عربي - Arabic English Qafár af - Afar Afrikaans - Afrikanns Akan Shqip - Albanian አማርኛ - Amharic Հայերեն - Armenian অসমীয়া - Assamese Azərbaycanca - Azerbaijani Bamanankan - Bambara Bassa Bemba বাংলা - Bengali Bosanski - Bosnian Български - Bulgarian မြန်မာဘာသာ - Burmese Bisaya - Cebuano Cham Нохчий - Chechen chiCheŵa - Chewa 中文 - Chinese Адыгэбзэ - Circassian Hrvatski - Croatian Česky - Czech Dagbani Dansk - Danish فارسی دری - Dari Dendi ދިވެހި ބަސް - Dhivehi Nederlands - Dutch إستوني - Estonian Suomi - Finnish Français - French Fulfulde - Fula ქართული - Georgian Deutsch - German Ελληνικά - Greek ગુજરાતી - Gujrati Kreyòl ayisyen - Haitian Creole Hausa हिन्दी - Hindi Magyar - Hungarian Igbo Indonesia - Indonesian Italiano - Italian 日本語 - Japanese Jóola - Jola ಕನ್ನಡ - Kannada Қазақша - Kazakh ភាសាខ្មែរ - Khmer Kikuyu Ikinyarwanda - Kinyarwanda Ikirundi - Kirundi 한국어 - Korean كوردی سۆرانی - kurdish كوردي kurmancî - Kurmanji Kyrgyz ລາວ - Lao latviešu - Latvian Lingala lietuvių - Lithuanian Luganda Македонски - Macedonian Maguindanaon Malagasy - Malagasy Bahasa Melayu - Malay മലയാളം - Malayalam Mandinka मराठी - Marathi Mõõré - Moore नेपाली - Nepali أنكو - NKo Norwegian ଓଡ଼ିଆ - Odia oromoo - Oromo پښتو - Pashto فارسی - Persian Polski - Polish Portuguese ਪੰਜਾਬੀ - Punjabi Română - Romanian Русский - Russian Српски - Serbian Shona සිංහල - Sinhala Slovenščina - Slovenian Soomaaliga - Somali Soninke Sesotho - Sotho Español - Spanish Kiswahili - Swahili Svenska - Swedish Tagalog Тоҷикӣ - Tajik தமிழ் - Tamil తెలుగు - Telugu ไทย - Thai ትግረኛ - Tigrinya Türkçe - Turkish Ukrainian اردو - Urdu ئۇيغۇرچە - Uyghur Ўзбек - Uzbek Việt Nam - Vietnamese Wolof Yao Yorùbá - Yoruba Zarma زولو - Zulu
839 ಹದೀಸ್ಗಳು
ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ
ವರ್ಗಗಳು
ಹದೀಸ್ನ ದರ್ಜೆ
ವರದಿಯಾದ ಗ್ರಂಥ
ವರದಿಗಾರ
ಎಲ್ಲಾ ವರದಿಗಾರರನ್ನು ತೋರಿಸಿ (109)
“ಸೌಮ್ಯವಾಗಿ ಮಾರಾಟ ಮಾಡುವ, ಖರೀದಿಸುವ ಮತ್ತು ಸಾಲ ಮರುಪಾವತಿಯನ್ನು ಕೇಳುವ ವ್ಯಕ್ತಿಗೆ ಅಲ್ಲಾಹು ದಯೆ ತೋರಲಿ.”
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
"ಎಲ್ಲಾ ಒಳ್ಳೆಯ ಕಾರ್ಯಗಳು ದಾನವಾಗಿವೆ."
ಸಹೀಹ್ ಇದನ್ನು ಬುಖಾರಿ ಜಾಬಿರ್ ರಿಂದ ಮತ್ತು ಮುಸ್ಲಿಂ ಹುದೈಫಾ ರಿಂದ ವರದಿ ಮಾಡಿದ್ದಾರೆ.
