Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 67 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"ಬಿಸ್ಮಿಲ್ಲಾಹಿ ರ‍್ರಹ್ಮಾನಿ ರ್‍ರಹೀಮ್ ಅವತೀರ್ಣವಾಗುವ ತನಕ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೂರಗಳು (ಕುರ್‌ಆನಿನ ಅಧ್ಯಾಯಗಳು) ಎಲ್ಲಿ ಕೊನೆಯಾಗುತ್ತವೆಯೆಂದು ತಿಳಿಯುತ್ತಿರಲಿಲ್ಲ."
ಸಹೀಹ್ ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
"ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ."
ಸಹೀಹ್ ಇದನ್ನು ಅಬೂದಾವೂದ್ (ಈ ಪದಗಳಲ್ಲಿ) ವರದಿ ಮಾಡಿದ್ದಾರೆ. ಬುಖಾರಿ (ಶುದ್ಧಿಯ ನಂತರದ) ಹೆಚ್ಚುವರಿಯಿಲ್ಲದೆ ವರದಿ ಮಾಡಿದ್ದಾರೆ.
“ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನಿಮ್ಮಲ್ಲೊಬ್ಬರು ತನ್ನ ಸಹೋದರನನ್ನು ಭೇಟಿಯಾದರೆ ಅವನಿಗೆ ಸಲಾಂ ಹೇಳಲಿ. ನಂತರ ಅವರಿಬ್ಬರ ನಡುವೆ ಒಂದು ಮರ, ಅಥವಾ ಗೋಡೆ, ಅಥವಾ ಕಲ್ಲು ಅಡ್ಡವಾಗಿ ಬಂದು, ನಂತರ ಪುನಃ ಅವರು ಭೇಟಿಯಾದರೆ ಅವನಿಗೆ ಮತ್ತೊಮ್ಮೆ ಸಲಾಂ ಹೇಳಲಿ."
ಸಹೀಹ್ ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
"ಈ ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅಂದರೆ, ದುಲ್‌ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು. ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ ಕೂಡ (ಅವನಿಗೆ ಇಷ್ಟವಿಲ್ಲವೇ)?" ಅವರು ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ ಕೂಡ (ಅವನಿಗೆ ಇಷ್ಟವಿಲ್ಲ). ಆದರೆ ಒಬ್ಬ ವ್ಯಕ್ತಿ ತನ್ನ ದೇಹ ಮತ್ತು ಆಸ್ತಿಯೊಂದಿಗೆ ರಣರಂಗಕ್ಕೆ ಹೊರಟು ಎರಡನ್ನೂ ಅಲ್ಲೇ ತ್ಯಜಿಸಿ ಬರುವ ಹೊರತು."
ಸಹೀಹ್ ಇದನ್ನು ಬುಖಾರಿ ಮತ್ತು ಅಬೂದಾವೂದ್ ವರದಿ ಮಾಡಿದ್ದಾರೆ. ಇದು ಅಬೂದಾವೂದ್‌ರ ವರದಿ.
"ಯಾವುದೇ ಒಬ್ಬ ವ್ಯಕ್ತಿ ಒಂದು ತಪ್ಪು ಮಾಡಿ, ನಂತರ ಎದ್ದು ವುದೂ ನಿರ್ವಹಿಸಿ, ನಮಾಝ್ ಮಾಡಿ, ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ, ಅಲ್ಲಾಹು ಅವನಿಗೆ ಕ್ಷಮಿಸದೇ ಇರಲಾರ." ನಂತರ ಅವರು ಈ ವಚನವನ್ನು ಪಠಿಸಿದರು: "ಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ." [ಆಲು ಇಮ್ರಾನ್:135] "
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ (ಕುಬ್ರಾದಲ್ಲಿ), ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಪೋಷಕನಿಲ್ಲದಿದ್ದರೆ ವಿವಾಹವಿಲ್ಲ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಯಾರು ಜ್ಯೋತಿಷ್ಯ ವಿದ್ಯೆಯನ್ನು ಗಳಿಸುತ್ತಾರೋ ಅವರು ವಾಮಾಚಾರದ ಒಂದು ಶಾಖೆಯನ್ನು ಗಳಿಸುತ್ತಾರೆ. ಅದರ ಬಗ್ಗೆ ಹೆಚ್ಚು ವಿದ್ಯೆಯನ್ನು ಗಳಿಸಿದವರು ಹೆಚ್ಚು ವಾಮಾಚಾರವನ್ನು ಗಳಿಸುತ್ತಾರೆ."
ಸಹೀಹ್ ಇದನ್ನು ಅಬೂದಾವೂದ್, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.