عربي - Arabic English Qafár af - Afar Afrikaans - Afrikanns Akan Shqip - Albanian አማርኛ - Amharic Հայերեն - Armenian অসমীয়া - Assamese Azərbaycanca - Azerbaijani Bamanankan - Bambara Bassa Bemba বাংলা - Bengali Bosanski - Bosnian Български - Bulgarian မြန်မာဘာသာ - Burmese Bisaya - Cebuano Cham Нохчий - Chechen chiCheŵa - Chewa 中文 - Chinese Адыгэбзэ - Circassian Hrvatski - Croatian Česky - Czech Dagbani Dansk - Danish فارسی دری - Dari Dendi ދިވެހި ބަސް - Dhivehi Nederlands - Dutch إستوني - Estonian Suomi - Finnish Fon Français - French Fulfulde - Fula ქართული - Georgian Deutsch - German Ελληνικά - Greek ગુજરાતી - Gujrati Kreyòl ayisyen - Haitian Creole Hausa हिन्दी - Hindi Magyar - Hungarian Igbo Indonesia - Indonesian Italiano - Italian 日本語 - Japanese Jóola - Jola ಕನ್ನಡ - Kannada Қазақша - Kazakh ភាសាខ្មែរ - Khmer Kikuyu Ikinyarwanda - Kinyarwanda Ikirundi - Kirundi 한국어 - Korean كوردی سۆرانی - kurdish كوردي kurmancî - Kurmanji Kyrgyz ລາວ - Lao latviešu - Latvian Lingala lietuvių - Lithuanian Luganda Македонски - Macedonian Maguindanaon Malagasy - Malagasy Bahasa Melayu - Malay മലയാളം - Malayalam Mandinka मराठी - Marathi Mõõré - Moore नेपाली - Nepali أنكو - NKo Norwegian ଓଡ଼ିଆ - Odia oromoo - Oromo پښتو - Pashto فارسی - Persian Polski - Polish Portuguese ਪੰਜਾਬੀ - Punjabi Română - Romanian Русский - Russian Српски - Serbian Shona සිංහල - Sinhala Slovenščina - Slovenian Soomaaliga - Somali Soninke Sesotho - Sotho Español - Spanish Kiswahili - Swahili Svenska - Swedish Tagalog Тоҷикӣ - Tajik தமிழ் - Tamil తెలుగు - Telugu ไทย - Thai ትግረኛ - Tigrinya Türkçe - Turkish Türkmen - Turkmen Ukrainian اردو - Urdu ئۇيغۇرچە - Uyghur Ўзбек - Uzbek Việt Nam - Vietnamese Wolof Yao Yorùbá - Yoruba Zarma زولو - Zulu
839 ಹದೀಸ್ಗಳು
ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ
التصنيف الشرعي
ಹದೀಸ್ನ ದರ್ಜೆ
ವರದಿಯಾದ ಗ್ರಂಥ
ವರದಿಗಾರ
ಎಲ್ಲಾ ವರದಿಗಾರರನ್ನು ತೋರಿಸಿ (100)
