Skip to content
الكَهف /

ಆಯತ್ 10

18 : 10

ಆಯತ್ 10 of الكَهف (18 : 10). This page carries the verse in the Uthmani script with a translation of its meaning, at a stable URL that can be cited on its own.

الكَهف ಆಯತ್‌ಗಳು 110
ಸೂರ · الكَهف
ಕನ್ನಡ · Hamza
18 : 10

إِذۡ أَوَى ٱلۡفِتۡيَةُ إِلَى ٱلۡكَهۡفِ فَقَالُواْ رَبَّنَآ ءَاتِنَا مِن لَّدُنكَ رَحۡمَةٗ وَهَيِّئۡ لَنَا مِنۡ أَمۡرِنَا رَشَدٗا

ಆ ಯುವಕರು ಗುಹೆಯಲ್ಲಿ ಆಶ್ರಯ ಪಡೆದ ಸಂದರ್ಭ. ಅವರು ಹೇಳಿದರು: “ನಮ್ಮ ಪರಿಪಾಲಕನೇ! ನಮಗೆ ನಿನ್ನ ಕಡೆಯ ದಯೆಯನ್ನು ನೀಡಿ ಆಶೀರ್ವದಿಸು ಮತ್ತು ನಮ್ಮ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ನಮಗೆ ಅನುಕೂಲ ಮಾಡಿಕೊಡು.”

Explanation & meanings · 1
  1. ಈ ಯುವಕರನ್ನು ‘ಅಸ್‌ಹಾಬುಲ್ ಕಹ್ಫ್’ (ಗುಹಾವಾಸಿಗಳು) ಎಂದು ಕರೆಯಲಾಗುತ್ತದೆ. ಇವರು ವಾಸವಾಗಿದ್ದ ಊರನ್ನು ದಖ್ಯಾನೂಸ್ ಎಂಬ ರಾಜ ಆಳುತ್ತಿದ್ದ. ಈತ ತನ್ನ ರಾಜ್ಯದಲ್ಲಿ ವಿಗ್ರಹಪೂಜೆ ಮತ್ತು ವಿಗ್ರಹಗಳಿಗೆ ಹರಕೆ ಹೊರುವುದನ್ನು ಕಡ್ಡಾಯಗೊಳಿಸಿದ. ಅಲ್ಲಾಹು ಕೆಲವು ಯುವಕರಿಗೆ ಏಕದೇವವಿಶ್ವಾಸದ ಕಡೆಗೆ ಮಾರ್ಗದರ್ಶನ ಮಾಡಿದ್ದ. ಅವರು ರಹಸ್ಯವಾಗಿ ಅಲ್ಲಾಹನನ್ನು ಆರಾಧಿಸುತ್ತಿದ್ದರು. ಕಾಲಕ್ರಮೇಣ, ಈ ವಿಷಯ ಊರಲ್ಲೆಲ್ಲಾ ಹಬ್ಬಿ ರಾಜನ ಕಿವಿಗೆ ಬಿತ್ತು. ಅವನು ಇವರನ್ನು ಆಸ್ಥಾನಕ್ಕೆ ಕರೆದು ವಿಚಾರಿಸಿದಾಗ ಅವರು ರಾಜನ ಮುಂದೆ ಧೈರ್ಯವಾಗಿ ಏಕದೇವವಿಶ್ವಾಸವನ್ನು ಘೋಷಿಸಿದರು. ನಂತರ ಅವರು ರಾಜನ ಶಿಕ್ಷೆಯಿಂದ ಪಾರಾಗಲು ಊರು ಬಿಟ್ಟು ಗುಹೆಯಲ್ಲಿ ಹೋಗಿ ನೆಲೆಸಿದರು.