Skip to content
هُود /

ಆಯತ್ 29

11 : 29

ಆಯತ್ 29 of هُود (11 : 29). This page carries the verse in the Uthmani script with a translation of its meaning, at a stable URL that can be cited on its own.

هُود ಆಯತ್‌ಗಳು 123
ಸೂರ · هُود
ಕನ್ನಡ · Hamza
11 : 29

وَيَٰقَوۡمِ لَآ أَسۡـَٔلُكُمۡ عَلَيۡهِ مَالًاۖ إِنۡ أَجۡرِيَ إِلَّا عَلَى ٱللَّهِۚ وَمَآ أَنَا۠ بِطَارِدِ ٱلَّذِينَ ءَامَنُوٓاْۚ إِنَّهُم مُّلَٰقُواْ رَبِّهِمۡ وَلَٰكِنِّيٓ أَرَىٰكُمۡ قَوۡمٗا تَجۡهَلُونَ

ಓ ನನ್ನ ಜನರೇ! ಇದಕ್ಕೆ ಪ್ರತಿಫಲವಾಗಿ ನಾನು ನಿಮ್ಮಲ್ಲಿ ಹಣವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದ ಹೊಣೆಯಿರುವುದು ಅಲ್ಲಾಹನಿಗೆ ಮಾತ್ರ. ನಾನು ಸತ್ಯವಿಶ್ವಾಸಿಗಳನ್ನು ದೂರ ಮಾಡುವುದಿಲ್ಲ. ನಿಶ್ಚಯವಾಗಿಯೂ ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವರು. ಆದರೆ ನಾನು ನಿಮ್ಮನ್ನು ತಿಳುವಳಿಕೆಯಿಲ್ಲದ ಜನರಂತೆ ಕಾಣುತ್ತಿದ್ದೇನೆ.

Explanation & meanings · 1
  1. ಆ ಕೆಳವರ್ಗದ ಜನರನ್ನು ನಿನ್ನ ಸಭೆಯಿಂದ ದೂರವಿಟ್ಟರೆ ನಾವು ನಿನ್ನ ಸಭೆಗೆ ಬರುತ್ತೇವೆ, ನಿನ್ನ ಮಾತನ್ನು ಕೇಳುತ್ತೇವೆ ಎಂದು ಮುಖಂಡರು ಹೇಳಿದಾಗ, ನೂಹ್ (ಅವರ ಮೇಲೆ ಶಾಂತಿಯಿರಲಿ) ಈ ಉತ್ತರವನ್ನು ನೀಡಿದರು.