Skip to content

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, "ಅಸ್ಸಲಾಮು ಅಲೈಕುಮ್" (ನಿಮ್ಮ ಮೇಲೆ ಶಾಂತಿ ಇರಲಿ) ಎಂದು ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಪ್ರತ್ಯುತ್ತರ ನೀಡಿದರು, ನಂತರ ಆ ವ್ಯಕ್ತಿ ಕುಳಿತುಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹತ್ತು (ಪುಣ್ಯಗಳು)".

ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, "ಅಸ್ಸಲಾಮು ಅಲೈಕುಮ್" (ನಿಮ್ಮ ಮೇಲೆ ಶಾಂತಿ ಇರಲಿ) ಎಂದು ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಪ್ರತ್ಯುತ್ತರ ನೀಡಿದರು, ನಂತರ ಆ ವ್ಯಕ್ತಿ ಕುಳಿತುಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹತ್ತು (ಪುಣ್ಯಗಳು)". ನಂತರ ಇನ್ನೊಬ್ಬ ವ್ಯಕ್ತಿ ಬಂದು, "ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್" (ನಿಮ್ಮ ಮೇಲೆ ಶಾಂತಿ ಮತ್ತು ಅಲ್ಲಾಹುವಿನ ಕರುಣೆ ಇರಲಿ) ಎಂದು ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಪ್ರತ್ಯುತ್ತರ ನೀಡಿದರು, ನಂತರ ಆ ವ್ಯಕ್ತಿ ಕುಳಿತುಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಪ್ಪತ್ತು (ಪುಣ್ಯಗಳು)". ನಂತರ ಮತ್ತೊಬ್ಬ ವ್ಯಕ್ತಿ ಬಂದು, "ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು" (ನಿಮ್ಮ ಮೇಲೆ ಶಾಂತಿ, ಅಲ್ಲಾಹುವಿನ ಕರುಣೆ ಮತ್ತು ಅವನ ಆಶೀರ್ವಾದಗಳು ಇರಲಿ) ಎಂದು ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಪ್ರತ್ಯುತ್ತರ ನೀಡಿದರು, ನಂತರ ಆ ವ್ಯಕ್ತಿ ಕುಳಿತುಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮೂವತ್ತು (ಪುಣ್ಯಗಳು)".

جَاءَ رَجُلٌ إِلَى النَّبِيِّ صَلَّى اللهُ عَلَيْهِ وَسَلَّمَ فَقَالَ: السَّلَامُ عَلَيْكُمْ، فَرَدَّ عَلَيْهِ ثُمَّ جَلَسَ، فَقَالَ النَّبِيُّ صَلَّى اللهُ عَلَيْهِ وَسَلَّمَ: «عَشْرٌ» ثُمَّ جَاءَ آخَرُ فَقَالَ: السَّلَامُ عَلَيْكُمْ وَرَحْمَةُ اللَّهِ، فَرَدَّ عَلَيْهِ فَجَلَسَ، فَقَالَ: «عِشْرُونَ» ثُمَّ جَاءَ آخَرُ فَقَالَ: السَّلَامُ عَلَيْكُمْ وَرَحْمَةُ اللَّهِ وَبَرَكَاتُهُ، فَرَدَّ عَلَيْهِ فَجَلَسَ، فَقَالَ: «ثَلَاثُونَ».

ಇದನ್ನು ಅಬೂದಾವೂದ್, ತಿರ್ಮಿದಿ, ಅಹ್ಮದ್ ಮತ್ತು ದಾರಿಮಿ ವರದಿ ಮಾಡಿದ್ದಾರೆ.
ಹಸನ್.
ವಿವರಣೆ

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು "ಅಸ್ಸಲಾಮು ಅಲೈಕುಮ್" ಎಂದು ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಪ್ರತ್ಯುತ್ತರ ನೀಡಿದರು. ನಂತರ ಆ ವ್ಯಕ್ತಿ ಕುಳಿತುಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನಿಗೆ ಹತ್ತು ಪುಣ್ಯಗಳು ಬರೆಯಲ್ಪಟ್ಟಿವೆ. ನಂತರ ಇನ್ನೊಬ್ಬ ವ್ಯಕ್ತಿ ಬಂದು "ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್" ಎಂದು ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಪ್ರತ್ಯುತ್ತರ ನೀಡಿದರು. ನಂತರ ಆ ವ್ಯಕ್ತಿ ಕುಳಿತುಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನಿಗೆ ಇಪ್ಪತ್ತು ಪುಣ್ಯಗಳು. ನಂತರ ಮತ್ತೊಬ್ಬ ವ್ಯಕ್ತಿ ಬಂದು "ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು" ಎಂದು ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಪ್ರತ್ಯುತ್ತರ ನೀಡಿದರು. ನಂತರ ಆ ವ್ಯಕ್ತಿ ಕುಳಿತುಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನಿಗೆ ಮೂವತ್ತು ಪುಣ್ಯಗಳು; ಅಂದರೆ, ಪ್ರತಿಯೊಂದು ಪದಕ್ಕೂ ಹತ್ತು ಪುಣ್ಯಗಳು.

