Skip to content

"ಅಲ್ಲಾಹನು ಯಹೂದಿಗಳು ಮತ್ತು ಕ್ರೈಸ್ತರನ್ನು ಶಪಿಸಲಿ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡಿಕೊಂಡರು."

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಗುಣಮುಖರಾಗದ ತಮ್ಮ ಕಾಯಿಲೆಯಲ್ಲಿದ್ದಾಗ ಹೇಳಿದರು:

"ಅಲ್ಲಾಹನು ಯಹೂದಿಗಳು ಮತ್ತು ಕ್ರೈಸ್ತರನ್ನು ಶಪಿಸಲಿ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡಿಕೊಂಡರು." ಆಯಿಶ ಹೇಳಿದರು: "ಆ ನಿಷೇಧವಿಲ್ಲದಿರುತ್ತಿದ್ದರೆ ಅವರ ಸಮಾಧಿಯನ್ನು ಹೊರಗೆ ಕಾಣುವಂತೆ ನಿರ್ಮಿಸಲಾಗುತ್ತಿತ್ತು, ಆದರೆ ಜನರು ಅದನ್ನು ಮಸೀದಿಯನ್ನಾಗಿ ಮಾಡಬಹುದೆಂಬ ಭಯವಿತ್ತು."

«لَعَنَ اللهُ الْيَهُودَ وَالنَّصَارَى، اتَّخَذُوا قُبُورَ أَنْبِيَائِهِمْ مَسَاجِدَ» قَالَتْ: فَلَوْلَا ذَاكَ أُبْرِزَ قَبْرُهُ، غَيْرَ أَنَّهُ خُشِيَ أَنْ يُتَّخَذَ مَسْجِدًا.

ಬುಖಾರಿ ಮತ್ತು ಮುಸ್ಲಿಂ.
ಸಹೀಹ್
ವಿವರಣೆ

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತು ಅದರಲ್ಲಿಯೇ ಮರಣಹೊಂದಿದ ತಮ್ಮ ಕಾಯಿಲೆಯಲ್ಲಿ ಹೇಳಿದರು: ಅಲ್ಲಾಹು ಯಹೂದಿಗಳು ಮತ್ತು ಕ್ರೈಸ್ತರನ್ನು ಶಪಿಸಲಿ, ಮತ್ತು ಅವರನ್ನು ತನ್ನ ಕರುಣೆಯಿಂದ ದೂರವಿಡಲಿ. ಅದೇಕೆಂದರೆ ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡಿಕೊಂಡರು. ಅಂದರೆ, ಅವುಗಳ ಮೇಲೆ ಕಟ್ಟಡಗಳನ್ನು ನಿರ್ಮಿಸಿದರು, ಅಥವಾ ಅವುಗಳ ಬಳಿ ಅಥವಾ ಅವುಗಳ ದಿಕ್ಕಿಗೆ ಪ್ರಾರ್ಥಿಸಿದರು. ನಂತರ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಆ ನಿಷೇಧ ಮತ್ತು ಎಚ್ಚರಿಕೆ ಇಲ್ಲದಿರುತ್ತಿದ್ದರೆ, ಮತ್ತು ಯಹೂದಿಗಳು ಹಾಗೂ ಕ್ರೈಸ್ತರು ತಮ್ಮ ಪ್ರವಾದಿಗಳ ಸಮಾಧಿಗಳೊಂದಿಗೆ ಮಾಡಿದಂತೆ ಜನರು ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಯೊಂದಿಗೂ ಮಾಡಬಹುದೆಂಬ ಭಯವು ಸಹಾಬಿಗಳಿಗೆ ಇಲ್ಲದಿರುತ್ತಿದ್ದರೆ, ಅವರ ಸಮಾಧಿಯನ್ನು ಹೊರಗೆ ಕಾಣುವಂತೆ ನಿರ್ಮಿಸಲಾಗುತ್ತಿತ್ತು ಮತ್ತು ಪ್ರದರ್ಶಿಸಲಾಗುತ್ತಿತ್ತು.

ಹದೀಸಿನ ಪ್ರಯೋಜನಗಳು

ಇದು ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅಂತಿಮ ಉಪದೇಶಗಳಲ್ಲಿ ಒಂದಾಗಿದ್ದು, ಅದರ ಪ್ರಾಮುಖ್ಯತೆ ಮತ್ತು ಕಾಳಜಿಯನ್ನು ಸೂಚಿಸುತ್ತದೆ.

ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡುವುದಕ್ಕೆ ಮತ್ತು ಜನಾಝಾ ನಮಾಝ್ ಹೊರತುಪಡಿಸಿ ಸಮಾಧಿಗಳ ಬಳಿ ನಮಾಝ್ ನಿರ್ವಹಿಸುವುದಕ್ಕೆ ಇದು ಖಚಿತವಾದ ನಿಷೇಧ ಮತ್ತು ಉಗ್ರವಾದ ನಿಷೇಧವಾಗಿದೆ. ಏಕೆಂದರೆ ಅದು ಮೃತರನ್ನು ವೈಭವೀಕರಿಸಲು, ಅವರ ಸಮಾಧಿಯ ಸುತ್ತಲೂ ಪ್ರದಕ್ಷಿಣೆ (ತವಾಫ್) ಹಾಕಲು, ಅದರ ಮೂಲೆಗಳನ್ನು ಸ್ಪರ್ಶಿಸಲು ಮತ್ತು ಅವರ ಹೆಸರನ್ನು ಕರೆದು ಅರಚಲು ಒಂದು ಕಾರಣವಾಗಬಹುದಾದ ಸಾಧ್ಯತೆಯಿದೆ. ಇವೆಲ್ಲವೂ ಶಿರ್ಕ್ (ಸೃಷ್ಟಿಪೂಜೆ) ಮತ್ತು ಅದಕ್ಕೆ ಒಯ್ಯುವ ಮಾರ್ಗಗಳಾಗಿವೆ.

ತೌಹೀದಿನ (ಅಲ್ಲಾಹುವಿನ ಏಕತ್ವ) ಬಗ್ಗೆ ಪ್ರವಾದಿಯರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇದ್ದ ತೀವ್ರ ಕಾಳಜಿಯನ್ನು ತಿಳಿಸಲಾಗಿದೆ. ಅವರು ಅದಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದರು ಮತ್ತು ಸಮಾಧಿಗಳನ್ನು ಮಿತಿಮೀರಿ ಗೌರವಿಸುವುದರ ಬಗ್ಗೆ ಅತಿಯಾಗಿ ಭಯಪಡುತ್ತಿದ್ದರು. ಏಕೆಂದರೆ ಅದು ಶಿರ್ಕ್ (ಸೃಷ್ಟಿಪೂಜೆ) ಗೆ ಕಾರಣವಾಗುತ್ತದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಯ ಬಳಿ ಶಿರ್ಕ್ ಮಾಡುವುದರಿಂದ ಅಲ್ಲಾಹು ಅವರನ್ನು ರಕ್ಷಿಸಿದನು. ಹಾಗೆಯೇ ಅವರ ಸಹಚರರಿಗೆ ಮತ್ತು ಅವರ ನಂತರ ಬಂದವರಿಗೆ ಅವರ ಸಮಾಧಿಯನ್ನು ಬಹಿರಂಗಗೊಳ್ಳದಂತೆ ರಕ್ಷಿಸಲು ಪ್ರೇರೇಪಿಸಿದನು.

ಸಹಾಬಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಉಪದೇಶದಂತೆ ನಡೆದರು ಮತ್ತು ತೌಹೀದ್‌ನ ವಿಷಯದಲ್ಲಿ ಕಾಳಜಿ ವಹಿಸಿದರು.

ಯಹೂದಿಗಳು ಮತ್ತು ಕ್ರೈಸ್ತರನ್ನು ಅನುಕರಿಸುವುದನ್ನು ನಿಷೇಧಿಸಲಾಗಿದೆ ಮತ್ತು ಸಮಾಧಿಗಳ ಮೇಲೆ ಕಟ್ಟಡಗಳನ್ನು ನಿರ್ಮಿಸುವುದು ಅವರ ಸಂಪ್ರದಾಯವೆಂದು ಹೇಳಲಾಗಿದೆ.

ಮಸೀದಿ ನಿರ್ಮಿಸಲಾಗಿರದಿದ್ದರೂ ಸಹ ಸಮಾಧಿಗಳ ಬಳಿ ಅಥವಾ ಅವುಗಳಿಗೆ ಮುಖ ಮಾಡಿ ನಮಾಝ್ ನಿರ್ವಹಿಸುವುದು ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡುವುದರಲ್ಲಿ ಒಳಪಡುತ್ತದೆ.

ಉಲ್ಲೇಖಗಳು

ಸಹೀಹುಲ್ ಬುಖಾರಿ. (2/ 102) (1390).

ಸಹೀಹ್ ಮುಸ್ಲಿಮ್. (1/ 376) (529).

ಇನ್ನಷ್ಟು (6)

تيسير العلام شرح عمدة الأحكام.

لعبد الله البسام (ص292).

تنبيه الأفهام شرح عمدة الأحكام.

لابن عثيمين (2/ 376).

الإلمام بشرح عمدة الأحكام.

لإسماعيل الأنصاري (1/ 236).