19 : 73
وَإِذَا تُتۡلَىٰ عَلَيۡهِمۡ ءَايَٰتُنَا بَيِّنَٰتٖ قَالَ ٱلَّذِينَ كَفَرُواْ لِلَّذِينَ ءَامَنُوٓاْ أَيُّ ٱلۡفَرِيقَيۡنِ خَيۡرٞ مَّقَامٗا وَأَحۡسَنُ نَدِيّٗا
ನಮ್ಮ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ಅವರಿಗೆ ಓದಿಕೊಡಲಾದರೆ, ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳುತ್ತಾರೆ: “ಸ್ಥಾನಮಾನ ಮತ್ತು ಜನಬಲದ ದೃಷ್ಟಿಯಲ್ಲಿ ನಮ್ಮ ಈ ಎರಡು ಗುಂಪುಗಳಲ್ಲಿ ಯಾರು ಶ್ರೇಷ್ಠರು?”
Explanation & meanings · 1
- ಮಕ್ಕಾದಲ್ಲಿರುವ ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ಪೈಕಿ ಅತ್ಯಧಿಕ ಸ್ಥಾನಮಾನ ಮತ್ತು ಜನಬಲವುಳ್ಳವರು ಯಾರೆಂದು ಸತ್ಯವಿಶ್ವಾಸಿಗಳನ್ನು ಲೇವಡಿ ಮಾಡುತ್ತಾ ಸತ್ಯನಿಷೇಧಿಗಳು ಕೇಳುತ್ತಿದ್ದರು. ಏಕೆಂದರೆ, ಮಕ್ಕಾದ ಮುಖಂಡರು ಮತ್ತು ಶ್ರೀಮಂತರಲ್ಲಿ ಹೆಚ್ಚಿನವರೂ ಸತ್ಯನಿಷೇಧಿಗಳಾಗಿದ್ದರು.