"ನನಗಿಂತ ಮೊದಲು ಯಾರಿಗೂ ನೀಡಲಾಗಿರದ ಐದು ವಿಷಯಗಳನ್ನು ನನಗೆ ನೀಡಲಾಗಿದೆ. ಒಂದು ತಿಂಗಳ ಪ್ರಯಾಣದಷ್ಟು ದೂರದ ತನಕ ನನಗೆ ಭಯದ ಮೂಲಕ ಸಹಾಯ ಮಾಡಲಾಗಿದೆ. ನನಗೆ ಭೂಮಿಯನ್ನು ಮಸೀದಿ ಮತ್ತು ಶುದ್ಧೀಕರಣದ ವಸ್ತುವಾಗಿ ಮಾಡಿಕೊಡಲಾಗಿದೆ. ನನ್ನ ಸಮುದಾಯದ ವ್ಯಕ್ತಿಗೆ ಯಾವುದೇ ಸ್ಥಳದಲ್ಲಿ ನಮಾಝಿನ ಸಮಯವಾದರೂ ಆತ ನಮಾಝ್ ಮಾಡಬಹುದು. ನನಗೆ ಯುದ್ಧಾರ್ಜಿತ ಸೊತ್ತನ್ನು ಅನುಮತಿಸಲಾಗಿದೆ. ನನಗಿಂತ ಮೊದಲಿನ ಯಾವುದೇ ಪ್ರವಾದಿಗೂ ಇದನ್ನು ಅನುಮತಿಸಲಾಗಿರಲಿಲ್ಲ. ನನಗೆ ಶಿಫಾರಸ್ಸು ಮಾಡುವ ಅಧಿಕಾರವನ್ನು ನೀಡಲಾಗಿದೆ. ಇತರ ಪ್ರವಾದಿಗಳನ್ನು ವಿಶೇಷವಾಗಿ ಅವರ ಜನತೆಗೆ ಮಾತ್ರ ಕಳುಹಿಸಲಾಗುತ್ತಿತ್ತು. ಆದರೆ ನನ್ನನ್ನು ಸಂಪೂರ್ಣ ಮನುಕುಲಕ್ಕೆ ಕಳುಹಿಸಲಾಗಿದೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಕುರ್ಆನ್ನ ಒಂದು ಸೂರಃವನ್ನು (ಅಧ್ಯಾಯವನ್ನು) ಕಲಿಸುವಂತೆ ಪ್ರತಿಯೊಂದು ವಿಷಯದಲ್ಲೂ ಇಸ್ತಿಖಾರ (ಮಾರ್ಗದರ್ಶನಕ್ಕಾಗಿ ಪ್ರಾರ್ಥನೆ) ಮಾಡುವುದನ್ನು ಕಲಿಸುತ್ತಿದ್ದರು. ಅವರು ಹೇಳುತ್ತಿದ್ದರು: 'ನಿಮ್ಮಲ್ಲಿ ಯಾರಿಗಾದರೂ ಒಂದು ವಿಷಯವನ್ನು ಮಾಡಲು ಉದ್ದೇಶವಿದ್ದರೆ, ಅವನು ಫರ್ದ್ (ಕಡ್ಡಾಯ) ಅಲ್ಲದ ಎರಡು ರಕ್ಅತ್ ನಮಾಝ್ ಮಾಡಲಿ. ನಂತರ ಹೀಗೆ ಹೇಳಲಿ: 'ಅಲ್ಲಾಹುಮ್ಮ ಇನ್ನೀ ಅಸ್ತಖೀರುಕ ಬಿ ಇಲ್ಮಿಕ, ವ ಅಸ್ತಕ್ದಿರುಕ ಬಿ ಕುದ್ರತಿಕ, ವ ಅಸ್ಅಲುಕ ಮಿನ್ ಫದ್ಲಿಕಲ್ ಅಝೀಮ್, ಫ ಇನ್ನಕ ತಕ್ದಿರು ವಲಾ ಅಕ್ದಿರು, ವ ತಅ್ಲಮು ವಲಾ ಅಅ್ಲಮು, ವ ಅಂತ ಅಲ್ಲಾಮುಲ್ ಗುಯೂಬ್. ಅಲ್ಲಾಹುಮ್ಮ ಇನ್ ಕುಂತ ತಅ್ಲಮು ಅನ್ನ ಹಾಧಲ್ ಅಮ್ರ (ಇಲ್ಲಿ ತನ್ನ ಅಗತ್ಯವನ್ನು ಹೇಳಿಕೊಳ್ಳಲಿ) ಖೈರುನ್ ಲೀ ಫೀ ದೀನೀ, ವ ಮಆಶೀ, ವ ಆಖಿಬತಿ ಅಮ್ರೀ (ಅಥವಾ ಅವರು ಹೀಗೆ ಹೇಳಿದರು: ಆಜಿಲಿ ಅಮ್ರೀ ವ ಆಜಿಲಿಹಿ), ಫಕ್ದುರ್ಹು ಲೀ ವ ಯಸ್ಸಿರ್ಹು ಲೀ ಸುಮ್ಮ ಬಾರಿಕ್ ಲೀ ಫೀಹಿ. ವ ಇನ್ ಕುಂತ ತಅ್ಲಮು ಅನ್ನ ಹಾಧಲ್ ಅಮ್ರ ಶರ್ರುನ್ ಲೀ ಫೀ ದೀನೀ ವ ಮಆಶೀ ವ ಆಖಿಬತಿ ಅಮ್ರೀ (ಅಥವಾ ಅವರು ಹೀಗೆ ಹೇಳಿದರು: ಫೀ ಆಜಿಲಿ ಅಮ್ರೀ ವ ಆಜಿಲಿಹಿ), ಫಸ್ರಿಫ್ಹು ಅನ್ನೀ ವಸ್ರಿಫ್ನೀ ಅನ್ಹು, ವಕ್ದುರ್ ಲಿಯಲ್ ಖೈರ ಹೈಸು ಕಾನ, ಸುಮ್ಮ ಅರ್ದಿನೀ ಬಿಹಿ.' (ಅರ್ಥ: 'ಓ ಅಲ್ಲಾಹ್, ನಿನ್ನ ಜ್ಞಾನದ ಮೂಲಕ ನಾನು ನಿನ್ನಿಂದ ಮಾರ್ಗದರ್ಶನವನ್ನು ಕೋರುತ್ತೇನೆ, ನಿನ್ನ ಸಾಮರ್ಥ್ಯದ ಮೂಲಕ ನಾನು ನಿನ್ನಿಂದ ಶಕ್ತಿಯನ್ನು ಕೋರುತ್ತೇನೆ ಮತ್ತು ನಿನ್ನ ಮಹಾ ಅನುಗ್ರಹವನ್ನು ಬೇಡುತ್ತೇನೆ. ನಿಸ್ಸಂದೇಹವಾಗಿ, ನೀನು ಸಾಮರ್ಥ್ಯವುಳ್ಳವನು ಮತ್ತು ನಾನು ಸಾಮರ್ಥ್ಯಹೀನನು. ನೀನು ತಿಳಿದಿರುವವನು ಮತ್ತು ನಾನು ತಿಳಿದಿಲ್ಲದವನು, ಮತ್ತು ನೀನು ಎಲ್ಲಾ ಅಗೋಚರ ವಿಷಯಗಳನ್ನು ಬಲ್ಲವನು. ಓ ಅಲ್ಲಾಹ್, ಈ ವಿಷಯವು (ಇಲ್ಲಿ ತನ್ನ ಅಗತ್ಯವನ್ನು ಹೇಳಿಕೊಳ್ಳಲಿ) ನನ್ನ ಧರ್ಮಕ್ಕೆ, ನನ್ನ ಜೀವನೋಪಾಯಕ್ಕೆ ಮತ್ತು ನನ್ನ ಅಂತಿಮ ಫಲಿತಾಂಶಕ್ಕೆ (ಅಥವಾ ಅವರು ಹೀಗೆ ಹೇಳಿದರು: ನನ್ನ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ) ಒಳ್ಳೆಯದೆಂದು ನಿನಗೆ ತಿಳಿದಿದ್ದರೆ, ಅದನ್ನು ನನಗಾಗಿ ನಿರ್ಣಯಿಸು, ಅದನ್ನು ನನಗೆ ಸುಲಭಗೊಳಿಸು ಮತ್ತು ನಂತರ ಅದರಲ್ಲಿ ನನಗೆ ಸಮೃದ್ಧಿಯನ್ನು ನೀಡು. ಮತ್ತು ಈ ವಿಷಯವು ನನ್ನ ಧರ್ಮಕ್ಕೆ, ನನ್ನ ಜೀವನೋಪಾಯಕ್ಕೆ ಮತ್ತು ನನ್ನ ಅಂತಿಮ ಫಲಿತಾಂಶಕ್ಕೆ (ಅಥವಾ ಅವರು ಹೀಗೆ ಹೇಳಿದರು: ನನ್ನ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ) ಕೆಟ್ಟದ್ದೆಂದು ನಿನಗೆ ತಿಳಿದಿದ್ದರೆ, ಅದನ್ನು ನನ್ನಿಂದ ದೂರ ಮಾಡು ಮತ್ತು ನನ್ನನ್ನು ಅದರಿಂದ ದೂರ ಮಾಡು. ಒಳಿತು ಎಲ್ಲೇ ಇದ್ದರೂ ಅದನ್ನು ನನಗಾಗಿ ನಿರ್ಣಯಿಸು, ಮತ್ತು ನಂತರ ಅದರಿಂದ ನನ್ನನ್ನು ತೃಪ್ತಿಪಡಿಸು.')" ಅವರು (ಜಾಬಿರ್) ಹೇಳಿದರು: "ಮತ್ತು ಅವನು ತನ್ನ ಅಗತ್ಯವನ್ನು ಹೆಸರಿಸಬೇಕು."
