Skip to content
طه /

ಆಯತ್ 94

20 : 94

ಆಯತ್ 94 of طه (20 : 94). This page carries the verse in the Uthmani script with a translation of its meaning, at a stable URL that can be cited on its own.

طه ಆಯತ್‌ಗಳು 135
ಸೂರ · طه
ಕನ್ನಡ · Hamza
20 : 94

قَالَ يَبۡنَؤُمَّ لَا تَأۡخُذۡ بِلِحۡيَتِي وَلَا بِرَأۡسِيٓۖ إِنِّي خَشِيتُ أَن تَقُولَ فَرَّقۡتَ بَيۡنَ بَنِيٓ إِسۡرَٰٓءِيلَ وَلَمۡ تَرۡقُبۡ قَوۡلِي

ಹಾರೂನ್ ಹೇಳಿದರು: “ನನ್ನ ತಾಯಿಯ ಮಗನೇ! ನನ್ನ ಗಡ್ಡವನ್ನು ಅಥವಾ ನನ್ನ ತಲೆಯನ್ನು ಹಿಡಿಯಬೇಡ. ನೀನು ಇಸ್ರಾಯೇಲ್ ಮಕ್ಕಳ ನಡುವೆ ಭಿನ್ನಮತ ಎಬ್ಬಿಸಿರುವೆ. ನನ್ನ ಆಜ್ಞೆಯನ್ನು ಕೂಡ ನೀನು ಕಾಯಲಿಲ್ಲ ಎಂದು ನೀನು ಹೇಳಬಹುದೆಂದು ನನಗೆ ಭಯವಾಯಿತು.”

Explanation & meanings · 1
  1. ವಾಸ್ತವವಾಗಿ ಹಾರೂನ್ (ಅವರ ಮೇಲೆ ಶಾಂತಿಯಿರಲಿ) ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದರು. ಅವರು ವಿಗ್ರಹಾರಾಧನೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ಆದರೆ ಎಷ್ಟೇ ತಿಳಿಹೇಳಿದರೂ ಜನರು ಅವರ ಮಾತನ್ನು ಕೇಳುತ್ತಿರಲಿಲ್ಲ. ನಂತರ ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ ಇಸ್ರಾಯೇಲ್ ಮಕ್ಕಳಲ್ಲಿ ಎರಡು ಗುಂಪುಗಳಾದವು. ಒಂದು ಗುಂಪು ಸಮರ್ಥಿಸಿದರೆ ಇನ್ನೊಂದು ಗುಂಪು ವಿರೋಧಿಸಿತು. ಈ ಎರಡು ಗುಂಪುಗಳು ಪರಸ್ಪರ ಹೊಡೆದಾಡುವ ಸ್ಥಿತಿಗೆ ತಲುಪಿತು.