Skip to content
يسٓ /

ಆಯತ್ 47

36 : 47

ಆಯತ್ 47 of يسٓ (36 : 47). This page carries the verse in the Uthmani script with a translation of its meaning, at a stable URL that can be cited on its own.

يسٓ ಆಯತ್‌ಗಳು 83
ಸೂರ · يسٓ
ಕನ್ನಡ · Hamza
36 : 47

وَإِذَا قِيلَ لَهُمۡ أَنفِقُواْ مِمَّا رَزَقَكُمُ ٱللَّهُ قَالَ ٱلَّذِينَ كَفَرُواْ لِلَّذِينَ ءَامَنُوٓاْ أَنُطۡعِمُ مَن لَّوۡ يَشَآءُ ٱللَّهُ أَطۡعَمَهُۥٓ إِنۡ أَنتُمۡ إِلَّا فِي ضَلَٰلٖ مُّبِينٖ

“ಅಲ್ಲಾಹು ನಿಮಗೆ ಒದಗಿಸಿದ ಸಂಪತ್ತಿನಿಂದ ಖರ್ಚು ಮಾಡಿರಿ” ಎಂದು ಅವರೊಡನೆ ಹೇಳಲಾದರೆ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳುತ್ತಾರೆ: “ಅಲ್ಲಾಹು ಇಚ್ಛಿಸಿದರೆ ಅವನೇ ಆಹಾರ ನೀಡಬಹುದಾದ ಈ ಜನರಿಗೆ ನಾವೇಕೆ ಆಹಾರ ನೀಡಬೇಕು? ನಿಜಕ್ಕೂ ನೀವು ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ.”

Explanation & meanings · 2
  1. ಅಂದರೆ ಬಡವರು, ನಿರ್ಗತಿಕರು ಮುಂತಾದವರಿಗೆ ದಾನ ಮಾಡಿರಿ.
  2. ಅವರು ಬಡವರಾಗಿರಬೇಕು ಎಂಬುದು ಅಲ್ಲಾಹನ ನಿರ್ಧಾರವಾಗಿದೆ. ಅವನು ಇಚ್ಛಿಸುತ್ತಿದ್ದರೆ ಅವರನ್ನು ಶ್ರೀಮಂತರನ್ನಾಗಿ ಮಾಡುತ್ತಿದ್ದನು. ನಾವು ಅವರಿಗೆ ದಾನ ಮಾಡಬೇಕೆಂದು ಹೇಳುವುದು ಅಲ್ಲಾಹನ ನಿರ್ಧಾರಕ್ಕೆ ವಿರುದ್ಧವಾಗುತ್ತದೆ. ಇದು ಸ್ಪಷ್ಟ ದುರ್ಮಾರ್ಗವಾಗಿದೆ ಎಂದು ಅವರು ಹೇಳುತ್ತಿದ್ದರು.