ಹದೀಸಿನ ಪ್ರಯೋಜನಗಳು

ಬರುವ ವ್ಯಕ್ತಿಯು ಕುಳಿತಿರುವವರಿಗೆ ಮೊದಲು ಸಲಾಮ್ ಹೇಳಬೇಕು.

ಸಲಾಮ್‌ನ ಪದಗಳನ್ನು ಹೆಚ್ಚಿಸುವುದರಿಂದ ಪುಣ್ಯಗಳು ಹೆಚ್ಚಾಗುತ್ತವೆ.

ಸಲಾಮ್ ಹೇಳುವ ಅತ್ಯಂತ ಪರಿಪೂರ್ಣ ರೂಪ: "ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು", ಮತ್ತು ಪ್ರತ್ಯುತ್ತರ ನೀಡುವ ಅತ್ಯುತ್ತಮ ರೂಪ: "ವಅಲೈಕುಮುಸ್ಸಲಾಮ್ ವರಹ್ಮತುಲ್ಲಾಹಿ ವಬರಕಾತುಹು".

ಸಲಾಮ್ ಹೇಳುವುದಕ್ಕೆ ಮತ್ತು ಪ್ರತ್ಯುತ್ತರ ನೀಡುವುದಕ್ಕೆ ವಿಭಿನ್ನ ಹಂತಗಳಿವೆ. ಹಾಗೆಯೇ ಅದರ ಪುಣ್ಯಗಳೂ ವಿಭಿನ್ನವಾಗಿವೆ.

ಜನರಿಗೆ ಒಳಿತನ್ನು ಕಲಿಸಬೇಕು ಮತ್ತು ಉತ್ತಮವಾದುದನ್ನು ಗಳಿಸಲು ಅವರನ್ನು ಪ್ರೇರೇಪಿಸಬೇಕೆಂದು ತಿಳಿಸಲಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: "ಸಲಾಮ್ ಹೇಳುವವನು "ವರಹ್ಮತುಲ್ಲಾಹ್" ಎಂದು ಹೆಚ್ಚಿಸಿದರೆ, ಪ್ರತ್ಯುತ್ತರ ನೀಡುವವನು "ವಬರಕಾತುಹು" ಎಂದು ಹೆಚ್ಚಿಸುವುದು ಮುಸ್ತಹಬ್ (ಅಪೇಕ್ಷಣೀಯ) ಆಗಿದೆ. ಒಂದು ವೇಳೆ ಸಲಾಮ್ ಹೇಳುವವನು "ವಬರಕಾತುಹು" ಎಂದು ಹೆಚ್ಚಿಸಿದರೆ, ಪ್ರತ್ಯುತ್ತರದಲ್ಲಿಯೂ ಹೆಚ್ಚುವರಿ ಪದಗಳನ್ನು ಸೇರಿಸುವುದು ನಿಯಮಗೊಳಿಸಲಾಗಿದೆಯೇ? ಹಾಗೆಯೇ, ಸಲಾಮ್ ಹೇಳುವವನು "ವಬರಕಾತುಹು" ಗಿಂತ ಹೆಚ್ಚಿನ ಪದಗಳನ್ನು ಸೇರಿಸಿದರೆ, ಹಾಗೆ ಮಾಡುವುದು ಅವನಿಗೆ ನಿಯಮಗೊಳಿಸಲಾಗಿದೆಯೇ? ಇಮಾಮ್ ಮಾಲಿಕ್ ಅವರು 'ಮುವತ್ತಾ'ದಲ್ಲಿ ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ ಮಾಡಿದ್ದಾರೆ: "ಸಲಾಮ್ 'ಬರಕತ್' (ವಬರಕಾತುಹು) ದೊಂದಿಗೆ ಕೊನೆಗೊಳ್ಳುತ್ತದೆ."

ಉಲ್ಲೇಖಗಳು

ಸುನನ್ ಅಬೂ ದಾವೂದ್. (7/ 491) (5195).

ಸುನನು ತ್ತಿರ್ಮಿದಿ. (4/ 420) (2689).

ಮುಸ್ನದ್ ಅಹ್ಮದ್. (33/ 170) (19948).

ಇನ್ನಷ್ಟು (8)

كنوز رياض الصالحين.

لمجموعة من الباحثين (11/ 246).

بهجة الناظرين.

لسليم الهلالي (3/ 132).

نزهة المتقين.

لمجموعة من الباحثين (1/ 663).

شرح رياض الصالحين.

لابن عثيمين (4/ 399).