12 : 35
ثُمَّ بَدَا لَهُم مِّنۢ بَعۡدِ مَا رَأَوُاْ ٱلۡأٓيَٰتِ لَيَسۡجُنُنَّهُۥ حَتَّىٰ حِينٖ
ನಂತರ ಆ ಎಲ್ಲಾ ಸಾಕ್ಷ್ಯಾಧಾರಗಳನ್ನು ನೋಡಿದ ಬಳಿಕವೂ ಯೂಸುಫರನ್ನು ಒಂದು ಅವಧಿಯ ತನಕ ಕಾರಾಗೃಹದಲ್ಲಿಡುವುದು ಲೇಸೆಂದು ಅವರಿಗೆ ತೋಚಿತು.
Explanation & meanings · 1
- ಯೂಸುಫರ (ಅವರ ಮೇಲೆ ಶಾಂತಿಯಿರಲಿ) ನಿರಪರಾಧಿತ್ವವು ಸಾಬೀತಾದ ಬಳಿಕವೂ ಅವರನ್ನು ಒಂದು ಅವಧಿಯ ತನಕ ಸೆರೆಯಲ್ಲಿಡುವುದು ಲೇಸೆಂದು ಆಕೆಯ ಗಂಡನಿಗೆ (ಮಂತ್ರಿಗೆ) ತೋರಿತು. ಬಹುಶಃ ಇದು ಯೂಸುಫರನ್ನು (ಅವರ ಮೇಲೆ ಶಾಂತಿಯಿರಲಿ) ತನ್ನ ಹೆಂಡತಿಯಿಂದ ದೂರವಿಡುವ ಉದ್ದೇಶದಿಂದಾಗಿರಬಹುದು.