Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 3 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲೊಬ್ಬನ ಮನಸ್ಸಿನಲ್ಲಿ ಕೆಲವು ದುರ್ವಿಚಾರಗಳು ಮೂಡುತ್ತವೆ. ಅವುಗಳ ಬಗ್ಗೆ ಮಾತನಾಡುವುದಕ್ಕಿಂತಲೂ ಇದ್ದಿಲುಗಳಾಗಿ ಮಾರ್ಪಡುವುದೇ ಅವನಿಗೆ ಹೆಚ್ಚು ಇಷ್ಟವಾಗಿದೆ." ಆಗ ಅವರು ಹೇಳಿದರು: "ಅಲ್ಲಾಹು ಮಹಾನನು, ಅಲ್ಲಾಹು ಮಹಾನನು. ಶೈತಾನನ ಕುತಂತ್ರವನ್ನು ದುರ್ಬೋಧನೆಯಾಗಿ ಮಾರ್ಪಡಿಸಿದ ಅಲ್ಲಾಹನಿಗೆ ಸರ್ವಸ್ತುತಿ."
ಸಹೀಹ್ ಇದನ್ನು ಅಬೂದಾವೂದ್ ಮತ್ತು ನಸಾಈ (ಕುಬ್ರಾದಲ್ಲಿ) ವರದಿ ಮಾಡಿದ್ದಾರೆ.
"ಅಕಬದಂದು (ದುಲ್-ಹಿಜ್ಜ ಹತ್ತನೇ ದಿನ) ಬೆಳಿಗ್ಗೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಒಂಟೆಯ ಮೇಲಿದ್ದುಕೊಂಡೇ ಹೇಳಿದರು: "ನನಗೆ ಕೆಲವು ಸಣ್ಣ ಕಲ್ಲುಗಳನ್ನು ಹೆಕ್ಕಿಕೊಡಿ." ನಾನು ಅವರಿಗೆ ಕೆಲವು ಸಣ್ಣ ಕಲ್ಲುಗಳನ್ನು ಹೆಕ್ಕಿದೆ. ಅವು ಸಣ್ಣ ಗಾತ್ರದ ಕಲ್ಲುಗಳಾಗಿದ್ದವು. ಅವರು ಅದನ್ನು ಅಂಗೈಯಲ್ಲಿ ಅಲುಗಾಡಿಸುತ್ತಾ ಹೇಳಿದರು: "ಇದರಂತಿರುವುದನ್ನು ಎಸೆಯಿರಿ." ನಂತರ ಹೇಳಿದರು: "ಓ ಜನರೇ! ಧರ್ಮದಲ್ಲಿ ಮಿತಿಮೀರುವುದರ ಬಗ್ಗೆ ಹುಷಾರಾಗಿರಿ! ಏಕೆಂದರೆ ನಿಮಗಿಂತ ಮೊದಲಿನವರನ್ನು ನಾಶ ಮಾಡಿದ್ದು ಧರ್ಮದಲ್ಲಿರುವ ಅತಿರೇಕವಾಗಿದೆ."
ಸಹೀಹ್ ಇದನ್ನು ಇಬ್ನ್ ಮಾಜ, ನಸಾಈ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಯಾರು ಒಬ್ಬ ಪುರುಷನನ್ನು ಅಥವಾ ಮಹಿಳೆಯನ್ನು ಗುದದ್ವಾರದಲ್ಲಿ ಸಂಭೋಗಿಸುತ್ತಾರೋ, ಅವನ ಕಡೆಗೆ ಅಲ್ಲಾಹು ದೃಷ್ಟಿ ಹಾಯಿಸುವುದಿಲ್ಲ."
ಸಹೀಹ್ ಇದನ್ನು ತಿರ್ಮಿದಿ ಮತ್ತು ನಸಾಈ (ಕುಬ್ರಾದಲ್ಲಿ) ವರದಿ ಮಾಡಿದ್ದಾರೆ.