Skip to content

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು, ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು) ಎಂದು ಹೇಳುತ್ತಿದ್ದರು

ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು, ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು) ಎಂದು ಹೇಳುತ್ತಿದ್ದರು.

أَنَّ النَّبِيَّ صَلَّى اللَّهُ عَلَيْهِ وَسَلَّمَ كَانَ يَقُولُ بَيْنَ السَّجْدَتَيْنِ: «رَبِّ اغْفِرْ لِي، رَبِّ اغْفِرْ لِي».

ಇದನ್ನು ಅಬೂದಾವೂದ್, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ ಕುಳಿತುಕೊಂಡು, "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" ಎಂದು ಹೇಳುತ್ತಿದ್ದರು. "ರಬ್ಬಿಗ್ಫಿರ್ ಲೀ" ಎಂದರೆ ಅಲ್ಲಾಹನಲ್ಲಿ ಪಾಪಗಳನ್ನು ಅಳಿಸಲು ಮತ್ತು ನ್ಯೂನತೆಗಳನ್ನು ಮರೆಮಾಚಲು ಬೇಡುವುದು.

ಪದಗಳ ಅರ್ಥ

...:

ಹದೀಸಿನ ಪ್ರಯೋಜನಗಳು

ಕಡ್ಡಾಯ ಮತ್ತು ಐಚ್ಛಿಕ ನಮಾಝ್‌ಗಳಲ್ಲಿ ಎರಡು ಸುಜೂದ್‌ಗಳ ನಡುವೆ ಕುಳಿತುಕೊಳ್ಳುವಾಗ ಈ ಪ್ರಾರ್ಥನೆಯನ್ನು ಹೇಳಬೇಕು.

"ರಬ್ಬಿಗ್ಫಿರ್ ಲೀ" ಎಂದು ಹೇಳುತ್ತಾ ಇರುವುದು ಅಪೇಕ್ಷಣೀಯವಾಗಿದೆ. ಆದರೆ ಒಂದು ಸಲ ಹೇಳುವುದು ಕಡ್ಡಾಯವಾಗಿದೆ.

ಉಲ್ಲೇಖಗಳು

ಸುನನ್ ಅಬೂ ದಾವೂದ್. (2/ 154) (874).

ಸುನನು ನ್ನಸಾಈ. (2/ 231) (1145).

ಸುನನ್ ಇಬ್ನ್ ಮಾಜ. (2/ 64) (897).

ಮುಸ್ನದ್ ಅಹ್ಮದ್. (38/ 392) (23375).

ಇನ್ನಷ್ಟು (1)

نيل الأوطار (2/ 305).