on its own.

آل عِمران ಆಯತ್‌ಗಳು 200
ಸೂರ · آل عِمران
ಕನ್ನಡ · Hamza
3 : 183

ٱلَّذِينَ قَالُوٓاْ إِنَّ ٱللَّهَ عَهِدَ إِلَيۡنَآ أَلَّا نُؤۡمِنَ لِرَسُولٍ حَتَّىٰ يَأۡتِيَنَا بِقُرۡبَانٖ تَأۡكُلُهُ ٱلنَّارُۗ قُلۡ قَدۡ جَآءَكُمۡ رُسُلٞ مِّن قَبۡلِي بِٱلۡبَيِّنَٰتِ وَبِٱلَّذِي قُلۡتُمۡ فَلِمَ قَتَلۡتُمُوهُمۡ إِن كُنتُمۡ صَٰدِقِينَ

ಅವರು ಯಾರೆಂದರೆ, “ನಮ್ಮ ಮುಂದೆ ಒಂದು ಬಲಿ ನೀಡಿ ಅದನ್ನು ಅಗ್ನಿಯು ಭಕ್ಷಿಸುವುದನ್ನು (ಕಣ್ಣಾರೆ ನೋಡುವ) ತನಕ ನಾವು ಯಾವುದೇ ಸಂದೇಶವಾಹಕನಲ್ಲಿ ವಿಶ್ವಾಸವಿಡಬಾರದು ಎಂದು ಅಲ್ಲಾಹು ನಮ್ಮಿಂದ ಕರಾರು ಪಡೆದಿದ್ದಾನೆ” ಎಂದು ಹೇಳಿದವರು. ಹೇಳಿರಿ: “ನನಗಿಂತ ಮೊದಲು ಹಲವಾರು ಸಂದೇಶವಾಹಕರುಗಳು ಸ್ಪಷ್ಟ ಪುರಾವೆಗಳೊಂದಿಗೆ ಮತ್ತು ನೀವು ಹೇಳುತ್ತಿರುವ ಪವಾಡಗಳೊಂದಿಗೆ ನಿಮ್ಮ ಬಳಿಗೆ ಬಂದಿದ್ದರು. ಹಾಗಿದ್ದೂ ನೀವು ಸತ್ಯವಂತರಾಗಿದ್ದರೆ ನೀವೇಕೆ ಅವರನ್ನು ಕೊಲೆ ಮಾಡಿದಿರಿ?”

Explanation & meanings · 1
  1. ಇಲ್ಲಿ ಯಹೂದಿಗಳು ಹೇಳಿದ ಇನ್ನೊಂದು ಸುಳ್ಳನ್ನು ಕೂಡ ಅನಾವರಣಗೊಳಿಸಲಾಗಿದೆ. ಅದೇನೆಂದರೆ ಅವರು ಹೇಳುತ್ತಿದ್ದರು: “ಒಬ್ಬ ವ್ಯಕ್ತಿ ನಿಮ್ಮ ಬಳಿಗೆ ಬಂದು ಅಲ್ಲಾಹನಲ್ಲಿ ಪ್ರಾರ್ಥಿಸಿದಾಗ ಆಕಾಶದಿಂದ ಬೆಂಕಿ ಸುರಿದು ನೀವು ಅಲ್ಲಾಹನಿಗೆ ಕುರ್ಬಾನಿ ಮಾಡಿದ ಪ್ರಾಣಿಯನ್ನು ಅದು ಭಕ್ಷಿಸಿದರೆ ಮಾತ್ರ ಆ ವ್ಯಕ್ತಿಯನ್ನು ಪ್ರವಾದಿಯೆಂದು ನಂಬಿರಿ. ಇಲ್ಲದಿದ್ದರೆ ನಂಬಬೇಡಿ ಎಂದು ಅಲ್ಲಾಹು ನಮ್ಮೊಡನೆ ಕರಾರು ಪಡೆದಿದ್ದಾನೆ. ನೀವು ಆ ಪವಾಡವನ್ನು ತೋರಿಸಿಲ್ಲ. ಆದ್ದರಿಂದ ನಾವು ನಿಮ್ಮಲ್ಲಿ ವಿಶ್ವಾಸವಿಡುವುದಿಲ್ಲ.” ಆದರೆ ಇದು ಅವರು ಹೇಳುವ ಒಂದು ನೆಪ ಮಾತ್ರ. ಏಕೆಂದರೆ ಇದಕ್ಕಿಂತ ಮೊದಲು ಇಂತಹ ಅನೇಕ ಪವಾಡಗಳನ್ನು ತೋರಿಸಿದ ಪ್ರವಾದಿಗಳನ್ನು ಇವರ ಪೂರ್ವಜರು ತಿರಸ್ಕರಿಸಿದ್ದರು ಮತ್ತು ನಿರ್ದಯವಾಗಿ ಕೊಂದು ಹಾಕಿದ್ದರು.