Skip to content
الأعرَاف /

ಆಯತ್ 164

7 : 164
الأعرَاف ಆಯತ್‌ಗಳು 206
ಸೂರ · الأعرَاف
ಕನ್ನಡ · Hamza
7 : 164

وَإِذۡ قَالَتۡ أُمَّةٞ مِّنۡهُمۡ لِمَ تَعِظُونَ قَوۡمًا ٱللَّهُ مُهۡلِكُهُمۡ أَوۡ مُعَذِّبُهُمۡ عَذَابٗا شَدِيدٗاۖ قَالُواْ مَعۡذِرَةً إِلَىٰ رَبِّكُمۡ وَلَعَلَّهُمۡ يَتَّقُونَ

ಅವರಲ್ಲಿ ಒಂದು ಗುಂಪು ಜನರು ಹೇಳಿದರು: “ನೀವೇಕೆ ಈ ಜನರಿಗೆ ಉಪದೇಶ ಮಾಡುತ್ತೀರಿ. ಅಲ್ಲಾಹು ಅವರನ್ನು ನಾಶ ಮಾಡುವನು ಅಥವಾ ಕಠಿಣವಾಗಿ ಶಿಕ್ಷಿಸುವನು.” ಅವರು ಹೇಳಿದರು: “ನಿಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ನಮ್ಮನ್ನು ದೋಷಮುಕ್ತಗೊಳಿಸುವುದಕ್ಕಾಗಿ ಮತ್ತು ಅವರು ದೇವಭಯವುಳ್ಳವರಾಗುವುದಕ್ಕಾಗಿ (ನಾವು ಹೀಗೆ ಮಾಡುತ್ತಿದ್ದೇವೆ).”

Explanation & meanings · 1
  1. ಯಹೂದಿಗಳಲ್ಲಿದ್ದ ನೀತಿವಂತರಲ್ಲಿ ಕೆಲವರು ದುಷ್ಟರಿಗೆ ಬುದ್ಧಿವಾದ ಹೇಳಿದಾಗ, ಇತರರು ಹೇಳಿದರು: “ಅವರಿಗೆ ಬುದ್ಧಿವಾದ ಹೇಳಲು ಹೋಗಬೇಡಿ. ಅವರು ಹೇಗೂ ಅಲ್ಲಾಹನ ಶಿಕ್ಷೆಗೆ ಪಾತ್ರರಾಗುವವರು. ಅವರಿಗೆ ಉಪದೇಶ ಮಾಡುವುದು ವ್ಯರ್ಥ.” ಆದರೆ ಇದು ಸರಿಯಾದ ನಿಲುವಲ್ಲ. ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು ಸತ್ಯವಿಶ್ವಾಸಿಯ ಗುಣವಾಗಿದೆ.