"ಪುನರುತ್ಥಾನ ದಿನದಂದು ಸೂರ್ಯನನ್ನು ಸೃಷ್ಟಿಗಳ ಹತ್ತಿರ ತರಲಾಗುವುದು. ಎಷ್ಟೆಂದರೆ ಅದು ಅವರಿಂದ ಸುಮಾರು ಒಂದು 'ಮೀಲ್' ಅಂತರದಲ್ಲಿರುತ್ತದೆ". (ವರದಿಗಾರರಾದ) ಸುಲೈಮ್ ಇಬ್ನ್ ಆಮಿರ್ ಹೇಳಿದರು: "ಅಲ್ಲಾಹುವಿನಾಣೆ, 'ಮೀಲ್' ಎಂದರೆ ಅದರ ಅರ್ಥವೇನೆಂದು ನನಗೆ ತಿಳಿದಿಲ್ಲ? ಅದು ಭೂಮಿಯ ದೂರದ ಅಳತೆಯೇ (ಮೈಲಿ), ಅಥವಾ ಕಣ್ಣಿಗೆ ಸುರ್ಮಾ ಹಚ್ಚಲು ಬಳಸುವ ಕಡ್ಡಿಯೇ (ಎಂದು ನನಗೆ ತಿಳಿದಿಲ್ಲ)?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮುಂದುವರಿಸಿ ಹೇಳಿದರು: "ಆಗ ಜನರು ತಮ್ಮ ಕರ್ಮಗಳಿಗನುಸಾರವಾಗಿ ಬೆವರಿನಲ್ಲಿರುತ್ತಾರೆ. ಕೆಲವರು ತಮ್ಮ ಹರಡುಗಂಟುಗಳವರೆಗೆ (ಬೆವರಿನಲ್ಲಿ) ಇರುತ್ತಾರೆ, ಕೆಲವರು ತಮ್ಮ ಮೊಣಕಾಲುಗಳವರೆಗೆ ಇರುತ್ತಾರೆ, ಕೆಲವರು ತಮ್ಮ ಸೊಂಟದವರೆಗೆ ಇರುತ್ತಾರೆ, ಮತ್ತು ಕೆಲವರಿಗೆ ಬೆವರು (ಬಾಯಿಯ ಮಟ್ಟಕ್ಕೆ ತಲುಪಿ) ಕಡಿವಾಣ ಹಾಕಿದಂತಿರುತ್ತದೆ". ವರದಿಗಾರರು ಹೇಳಿದರು: "ಮತ್ತು ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಕೈಯಿಂದ ತಮ್ಮ ಬಾಯಿಯ ಕಡೆಗೆ ಸೂಚಿಸಿದರು".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
التصنيف الشرعيالحياة الآخرة
"ಸ್ವರ್ಗದಲ್ಲಿ ನಿಮ್ಮಲ್ಲೊಬ್ಬನ ಅತ್ಯಂತ ಕೆಳಮಟ್ಟದ ಸ್ಥಾನವು (ಹೇಗಿರುತ್ತದೆ) ಎಂದರೆ, ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಏನಾದರೂ ಇಚ್ಚಿಸು!'. ಆಗ ಅವನು ಇಚ್ಚಿಸುತ್ತಾನೆ, ಮತ್ತು ಇಚ್ಚಿಸುತ್ತಾನೆ (ಇಚ್ಚಿಸುತ್ತಲೇ ಇರುತ್ತಾನೆ). ನಂತರ ಅವನೊಂದಿಗೆ (ಅಲ್ಲಾಹು) ಕೇಳುತ್ತಾನೆ: 'ನೀನು (ಎಲ್ಲವನ್ನೂ) ಇಚ್ಚಿಸಿದೆಯಾ?'. ಅವನು ಹೇಳುತ್ತಾನೆ: 'ಹೌದು'. ಆಗ ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ)' ".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
التصنيف الشرعيصفات الجنة والنار، الحياة الآخرة
ನಾನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುಣ್ಯ ಮತ್ತು ಪಾಪದ ಬಗ್ಗೆ ಕೇಳಿದೆ. ಅವರು ಉತ್ತರಿಸಿದರು: "ಪುಣ್ಯವೆಂದರೆ ಅತ್ಯುತ್ತಮ ನಡವಳಿಕೆ. ಪಾಪವೆಂದರೆ ನಿನ್ನ ಎದೆಯಲ್ಲಿ ಕಸಿವಿಸಿ ಉಂಟು ಮಾಡುವ ಮತ್ತು ಜನರು ಅದನ್ನು ತಿಳಿದುಕೊಳ್ಳುವುದನ್ನು ನೀನು ಇಷ್ಟಪಡದ ವಿಷಯ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
التصنيف الشرعيالأخلاق الحميدة، أعمال القلوب
"ಎಲ್ಲಾ ಒಳ್ಳೆಯ ಕಾರ್ಯಗಳು ದಾನವಾಗಿವೆ."
ಸಹೀಹ್ ಇದನ್ನು ಬುಖಾರಿ ಜಾಬಿರ್ ರಿಂದ ಮತ್ತು ಮುಸ್ಲಿಂ ಹುದೈಫಾ ರಿಂದ ವರದಿ ಮಾಡಿದ್ದಾರೆ.
التصنيف الشرعيفضائل الأعمال الصالحة، صدقة التطوعموضوعات الحديثحسن الخلق، الإحسان إلى الخلق، صدقة التطوعمحاور التعريف بالإسلاممحاسن الأخلاق
ಅಲೀ ಬಿನ್ ಅಬೂ ತಾಲಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ನನ್ನೊಂದಿಗೆ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಕಳುಹಿಸಿದ ಅದೇ ಕೆಲಸಕ್ಕಾಗಿ ನಾನು ತಮ್ಮನ್ನು ಕಳುಹಿಸಲೇ? ತಾವು ಒಂದೇ ಒಂದು ಪ್ರತಿಮೆಯನ್ನು ಅಳಿಸದೆ ಬಿಡಬಾರದು ಮತ್ತು ಎತ್ತರಿಸಲ್ಪಟ್ಟ ಒಂದೇ ಒಂದು ಸಮಾಧಿಯನ್ನು ನೆಲಸಮ ಮಾಡದೆ ಬಿಡಬಾರದು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
التصنيف الشرعياللباس والزينة، أحكام ومسائل متعلقة بالأمر بالمعروف والنهي عن المنكر، حمل الميت ودفنه، توحيد الألوهيةموضوعات الحديثأحكام المقابر، صنع التماثيل، التصوير، اتخاذ القبور مساجد
“ದಾಸನು ತನ್ನ ಒಡೆಯನಿಗೆ (ಅಲ್ಲಾಹನಿಗೆ) ಅತ್ಯಂತ ನಿಕಟನಾಗುವುದು ಸಾಷ್ಟಾಂಗ ಮಾಡುವಾಗ. ಆದ್ದರಿಂದ ನೀವು ಪ್ರಾರ್ಥಿಸುವುದನ್ನು ಹೆಚ್ಚಿಸಿರಿ.”