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
"ನಾವು ಒಂದು ಯುದ್ಧದ ಪ್ರಯಾಣದಲ್ಲಿದ್ದೆವು. ಆಗ ಮುಹಾಜಿರ್ಗಳಲ್ಲಿ ಒಬ್ಬ ವ್ಯಕ್ತಿ ಅನ್ಸಾರಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿಯ ಪೃಷ್ಠಕ್ಕೆ (ಹಿಂಬದಿಗೆ) ಒದ್ದನು (ಅಥವಾ ಹೊಡೆದನು). ಆಗ ಅನ್ಸಾರಿ ವ್ಯಕ್ತಿ: 'ಓ ಅನ್ಸಾರಿಗಳೇ (ಸಹಾಯಕ್ಕೆ ಬನ್ನಿ)!' ಎಂದು ಕೂಗಿದನು. ಮತ್ತು ಮುಹಾಜಿರ್ ವ್ಯಕ್ತಿ: 'ಓ ಮುಹಾಜಿರ್ಗಳೇ (ಸಹಾಯಕ್ಕೆ ಬನ್ನಿ)!' ಎಂದು ಕೂಗಿದನು. ಅಲ್ಲಾಹು, ತನ್ನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದು ಕೇಳಿಸುವಂತೆ ಮಾಡಿದನು. ಆಗ ಅವರು: 'ಏನಿದು?' ಎಂದು ಕೇಳಿದರು. ಅವರು (ಜನರು) ಹೇಳಿದರು: 'ಒಬ್ಬ ಮುಹಾಜಿರ್ ಅನ್ಸಾರಿಯೊಬ್ಬನ ಪೃಷ್ಠಕ್ಕೆ ಹೊಡೆದನು. ಆಗ ಅನ್ಸಾರಿ: ಓ ಅನ್ಸಾರಿಗಳೇ! ಎಂದೂ, ಮುಹಾಜಿರ್: ಓ ಮುಹಾಜಿರ್ಗಳೇ! ಎಂದೂ ಕೂಗಿದರು'. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ಅದನ್ನು (ಆ ಕರೆಯನ್ನು) ಬಿಟ್ಟುಬಿಡಿ. ಖಂಡಿತವಾಗಿಯೂ ಅದು ದುರ್ನಾತ ಬೀರುವಂತಹುದು (ಅಸಹ್ಯವಾದುದು)'." ಜಾಬಿರ್ ಹೇಳುತ್ತಾರೆ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಬಂದಾಗ ಅನ್ಸಾರಿಗಳು ಹೆಚ್ಚಿದ್ದರು. ನಂತರ ಮುಹಾಜಿರ್ಗಳ ಸಂಖ್ಯೆ ಹೆಚ್ಚಾಯಿತು. (ಈ ಘಟನೆ ನಡೆದಾಗ) ಅಬ್ದುಲ್ಲಾ ಬಿನ್ ಉಬೈ ಹೇಳಿದನು: 'ಅವರು ಹೀಗೆ ಮಾಡಿದರೇ? ಅಲ್ಲಾಹನ ಆಣೆ, ನಾವು ಮದೀನಕ್ಕೆ ಮರಳಿದರೆ, ಗೌರವವುಳ್ಳವರು ಅವಮಾನಿತರನ್ನು ಅಲ್ಲಿಂದ ಹೊರಹಾಕುತ್ತಾರೆ'. ಆಗ ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: 'ಓ ಅಲ್ಲಾಹನ ಸಂದೇಶವಾಹಕರೇ, ನನ್ನನ್ನು ಬಿಡಿ, ಈ ಮುನಾಫಿಕ್ನ (ಕಪಟವಿಶ್ವಾಸಿಯ) ಕತ್ತನ್ನು ಕಡಿಯುತ್ತೇನೆ'. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ಅವನನ್ನು ಬಿಡಿ. ಮುಹಮ್ಮದ್ ತಮ್ಮ ಸಂಗಾತಿಗಳನ್ನೇ ಕೊಲ್ಲುತ್ತಾರೆ ಎಂದು ಜನ ಮಾತನಾಡಿಕೊಳ್ಳಬಾರದು'."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ಅವರು ಜನರು ಗುಂಪುಗೂಡಿ ಒಬ್ಬ ವ್ಯಕ್ತಿಗೆ ನೆರಳು ನೀಡುತ್ತಿರುವುದನ್ನು ಕಂಡರು. ಅವರು (ಪ್ರವಾದಿ) ಕೇಳಿದರು: "ಇದೇನು?". ಜನರು ಹೇಳಿದರು: "ಆತ ಉಪವಾಸದಲ್ಲಿದ್ದಾನೆ". ಆಗ ಅವರು (ಪ್ರವಾದಿ) ಹೇಳಿದರು: "ಪ್ರಯಾಣದ ಸಂದರ್ಭದಲ್ಲಿ ಉಪವಾಸ ಆಚರಿಸುವುದು ಪುಣ್ಯಕಾರ್ಯವಲ್ಲ". ಇಮಾಮ್ ಮುಸ್ಲಿಂ ರವರ ಇನ್ನೊಂದು ವರದಿಯಲ್ಲಿ ಹೀಗಿದೆ: "ಅಲ್ಲಾಹು ನಿಮಗೆ ನೀಡಿದ ರಿಯಾಯಿತಿಯನ್ನು ಸ್ವೀಕರಿಸಿಕೊಳ್ಳಿರಿ".
