Skip to content
ಅಲ್ -ಕ್ವಸಸ್ /

ಆಯತ್ 23

28 : 23

ಆಯತ್ 23 of ಅಲ್ -ಕ್ವಸಸ್ (28 : 23). This page carries the verse in the Uthmani script with a translation of its meaning, at a stable URL that can be cited on its own.

ಅಲ್ -ಕ್ವಸಸ್ ಆಯತ್‌ಗಳು 88
28 : 23

وَلَمَّا وَرَدَ مَآءَ مَدۡيَنَ وَجَدَ عَلَيۡهِ أُمَّةٗ مِّنَ ٱلنَّاسِ يَسۡقُونَ وَوَجَدَ مِن دُونِهِمُ ٱمۡرَأَتَيۡنِ تَذُودَانِۖ قَالَ مَا خَطۡبُكُمَاۖ قَالَتَا لَا نَسۡقِي حَتَّىٰ يُصۡدِرَ ٱلرِّعَآءُۖ وَأَبُونَا شَيۡخٞ كَبِيرٞ

ಅವರು ಮದ್ಯನ್ ದೇಶದ ಜಲಾಶಯದ ಬಳಿಗೆ ತಲುಪಿದಾಗ, ಅಲ್ಲಿ ತಮ್ಮ ಕುರಿಮಂದೆಗೆ ನೀರುಣಿಸುತ್ತಿರುವ ಜನರ ಗುಂಪನ್ನು ಕಂಡರು. ಅಲ್ಲಿ ಇಬ್ಬರು ಯುವತಿಯರು (ತಮ್ಮ ಕುರಿಮಂದೆಯನ್ನು) ತಡೆದು ನಿಂತಿರುವುದನ್ನೂ ಕಂಡರು. ಅವರು ಕೇಳಿದರು: “ನೀವೇನು ಮಾಡುತ್ತಿದ್ದೀರಿ?” ಆ ಯುವತಿಯರು ಉತ್ತರಿಸಿದರು: “ಈ ಕುರಿಗಾಹಿಗಳು ಇಲ್ಲಿಂದ ಹೊರಟು ಹೋಗುವ ತನಕ ನಮಗೆ ನೀರುಣಿಸಲು ಆಗುವುದಿಲ್ಲ. ನಮ್ಮ ತಂದೆ ವಯೋವೃದ್ಧರಾಗಿದ್ದಾರೆ.”

Explanation & meanings · 1
  1. ಆ ಯುವತಿಯವರು ಪ್ರವಾದಿ ಶುಐಬ್ (ಅವರ ಮೇಲೆ ಶಾಂತಿಯಿರಲಿ) ರವರ ಇಬ್ಬರು ಹೆಣ್ಣುಮಕ್ಕಳಾಗಿದ್ದರು. ಗಂಡಸರೊಂದಿಗೆ ಬೆರೆಯದಿರಲು ಅವರು ಗಂಡಸರು ನೀರುಣಿಸಿ ಹೊರಟುಹೋಗುವ ತನಕ ಅಲ್ಲಿ ಕಾಯುತ್ತಿದ್ದರು.