Skip to content
الأنعَام /

ಆಯತ್ 94

6 : 94

ಆಯತ್ 94 of الأنعَام (6 : 94). This page carries the verse in the Uthmani script with a translation of its meaning, at a stable URL that can be cited on its own.

الأنعَام ಆಯತ್‌ಗಳು 165
ಸೂರ · الأنعَام
ಕನ್ನಡ · Hamza
6 : 94

وَلَقَدۡ جِئۡتُمُونَا فُرَٰدَىٰ كَمَا خَلَقۡنَٰكُمۡ أَوَّلَ مَرَّةٖ وَتَرَكۡتُم مَّا خَوَّلۡنَٰكُمۡ وَرَآءَ ظُهُورِكُمۡۖ وَمَا نَرَىٰ مَعَكُمۡ شُفَعَآءَكُمُ ٱلَّذِينَ زَعَمۡتُمۡ أَنَّهُمۡ فِيكُمۡ شُرَكَٰٓؤُاْۚ لَقَد تَّقَطَّعَ بَيۡنَكُمۡ وَضَلَّ عَنكُم مَّا كُنتُمۡ تَزۡعُمُونَ

(ಅವರೊಡನೆ ಹೇಳಲಾಗುವುದು): “ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದಂತೆ, ನೀವು ಒಬ್ಬೊಬ್ಬರಾಗಿ ನಮ್ಮ ಬಳಿಗೆ ಬಂದಿದ್ದೀರಿ. ನಾವು ನಿಮಗೆ ನೀಡಿದ ಸವಲತ್ತುಗಳನ್ನು ನಿಮ್ಮ ಬೆನ್ನ ಹಿಂದೆ ಬಿಟ್ಟು ಬಂದಿದ್ದೀರಿ. ನೀವು (ಅಲ್ಲಾಹನ) ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ಶಿಫಾರಸುಗಾರರನ್ನು ನಾವು ನಿಮ್ಮ ಜೊತೆಗೆ ಕಾಣುತ್ತಿಲ್ಲ. ನಿಮ್ಮ ಆ ಸಂಬಂಧಗಳು ಮುರಿದು ಬಿದ್ದಿವೆ. ನೀವು (ದೇವರುಗಳೆಂದು) ವಾದಿಸುತ್ತಿದ್ದವರೆಲ್ಲರೂ ನಿಮ್ಮನ್ನು ಬಿಟ್ಟು ಕಣ್ಮರೆಯಾಗಿದ್ದಾರೆ.”

Explanation & meanings · 1
  1. ಅಲ್ಲಾಹನ ಬಳಿ ಶಿಫಾರಸು ಮಾಡುತ್ತಾರೆ ಮತ್ತು ಅಲ್ಲಾಹನಿಗೆ ಸಮೀಪಗೊಳಿಸುತ್ತಾರೆಂಬ ನಂಬಿಕೆಯಿಂದ ಸತ್ಯನಿಷೇಧಿಗಳು ಅನೇಕ ದೇವರುಗಳನ್ನು ಆರಾಧಿಸುತ್ತಿದ್ದರು. ಆದರೆ ಅವರು ಪರಲೋಕಕ್ಕೆ ಬರುವಾಗ ಈ ದೇವರುಗಳೆಲ್ಲರೂ ಕಣ್ಮರೆಯಾಗಿರುತ್ತಾರೆ.