Skip to content
طه /

ಆಯತ್ 108

20 : 108

ಆಯತ್ 108 of طه (20 : 108). This page carries the verse in the Uthmani script with a translation of its meaning, at a stable URL that can be cited on its own.

طه ಆಯತ್‌ಗಳು 135
ಸೂರ · طه
ಕನ್ನಡ · Hamza
20 : 108

يَوۡمَئِذٖ يَتَّبِعُونَ ٱلدَّاعِيَ لَا عِوَجَ لَهُۥۖ وَخَشَعَتِ ٱلۡأَصۡوَاتُ لِلرَّحۡمَٰنِ فَلَا تَسۡمَعُ إِلَّا هَمۡسٗا

ಅಂದು ಜನರು ಕರೆ ನೀಡುವವನನ್ನು ಹಿಂಬಾಲಿಸುವರು. ಅವನ ಕರೆಗೆ ಯಾವುದೇ ವಕ್ರತೆಯಿರುವುದಿಲ್ಲ. ಪರಮ ದಯಾಮಯನ (ಅಲ್ಲಾಹನ) ಮುಂದೆ ಧ್ವನಿಗಳೆಲ್ಲವೂ ಶರಣಾಗುವುವು. ನಿಮಗೆ ಪಿಸುಮಾತುಗಳಲ್ಲದೆ ಬೇರೇನೂ ಕೇಳಿಸದು.

Explanation & meanings · 1
  1. ಭೂಮಿಯಲ್ಲಿರುವ ಪರ್ವತಗಳು, ನದಿಗಳು, ಸಮುದ್ರಗಳೆಲ್ಲವೂ ನಾಶವಾಗಿ ಭೂಮಿ ಯಾವುದೇ ಉಬ್ಬುತಗ್ಗುಗಳಿಲ್ಲದೆ ಸಮತಟ್ಟು ಮೈದಾನವಾಗಿ ಮಾರ್ಪಡುತ್ತದೆ. ನಂತರ ಒಂದು ಧ್ವನಿ ಕೇಳುತ್ತದೆ. ಜನರೆಲ್ಲರೂ ಆ ಧ್ವನಿಯನ್ನು ಹಿಂಬಾಲಿಸುತ್ತಾ ಹೋಗುತ್ತಾರೆ. ಆ ಧ್ವನಿ ಕರೆಯುವ ಕಡೆಗಲ್ಲದೆ ಅವರು ಒಂದು ಚೂರು ಕೂಡ ಅತ್ತಿತ್ತ ಚಲಿಸುವುದಿಲ್ಲ. ಅಲ್ಲಿನ ವಾತಾವರಣ ಸಂಪೂರ್ಣ ನಿಶ್ಶಬ್ದವಾಗಿರುತ್ತದೆ. ಪಿಸುಮಾತುಗಳಲ್ಲದೆ ಬೇರೇನೂ ಕೇಳುವುದಿಲ್ಲ.