Skip to content
يُوسُف /

ಆಯತ್ 48

12 : 48

ಆಯತ್ 48 of يُوسُف (12 : 48). This page carries the verse in the Uthmani script with a translation of its meaning, at a stable URL that can be cited on its own.

يُوسُف ಆಯತ್‌ಗಳು 111
ಸೂರ · يُوسُف
ಕನ್ನಡ · Hamza
12 : 48

ثُمَّ يَأۡتِي مِنۢ بَعۡدِ ذَٰلِكَ سَبۡعٞ شِدَادٞ يَأۡكُلۡنَ مَا قَدَّمۡتُمۡ لَهُنَّ إِلَّا قَلِيلٗا مِّمَّا تُحۡصِنُونَ

ಅದರ ನಂತರ ತೀವ್ರ ಬರಗಾಲದ ಏಳು ವರ್ಷಗಳು ಬಂದು, ನೀವು ಆ ವರ್ಷಗಳಿಗಾಗಿ ದಾಸ್ತಾನು ಮಾಡಿದ ಧಾನ್ಯಗಳೆಲ್ಲವನ್ನೂ ಅವು ತಿನ್ನುತ್ತವೆ. ನೀವು ಜೋಪಾನವಾಗಿಟ್ಟ ಸ್ವಲ್ಪಾಂಶದ ಹೊರತು.

Explanation & meanings · 1
  1. ಏಳು ಕೊಬ್ಬಿದ ಹಸುಗಳು ಎಂದರೆ ಸಮೃದ್ಧವಾದ ಏಳು ವರ್ಷಗಳು. ಏಳು ಬಡಕಲು ಹಸುಗಳು ಎಂದರೆ ಅದರ ನಂತರ ಬರುವ ಏಳು ಬರಗಾಲದ ವರ್ಷಗಳು. ಏಳು ಹಸಿರು ಪೈರುಗಳು ಎಂದರೆ ಭೂಮಿ ಫಲವತ್ತಾಗಿರುವ ಏಳು ವರ್ಷಗಳು ಮತ್ತು ಏಳು ಒಣಗಿದ ಪೈರುಗಳು ಎಂದರೆ ಭೂಮಿ ಬರಡಾಗಿರುವ ಏಳು ವರ್ಷಗಳು. ಭೂಮಿ ಫಲವತ್ತಾಗಿರುವ ಏಳು ಸಮೃದ್ಧಪೂರ್ಣ ವರ್ಷಗಳಲ್ಲಿ ಸತತವಾಗಿ ಕೃಷಿ ಮಾಡಿ, ತಿನ್ನಲು ಬೇಕಾದಷ್ಟು ಧಾನ್ಯಗಳನ್ನು ತೆಗೆದು ಉಳಿದವುಗಳನ್ನು ಅವುಗಳ ತೆನೆಗಳೊಂದಿಗೇ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಮುಂದೆ ಬರುವ ಏಳು ಬರಗಾಲದ ವರ್ಷಗಳಲ್ಲಿ ಇವು ಉಪಯೋಗಕ್ಕೆ ಬರುತ್ತವೆ.