Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 1 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

ವರದಿಯಾದ ಗ್ರಂಥ

ವರದಿಗಾರ

ಎಲ್ಲಾ ವರದಿಗಾರರನ್ನು ತೋರಿಸಿ (34)
"ಖಂಡಿತವಾಗಿಯೂ ನೀನು ಒಂದು ಮಹತ್ತರವಾದ ವಿಷಯದ ಬಗ್ಗೆ ಕೇಳಿದ್ದೀಯಾ. ಖಂಡಿತವಾಗಿಯೂ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭವಾಗಿದೆ: ನೀನು ಅಲ್ಲಾಹನನ್ನು ಆರಾಧಿಸು, ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡಬೇಡ (ಶಿರ್ಕ್ ಮಾಡಬೇಡ). ನಮಾಝ್ ಅನ್ನು ಸಂಸ್ಥಾಪಿಸು. ಝಕಾತ್ ಅನ್ನು ನೀಡು. ರಮದಾನ್‌ನಲ್ಲಿ ಉಪವಾಸ ಆಚರಿಸು. ಮತ್ತು ಹಜ್ಜ್ ಮಾಡು". ನಂತರ ಅವರು ಹೇಳಿದರು: "ನಾನು ನಿನಗೆ ಒಳಿತಿನ ದ್ವಾರಗಳನ್ನು ತೋರಿಸಬೇಡವೇ? ಉಪವಾಸವು ಒಂದು ಗುರಾಣಿಯಾಗಿದೆ. ನೀರು ಬೆಂಕಿಯನ್ನು ನಂದಿಸುವಂತೆ, ಸದಕಾ (ದಾನ) ಪಾಪವನ್ನು ನಂದಿಸುತ್ತದೆ. ಒಬ್ಬ ವ್ಯಕ್ತಿ ರಾತ್ರಿಯ ಮಧ್ಯದಲ್ಲಿ ಮಾಡುವ ನಮಾಝ್". ನಂತರ ಅವರು (ಕುರ್‌ಆನ್‌ನ ಈ ವಚನವನ್ನು) ಪಠಿಸಿದರು: "ಅವರ ಪಾರ್ಶ್ವಗಳು ಹಾಸಿಗೆಗಳಿಂದ ದೂರವಿರುತ್ತವೆ..." [ಸೂರಃ ಅಸ್ಸಜ್ದಾ: 16] "...ಅವರು ಮಾಡುತ್ತಿದ್ದ (ಕಾರ್ಯಗಳಿಗಾಗಿ)." [ಸೂರಃ ಅಸ್ಸಜ್ದಾ: 17] ವರೆಗೆ. ನಂತರ ಅವರು ಹೇಳಿದರು: "ನಾನು ನಿನಗೆ ವಿಷಯದ ಶಿರಸ್ಸು, ಅದರ ಸ್ತಂಭ, ಮತ್ತು ಅದರ ಉನ್ನತ ಶಿಖರದ ಬಗ್ಗೆ ತಿಳಿಸಬೇಡವೇ?" ನಾನು ಹೇಳಿದೆನು: "ಖಂಡಿತವಾಗಿ, ಓ ಅಲ್ಲಾಹನ ಸಂದೇಶವಾಹಕರೇ!" ಅವರು ಹೇಳಿದರು: "ವಿಷಯದ ಶಿರಸ್ಸು ಇಸ್ಲಾಂ ಆಗಿದೆ, ಅದರ ಸ್ತಂಭವು ನಮಾಝ್ ಆಗಿದೆ, ಮತ್ತು ಅದರ ಉನ್ನತ ಶಿಖರವು ಜಿಹಾದ್ ಆಗಿದೆ". ನಂತರ ಅವರು ಹೇಳಿದರು: "ನಾನು ನಿನಗೆ ಅದೆಲ್ಲವನ್ನೂ ನಿಯಂತ್ರಿಸುವ ವಿಷಯದ ಬಗ್ಗೆ ತಿಳಿಸಬೇಡವೇ?" ನಾನು ಹೇಳಿದೆನು: "ಖಂಡಿತವಾಗಿ, ಓ ಅಲ್ಲಾಹನ ಸಂದೇಶವಾಹಕರೇ!" ಆಗ ಅವರು ತಮ್ಮ ನಾಲಿಗೆಯನ್ನು ಹಿಡಿದುಕೊಂಡು ಹೇಳಿದರು: "ಇದನ್ನು ನಿಯಂತ್ರಿಸು". ನಾನು ಹೇಳಿದೆನು: "ಓ ಅಲ್ಲಾಹನ ಪ್ರವಾದಿಯವರೇ! ನಾವು ಮಾತನಾಡಿದ ವಿಷಯಗಳಿಗಾಗಿ ನಮ್ಮನ್ನು ಶಿಕ್ಷಿಸಲಾಗುವುದೇ?" ಆಗ ಅವರು ಹೇಳಿದರು: "ನಿನ್ನ ತಾಯಿ ನಿನ್ನನ್ನು ಕಳೆದುಕೊಳ್ಳಲಿ (ಇದು ಅರಬ್ಬರ ಒಂದು ನುಡಿಗಟ್ಟು, ಅಕ್ಷರಶಃ ಅರ್ಥವಲ್ಲ)! ಜನರ ನಾಲಿಗೆಗಳ ಕೊಯ್ಲುಗಳಲ್ಲದೆ ಬೇರೆ ಯಾವುದಾದರೂ ಅವರನ್ನು ಅವರ ಮುಖಗಳ ಮೇಲೆ (ಅಥವಾ ಅವರು ಹೇಳಿದರು: ಅವರ ಮೂಗುಗಳ ಮೇಲೆ) ನರಕದಲ್ಲಿ ಕೆಡವುತ್ತದೆಯೇ?!"
ಸಹೀಹ್ ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.