Skip to content
طه /

ಆಯತ್ 84

20 : 84

ಆಯತ್ 84 of طه (20 : 84). This page carries the verse in the Uthmani script with a translation of its meaning, at a stable URL that can be cited on its own.

طه ಆಯತ್‌ಗಳು 135
ಸೂರ · طه
ಕನ್ನಡ · Hamza
20 : 84

قَالَ هُمۡ أُوْلَآءِ عَلَىٰٓ أَثَرِي وَعَجِلۡتُ إِلَيۡكَ رَبِّ لِتَرۡضَىٰ

ಮೂಸಾ ಹೇಳಿದರು: “ಅವರು ನನ್ನ ಹಿಂದೆಯೇ ಇದ್ದಾರೆ. ನನ್ನ ಪರಿಪಾಲಕನೇ! ನೀನು ಪ್ರೀತಿಗೆ ಪಾತ್ರನಾಗಲು ನಾನು ತರಾತುರಿಯಿಂದ ನಿನ್ನ ಬಳಿಗೆ ಬಂದಿದ್ದೇನೆ.”

Explanation & meanings · 1
  1. ಮೂಸಾ (ಅವರ ಮೇಲೆ ಶಾಂತಿಯಿರಲಿ) ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿ ತೂರ್ ಪರ್ವತದ ಕಡೆಗೆ ಕರೆದೊಯ್ದರು. ಅವರು ಅಲ್ಲಾಹನನ್ನು ಭೇಟಿಯಾಗಿ ಅವನ ಪ್ರೀತಿ ಪಡೆಯಬೇಕೆಂಬ ಅತೀವ ಹಂಬಲದಿಂದ ಅನುಯಾಯಿಗಳನ್ನು ಹಿಂದೆ ಬಿಟ್ಟು ತರಾತುರಿಯಿಂದ ಪರ್ವತದ ಕಡೆಗೆ ಹೋದರು. ಅಲ್ಲಾಹು ಅದರ ಬಗ್ಗೆ ಕೇಳಿದಾಗ ಅವರು ನೀಡಿದ ಉತ್ತರವೇನೆಂದರೆ, “ನನಗೆ ನಿನ್ನ ಪ್ರೀತಿ ಪಡೆಯಬೇಕೆಂಬ ಅತೀವ ಹಂಬಲವಿದೆ, ಆದ್ದರಿಂದ ನಾನು ಬೇಗನೇ ಬಂದೆ. ನನ್ನ ಅನುಯಾಯಿಗಳು ನನ್ನ ಹಿಂದೆಯೇ ಬರುತ್ತಿದ್ದಾರೆ.” ಕೆಲವು ವ್ಯಾಖ್ಯಾನಕಾರರು ಹೇಳುವಂತೆ, ಅವರು ಅನುಯಾಯಿಗಳನ್ನು ಪರ್ವತದ ತಪ್ಪಲಿನಲ್ಲಿ ಬಿಟ್ಟು ಬಂದಿದ್ದರು. ಅವರು ನೀಡಿದ ಉತ್ತರ ಹೀಗಿತ್ತು: “ನನ್ನ ಅನುಯಾಯಿಗಳು ನನ್ನ ಹಿಂದೆ ಪರ್ವತದ ತಪ್ಪಲಿನಲ್ಲಿದ್ದಾರೆ. ಅವರು ನಾನು ಹಿಂದಿರುಗಿ ಬರುವುದನ್ನು ನಿರೀಕ್ಷಿಸುತ್ತಾ ಕಾಯುತ್ತಿದ್ದಾರೆ.”