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ತಿಂದವರು ನಮ್ಮಿಂದ ದೂರವಿರಲಿ - ಅಥವಾ ಅವರು ಹೀಗೆ ಹೇಳಿದರು: ಅವರು ನಮ್ಮ ಮಸೀದಿಯಿಂದ ದೂರವಿರಲಿ - ಮತ್ತು ತಮ್ಮ ಮನೆಯಲ್ಲೇ ಉಳಿದುಕೊಳ್ಳಲಿ." ಒಮ್ಮೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತರಕಾರಿ ಸೊಪ್ಪುಗಳಿರುವ ಮಡಿಕೆಯನ್ನು ತರಲಾಯಿತು. ಅವರಿಗೆ ಅದರಿಂದ ಕೆಟ್ಟ ವಾಸನೆ ಅನುಭವವಾಯಿತು. ಅವರು ಅದರ ಬಗ್ಗೆ ವಿಚಾರಿಸಿದಾಗ, ಅದರಲ್ಲಿರುವ ಸೊಪ್ಪುಗಳ ಬಗ್ಗೆ ಅವರಿಗೆ ತಿಳಿಸಲಾಯಿತು. ಅವರು ಅದನ್ನು ಹತ್ತಿರ ತರುವಂತೆ ತಮ್ಮ ಬಳಿಯಲ್ಲಿದ್ದ ಒಬ್ಬ ಸಂಗಡಿಗರಿಗೆ ಆದೇಶಿಸಿದರು. ಅದನ್ನು ಕಂಡಾಗ ಅವರು ಅದನ್ನು ತಿನ್ನಲು ಅಸಹ್ಯಪಟ್ಟರು. ಅವರು ಹೇಳಿದರು: "ತಿನ್ನಿರಿ! ಏಕೆಂದರೆ, ನಿಶ್ಚಯವಾಗಿಯೂ ನೀವು ಸಂಭಾಷಣೆ ಮಾಡದವನೊಂದಿಗೆ ನಾನು ಸಂಭಾಷಣೆ ಮಾಡುತ್ತೇನೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಮದ್ಯ, ಸತ್ತ ಪ್ರಾಣಿ, ಹಂದಿ ಮಾಂಸ ಮತ್ತು ವಿಗ್ರಹಗಳ ಮಾರಾಟವನ್ನು ನಿಷೇಧಿಸಿದ್ದಾರೆ." ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸತ್ತ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಲಾಗಿದೆಯೇ? ಏಕೆಂದರೆ, ಇದನ್ನು ಹಡಗುಗಳಿಗೆ ಲೇಪಿಸಲು ಮತ್ತು ತೊಗಲನ್ನು ಹದಗೊಳಿಸಲು ಬಳಸಲಾಗುತ್ತದೆ. ಜನರು ಇದನ್ನು ದೀಪ ಉರಿಸಲು ಕೂಡ ಬಳಸುತ್ತಾರೆ." ಅವರು ಹೇಳಿದರು: "ಇಲ್ಲ. ಅದು ನಿಷೇಧಿಸಲಾಗಿದೆ." ನಂತರ ಇದಕ್ಕೆ ಸಂಬಂಧಿಸಿ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಹೂದಿಗಳನ್ನು ನಾಶಗೊಳಿಸಲಿ. ಅಲ್ಲಾಹು ಅವರಿಗೆ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಿದಾಗ, ಅವರು ಅದನ್ನು ಕರಗಿಸಿ, ಅದರ ಎಣ್ಣೆಯನ್ನು ಮಾರಾಟ ಮಾಡಿದರು ಮತ್ತು ಅದರ ಹಣವನ್ನು ತಿಂದು ತೇಗಿದರು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.