Skip to content

ಇವೆರಡನ್ನು ನನ್ನ ಸಮುದಾಯದ ಪುರುಷರಿಗೆ ನಿಷೇಧಿಸಲಾಗಿದೆ ಮತ್ತು ಮಹಿಳೆಯರಿಗೆ ಅನುಮತಿಸಲಾಗಿದೆ

ಅಲಿ ಬಿನ್ ಅಬೂತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಎಡಗೈಯಲ್ಲಿ ರೇಷ್ಮೆಯನ್ನು ಮತ್ತು ಬಲಗೈಯಲ್ಲಿ ಬಂಗಾರವನ್ನು ಎತ್ತಿ ಹಿಡಿಯುತ್ತಾ ಹೇಳಿದರು: "ಇವೆರಡನ್ನು ನನ್ನ ಸಮುದಾಯದ ಪುರುಷರಿಗೆ ನಿಷೇಧಿಸಲಾಗಿದೆ ಮತ್ತು ಮಹಿಳೆಯರಿಗೆ ಅನುಮತಿಸಲಾಗಿದೆ."

أَخَذَ رَسُولُ اللَّهِ صَلَّى اللَّهُ عَلَيْهِ وَسَلَّمَ حَرِيرًا بِشِمَالِهِ، وَذَهَبًا بِيَمِينِهِ، ثُمَّ رَفَعَ بِهِمَا يَدَيْهِ، فَقَالَ: «إِنَّ هَذَيْنِ حَرَامٌ عَلَى ذُكُورِ أُمَّتِي، حِلٌّ لِإِنَاثِهِمْ».

ಇದನ್ನು ಅಬೂದಾವೂದ್, ನಸಾಈ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಎಡಗೈಯಲ್ಲಿ ರೇಷ್ಮೆ ವಸ್ತ್ರವನ್ನು ಅಥವಾ ಅದರ ಒಂದು ತುಂಡನ್ನು ಮತ್ತು ತಮ್ಮ ಬಲಗೈಯಲ್ಲಿ ಬಂಗಾರದ ಒಡವೆ ಅಥವಾ ಬಂಗಾರದ ಬೇರೆ ವಸ್ತುವನ್ನು ಹಿಡಿದು ಹೇಳಿದರು: "ರೇಷ್ಮೆ ಮತ್ತು ಬಂಗಾರವನ್ನು ಧರಿಸುವುದನ್ನು ಪುರುಷರಿಗೆ ನಿಷೇಧಿಸಲಾಗಿದೆ ಮತ್ತು ಮಹಿಳೆಯರಿಗೆ ಅನುಮತಿಸಲಾಗಿದೆ."

ಹದೀಸಿನ ಪ್ರಯೋಜನಗಳು

ಸನದಿ ಹೇಳಿದರು: "ನಿಷೇಧಿಸಲಾಗಿದೆ ಎಂದರೆ ಅವುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಆದರೆ ಅವುಗಳನ್ನು ಖರೀದಿ ಮತ್ತು ಮಾರಾಟಕ್ಕಾಗಿ ಹಣದ ರೂಪದಲ್ಲಿ ಬಳಸಲು ಎಲ್ಲರಿಗೂ ಅನುಮತಿಯಿದೆ. ಪಾತ್ರೆ ತಯಾರಿಸಲು ಬಂಗಾರವನ್ನು ಬಳಸುವುದು ಅಥವಾ ಬಂಗಾರದ ಪಾತ್ರೆಗಳನ್ನು ಉಪಯೋಗಿಸುವುದು ಎಲ್ಲರಿಗೂ ನಿಷಿದ್ಧವಾಗಿದೆ."

ಮಹಿಳೆಯರಿಗೆ ಅಲಂಕಾರಗಳ ಆವಶ್ಯಕತೆಯಿರುವುದರಿಂದ ಇಸ್ಲಾಮೀ ಧರ್ಮಶಾಸ್ತ್ರವು ಈ ವಿಷಯದಲ್ಲಿ ಅವರಿಗೆ ರಿಯಾಯಿತಿ ನೀಡಿದೆ.

ಉಲ್ಲೇಖಗಳು

ಸುನನ್ ಅಬೂ ದಾವೂದ್. (6/ 165) (4057).

ಸುನನು ನ್ನಸಾಈ. (8/ 160) (5144).

ಸುನನ್ ಇಬ್ನ್ ಮಾಜ. (4/ 594) (3595).

ಇನ್ನಷ್ಟು (4)

شرح رياض الصالحين.

لابن عثيمين (2/ 613).

بهجة الناظرين شرح رياض الصالحين.

لسليم الهلالي (2/ 99).