Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 43 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"ನಿಮ್ಮಲ್ಲಿ ನನಗೆ ಅತ್ಯಂತ ಪ್ರಿಯರು ಮತ್ತು ಪುನರುತ್ಥಾನ ದಿನದಂದು ನನಗೆ ಸ್ಥಾನಕ್ಕೆ ಅತ್ಯಂತ ಹತ್ತಿರದಲ್ಲಿರುವವರು ಯಾರೆಂದರೆ, ನಿಮ್ಮಲ್ಲಿ ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವವರು. ಮತ್ತು ನಿಮ್ಮಲ್ಲಿ ನನಗೆ ಅತ್ಯಂತ ಅಪ್ರಿಯರು (ದ್ವೇಷಕ್ಕೆ ಪಾತ್ರರಾದವರು) ಮತ್ತು ಪುನರುತ್ಥಾನ ದಿನದಂದು ನನ್ನ ಸ್ಥಾನದಿಂದ ಅತ್ಯಂತ ದೂರದಲ್ಲಿರುವವರು ಯಾರೆಂದರೆ, 'ಸರ್ಸಾರೂನ್', 'ಮುತಶದ್ದಿಖೂನ್' ( ಮತ್ತು 'ಮುತಫೈಹಿಖೂನ್' ". (ಇದನ್ನು ಕೇಳಿ) ಸಹಾಬಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, 'ಸರ್ಸಾರೂನ್' ಮತ್ತು 'ಮುತಶದ್ದಿಖೂನ್' ಯಾರೆಂದು ನಮಗೆ ತಿಳಿದಿದೆ, ಆದರೆ 'ಮುತಫೈಹಿಖೂನ್' ಯಾರು?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಹಂಕಾರಿಗಳು".
ಸಹೀಹ್ ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಶ್ಲೀಲವಾಗಿರಲಿಲ್ಲ ಮತ್ತು ಅಶ್ಲೀಲ ಭಾಷೆಯನ್ನು ಬಳಸುತ್ತಿರಲಿಲ್ಲ. ಅವರು ಹೇಳುತ್ತಿದ್ದರು: "ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯುತ್ತಮರು ಉತ್ತಮ ನಡವಳಿಕೆಯನ್ನು ಹೊಂದಿರುವವರು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಓ ಆಯಿಷಾ, ಖಂಡಿತವಾಗಿಯೂ ಅಲ್ಲಾಹು 'ರಫೀಖ್' (ಮೃದು ಸ್ವಭಾವದವನು) ಮತ್ತು ಅವನು 'ರಿಫ್ಖ್' (ಮೃದುತ್ವ) ಅನ್ನು ಇಷ್ಟಪಡುತ್ತಾನೆ. ಅವನು ಮೃದುತ್ವಕ್ಕೆ ನೀಡುವುದನ್ನು ಕಠೋರತೆಗೆ ನೀಡುವುದಿಲ್ಲ, ಮತ್ತು ಅದರ ಹೊರತಾದ ಬೇರೆ ಯಾವುದೇ ವಿಷಯಕ್ಕೂ ನೀಡುವುದಿಲ್ಲ".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ನಿಮ್ಮಲ್ಲಿ ಯಾರೂ (ನಿಜವಾದ) ಸತ್ಯವಿಶ್ವಾಸಿಯಾಗುವುದಿಲ್ಲ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನ್ಯಾಯಯುತವಾಗಿ ವರ್ತಿಸುವವರು ಅಲ್ಲಾಹನ ಬಳಿ ಪ್ರಕಾಶದ ಪೀಠಗಳ ಮೇಲಿರುತ್ತಾರೆ. ಅವರು ಪರಮ ದಯಾಮಯನ ಬಲಭಾಗದಲ್ಲಿರುತ್ತಾರೆ. ಅಲ್ಲಾಹನ ಎರಡು ಕೈಗಳೂ ಬಲಗೈಗಳಾಗಿವೆ. ಅವರು ಯಾರೆಂದರೆ, ತಮ್ಮ ತೀರ್ಪಿನಲ್ಲಿ, ತಮ್ಮ ಜನರ ವಿಷಯದಲ್ಲಿ ಮತ್ತು ತಮ್ಮ ಅಧೀನದಲ್ಲಿರುವವರ ವಿಷಯದಲ್ಲಿ ನ್ಯಾಯಯುತವಾಗಿ ವರ್ತಿಸುವವರು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಜನರು ಪೂರ್ವ ಪ್ರವಾದಿಗಳಿಂದ ಪಡೆದ ಮಾತುಗಳಲ್ಲಿ ಒಂದು ಏನೆಂದರೆ: ನಿನಗೆ ನಾಚಿಕೆ ಇಲ್ಲದಿದ್ದರೆ ನೀನಿಚ್ಛಿಸುವುದನ್ನು ಮಾಡು."
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
"ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯ ತಕ್ಕಡಿಯಲ್ಲಿ ಉತ್ತಮ ಗುಣಕ್ಕಿಂತಲೂ ಹೆಚ್ಚು ಭಾರವಿರುವ ಯಾವುದೇ ವಸ್ತುವಿಲ್ಲ. ಅಶ್ಲೀಲ ಮತ್ತು ಅಸಭ್ಯವಾಗಿ ಮಾತನಾಡುವವರನ್ನು ಅಲ್ಲಾಹು ದ್ವೇಷಿಸುತ್ತಾನೆ."
ಸಹೀಹ್ ಇದನ್ನು ಅಬೂದಾವೂದ್ ಮತ್ತು ತಿರ್ಮಿದಿ ವರದಿ ಮಾಡಿದ್ದಾರೆ.
"ಸುಲಭಗೊಳಿಸಿರಿ, ಕಷ್ಟಗೊಳಿಸಬೇಡಿ; ಸಿಹಿಸುದ್ದಿ ತಿಳಿಸಿರಿ, ಗಾಬರಿಗೊಳಿಸಬೇಡಿ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.