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
التصنيف الشرعيآداب الدعاء، أسباب إجابة الدعاء وموانعه، صفة الصلاة، أذكار الصلاة، صلاة التطوعموضوعات الحديثالدعاء، صفة الصلاة
ಇಬ್ನ್ ಝುಬೈರ್ ಪ್ರತಿಯೊಂದು ನಮಾಝ್ನಲ್ಲೂ ಸಲಾಂ ಹೇಳಿದ ನಂತರ ಇದನ್ನು ಪಠಿಸುತ್ತಿದ್ದರು: "ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್. ಲಾ ಇಲಾಹ ಇಲ್ಲಲ್ಲಾಹು, ವಲಾ ನಅ್ಬುದು ಇಲ್ಲಾ ಇಯ್ಯಾಹು, ಲಹು ನ್ನಿಅ್ಮತು ವಲಹುಲ್ ಫದ್ಲು, ವಲಹು ಸ್ಸನಾಉಲ್ ಹಸನು, ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ ವಲವ್ ಕರಿಹಲ್ ಕಾಫಿರೂನ್." (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅಲ್ಲಾಹನ ಹೊರತು ಶಕ್ತಿಯಾಗಲಿ ಸಾಮರ್ಥ್ಯವಾಗಲಿ ಇಲ್ಲ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ನಾವು ಅವನನ್ನಲ್ಲದೆ ಇನ್ನಾರನ್ನೂ ಆರಾಧಿಸುವುದಿಲ್ಲ. ಅನುಗ್ರಹವು ಅವನದ್ದು, ಔದಾರ್ಯವು ಅವನದ್ದು ಮತ್ತು ಉತ್ತಮವಾದ ಪ್ರಶಂಸೆಯು ಅವನಿಗೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ನಾವು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸುತ್ತೇವೆ). ನಂತರ ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್ಗಳ ನಂತರ ಇವುಗಳ ಮೂಲಕ ತಹ್ಲೀಲ್ (ಲಾಇಲಾಹ ಇಲ್ಲಲ್ಲಾಹ್) ಪಠಿಸುತ್ತಿದ್ದರು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
التصنيف الشرعيأذكار الصلاةموضوعات الحديثالذِّكْر، الأذكار الشرعية
"ಓ ಅಬೂ ಸಈದ್, ಯಾರು ಅಲ್ಲಾಹುವನ್ನು ಪರಿಪಾಲಕನೆಂದು, ಇಸ್ಲಾಮನ್ನು ಧರ್ಮವೆಂದು, ಮತ್ತು ಮುಹಮ್ಮದ್ ರನ್ನು ಪ್ರವಾದಿಯೆಂದು (ಒಪ್ಪಿಕೊಂಡು) ತೃಪ್ತರಾಗುತ್ತಾರೋ, ಅವರಿಗೆ ಸ್ವರ್ಗವು ಖಚಿತವಾಯಿತು". ಇದನ್ನು ಕೇಳಿ ಅಬೂ ಸಈದ್ಗೆ ಆಶ್ಚರ್ಯವಾಯಿತು. ಅವರು ಹೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ಇದನ್ನು ನನಗೆ ಮತ್ತೊಮ್ಮೆ ಹೇಳಿ". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹಾಗೆಯೇ ಮಾಡಿದರು (ಮತ್ತೊಮ್ಮೆ ಹೇಳಿದರು). ನಂತರ ಹೇಳಿದರು: "ಮತ್ತು ಇನ್ನೊಂದು (ವಿಷಯ) ಇದೆ. ಅದರ ಮೂಲಕ ದಾಸನನ್ನು ಸ್ವರ್ಗದಲ್ಲಿ ನೂರು ಹಂತಗಳಷ್ಟು ಎತ್ತರಿಸಲಾಗುತ್ತದೆ. ಪ್ರತಿಯೆರಡು ಹಂತಗಳ ನಡುವಿನ ಅಂತರವು ಆಕಾಶ ಮತ್ತು ಭೂಮಿಯ ನಡುವಿನ ಅಂತರದಷ್ಟಿರುತ್ತದೆ". ಅಬೂ ಸಈದ್ ಕೇಳಿದರು: "ಅದು ಯಾವುದು, ಓ ಅಲ್ಲಾಹುವಿನ ಸಂದೇಶವಾಹಕರೇ?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹುವಿನ ಮಾರ್ಗದಲ್ಲಿ ಜಿಹಾದ್ ಮಾಡುವುದು (ಶ್ರಮಿಸುವುದು/ಹೋರಾಡುವುದು), ಅಲ್ಲಾಹುವಿನ ಮಾರ್ಗದಲ್ಲಿ ಜಿಹಾದ್ ಮಾಡುವುದು".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
التصنيف الشرعيصفات الجنة والنار