ಯಾರು ಮರಣದ ಸಮಯವು ಇನ್ನೂ ಬಂದಿರದ ರೋಗಿಯನ್ನು ಸಂದರ್ಶಿಸಿ, ಅವನ ಬಳಿ ಏಳು ಬಾರಿ: 'ಮಹಾ ಅರ್ಶಿನ ಒಡೆಯನಾದ ಮಹೋನ್ನತನಾದ ಅಲ್ಲಾಹನಲ್ಲಿ ಅವನು ನಿನ್ನನ್ನು ಗುಣಪಡಿಸಬೇಕೆಂದು ನಾನು ಕೇಳುತ್ತೇನೆ' ಎಂದು ಹೇಳಿದರೆ, ಅಲ್ಲಾಹು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಮರಣದ ಸಮಯವು ಇನ್ನೂ ಬಂದಿರದ ರೋಗಿಯನ್ನು ಸಂದರ್ಶಿಸಿ, ಅವನ ಬಳಿ ಏಳು ಬಾರಿ: 'ಮಹಾ ಅರ್ಶಿನ ಒಡೆಯನಾದ ಮಹೋನ್ನತನಾದ ಅಲ್ಲಾಹನಲ್ಲಿ ಅವನು ನಿನ್ನನ್ನು ಗುಣಪಡಿಸಬೇಕೆಂದು ನಾನು ಕೇಳುತ್ತೇನೆ' ಎಂದು ಹೇಳಿದರೆ, ಅಲ್ಲಾಹು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ."
«مَنْ عَادَ مَرِيضًا، لَمْ يَحْضُرْ أَجَلُهُ فَقَالَ عِنْدَهُ سَبْعَ مِرَارٍ: أَسْأَلُ اللَّهَ الْعَظِيمَ رَبَّ الْعَرْشِ الْعَظِيمِ أَنْ يَشْفِيَكَ، إِلَّا عَافَاهُ اللَّهُ مِنْ ذَلِكَ الْمَرَضِ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮರಣದ ಸಮಯ ಸಮೀಪಿಸದ ರೋಗದಿಂದ ಬಳಲುತ್ತಿರುವ ಒಬ್ಬ ಮುಸ್ಲಿಮನನ್ನು ಇನ್ನೊಬ್ಬ ಮುಸ್ಲಿಮನು ಸಂದರ್ಶಿಸಿ, ನಂತರ ಹೀಗೆ ಪ್ರಾರ್ಥಿಸಿದರೆ: "ಮಹೋನ್ನತನಾದ ಅಲ್ಲಾಹನಲ್ಲಿ ನಾನು ಕೇಳುತ್ತೇನೆ". ಅಂದರೆ ಅವನ ಸಾರ, ಗುಣಲಕ್ಷಣಗಳು ಮತ್ತು ಕ್ರಿಯೆಗಳನ್ನು ಮುಂದಿಟ್ಟು ಕೇಳುತ್ತೇನೆ. "ಮಹಾ ಅರ್ಶಿನ ಒಡೆಯನೊಂದಿಗೆ ಅವನು ನಿನ್ನನ್ನು ಗುಣಪಡಿಸಲೆಂದು". ಇದನ್ನು ಏಳು ಬಾರಿ ಪುನರಾವರ್ತಿಸಿದರೆ, ಅಲ್ಲಾಹನು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ.
ಈ ಪ್ರಾರ್ಥನೆಯಿಂದ ರೋಗಿಗಾಗಿ ಪ್ರಾರ್ಥಿಸುವುದು ಮತ್ತು ಅದನ್ನು ಏಳು ಬಾರಿ ಪುನರಾವರ್ತಿಸುವುದು ಅಪೇಕ್ಷಣೀಯವಾಗಿದೆ.
ಸತ್ಯವಂತಿಕೆ ಮತ್ತು ಒಳಿತಿನ ಉದ್ದೇಶದಿಂದ ಯಾರ ಬಳಿ ಈ ಪ್ರಾರ್ಥನೆಯನ್ನು ಪಠಿಸಲಾಗುತ್ತದೆಯೋ ಅವರಿಗೆ ಅಲ್ಲಾಹನ ಅನುಮತಿಯಿಂದ ಗುಣಮುಖವಾಗುವುದು ಖಂಡಿತ.
ಈ ಪ್ರಾರ್ಥನೆಯನ್ನು ರಹಸ್ಯವಾಗಿ ಮತ್ತು ಬಹಿರಂಗವಾಗಿ ಪಠಿಸಬಹುದು. ಎರಡೂ ಅನುಮತಿಸಲಾಗಿದೆ. ಆದರೆ ರೋಗಿಗೆ ಕೇಳಿಸುವಂತೆ ಪಠಿಸುವುದು ಉತ್ತಮ ಮತ್ತು ಶ್ರೇಷ್ಠವಾಗಿದೆ. ಏಕೆಂದರೆ ಅದರಿಂದ ರೋಗಿಗೆ ಸಂತೋಷವನ್ನುಂಟು ಮಾಡಿದಂತೆ ಆಗುತ್ತದೆ.
ಸುನನ್ ಅಬೂ ದಾವೂದ್. (5/ 22) (3106).
ಸುನನು ತ್ತಿರ್ಮಿದಿ. (3/ 593) (2083).
ನಸಾಈಯವರ 'ಅಸ್ಸುನನುಲ್ ಕುಬ್ರಾ'. (9/ 385) (10820).
ಮುಸ್ನದ್ ಅಹ್ಮದ್. (4/ 40) (2137).
ಇನ್ನಷ್ಟು (10)
بهجة الناظرين شرح رياض الصالحين.
لسليم الهلالي (2/ 163).
تطريز رياض الصالحين.
لفيصل آل مبارك (ص537).
شرح رياض الصالحين.
لابن عثيمين (4/ 483).
كنوز رياض الصالحين.
لمجموعة من الباحثين (11/ 559).
نزهة المتقين شرح رياض الصالحين.
لمجموعة من الباحثين (1/ 689).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
5 ಗ್ರಂಥಗಳು- ಹಿಸ್ನುಲ್ ಮುಸ್ಲಿಮ್ (ಮುಸ್ಲಿಮನ ಕೋಟೆ) ಕುರ್ಆನ್ ಮತ್ತು ಸುನ್ನತ್ತಿನಲ್ಲಿರುವ ಝಿಕ್ರ್ (ಸ್ಮರಣೆ)ಗಳುحصن المسلمನಿಮ್ಮನ್ನು ಗುಣಪಡಿಸಲೆಂದು ಸರ್ವಶಕ್ತನಾದ ಅಲ್ಲಾಹನಲ್ಲಿ, ಮಹಾ ಅರ್ಶಿನ ಒಡೆಯನಲ್ಲಿ ಬೇಡುತ್ತೇನೆ."
- ಹಿಸ್ನುಲ್ ಮುಸ್ಲಿಮ್ (ಮುಸ್ಲಿಮನ ಕೋಟೆ) ಕುರ್ಆನ್ ಮತ್ತು ಸುನ್ನತ್ತಿನಲ್ಲಿರುವ ಝಿಕ್ರ್ (ಸ್ಮರಣೆ)ಗಳುحصن المسلمಅಸ್ಅಲುಲ್ಲಾಹಲ್ ಅದೀಮ್ ರಬ್ಬಲ್ ಅರ್ಶಿಲ್ ಅದೀಮ್ ಅಯ್ ಯಶ್ಫಿಯಕ್
ಇನ್ನಷ್ಟು (3)
- الذكر والدعاء والعلاج بالرقي من الكتاب والسنة"من عاد مريضاً لم يحضر أجله فقال عنده سبع مرات: أسأل الله العظيم رب العرش العظيم أن يشفيك، إلَّا عافاه الله من ذلك المرض" .
- تطبيق القرآن والأذكارالرقية الشرعيةأَسْأَلُ اللَّهَ الْعَظِيمَ رَبَّ العَرْشِ العَظِيمِ أَنْ يَشْفِيَكَ (سبع مرات)[2].
- رياض الصالحينرياض الصالحين مع فوائد وهدايات - 5«مَنْ عَادَ مريضاً لَمْ يَحْضُرْهُ أجَلُهُ، فَقَالَ عندهُ سبعَ مَرَّات: أسألُ اللهَ العَظيم ربَّ العرشِ العظيمِ أنْ يَشْفيَكَ، إلَّا عَافاه اللهُ من ذلك المرض».