Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 16 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
ಪ್ರವಾದಿಯವರ ಸಂಗಡಿಗರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪೈಕಿ ನಮಗೆ ಕುರ್‌ಆನ್ ಕಲಿಸಿಕೊಡುತ್ತಿದ್ದವರು ಹೇಳುತ್ತಿದ್ದರು: ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ನಂತರ ಆ ಹತ್ತು ವಚನಗಳಲ್ಲಿರುವ ಜ್ಞಾನ ಮತ್ತು ಕರ್ಮವನ್ನು ಕಲಿತುಕೊಳ್ಳದೆ ಅವರು ಮುಂದಿನ ಹತ್ತು ವಚನಗಳಿಗೆ ಹೋಗುತ್ತಿರಲಿಲ್ಲ. ಅವರು ಹೇಳುತ್ತಿದ್ದರು: ನಾವು ಜ್ಞಾನ ಮತ್ತು ಕರ್ಮವನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದೆವು."
ಹಸನ್. ಇದನ್ನು ಅಹ್ಮದ್ ವರದಿ ಮಾಡಿದ್ದಾರೆ.
ನಾನು ಕೇಳಿದೆ: "ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಯಾರಿಗೆ ಹೆಚ್ಚು ಒಳಿತು ಮಾಡಬೇಕು?" ಅವರು ಉತ್ತರಿಸಿದರು: "ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಂದೆಗೆ, ನಂತರ ಹತ್ತಿರದ ಸಂಬಂಧಿಗಳಿಗೆ, ನಂತರ ಅವರ ನಂತರದ ಹತ್ತಿರದ ಸಂಬಂಧಿಗಳಿಗೆ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವ ಸತ್ಯವಿಶ್ವಾಸಿಗಳೇ ಪರಿಪೂರ್ಣ ವಿಶ್ವಾಸವನ್ನು ಹೊಂದಿದವರು. ನಿಮ್ಮಲ್ಲಿ ಯಾರು ತಮ್ಮ ಮಹಿಳೆಯರೊಡನೆ ಉತ್ತಮವಾಗಿ ವರ್ತಿಸುತ್ತಾರೋ ಅವರೇ ನಿಮ್ಮಲ್ಲಿ ಅತ್ಯುತ್ತಮ ಜನರು."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಆರಾಧಕನ ಮೇಲೆ ವಿದ್ವಾಂಸನ ಶ್ರೇಷ್ಠತೆಯು ನಿಮ್ಮಲ್ಲಿ ಅತ್ಯಂತ ಕೆಳಗಿನ ಸ್ಥಾನಮಾನವಿರುವವನ ಮೇಲೆ ನನ್ನ ಶ್ರೇಷ್ಠತೆಯಷ್ಟಿದೆ". ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು, ಅವನ ದೇವದೂತರು, ಆಕಾಶಗಳು ಮತ್ತು ಭೂಮಿಗಳ ನಿವಾಸಿಗಳು, ತನ್ನ ಬಿಲದಲ್ಲಿರುವ ಇರುವೆಯೂ ಸಹ ಮತ್ತು ಮೀನುಗಳೂ ಸಹ, ಜನರಿಗೆ ಒಳಿತನ್ನು ಕಲಿಸುವವನಿಗಾಗಿ ಪ್ರಾರ್ಥಿಸುತ್ತಾರೆ".
ಹಸನ್ ಲಿಗೈರಿಹಿ (ಇತರ ವರದಿಗಳಿಂದಾಗಿ ಹಸನ್). ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
"ನೀನು ಎಲ್ಲೇ ಇದ್ದರೂ ಅಲ್ಲಾಹನನ್ನು ಭಯಪಡು. ಕೆಟ್ಟ ಕಾರ್ಯವನ್ನು ಮಾಡಿದರೆ, ಅದರ ನಂತರ ಒಳ್ಳೆಯ ಕಾರ್ಯವನ್ನು ಮಾಡು, ಅದು ಅದನ್ನು ಅಳಿಸಿಹಾಕುತ್ತದೆ. ಮತ್ತು ಜನರೊಂದಿಗೆ ಉತ್ತಮ ನಡತೆಯಿಂದ ವರ್ತಿಸು".
ತಿರ್ಮಿದಿ ಹೇಳಿದರು: "ಹದೀಸ್ ಹಸನ್". ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
“ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ; ನನ್ನ ಸಮಾಧಿಯನ್ನು ಉತ್ಸವ ಸ್ಥಳವಾಗಿ ಮಾಡಬೇಡಿ; ನನ್ನ ಮೇಲೆ ಸ್ವಲಾತ್ ಹೇಳಿರಿ, ನೀವು ಎಲ್ಲಿದ್ದರೂ ನಿಶ್ಚಯವಾಗಿಯೂ ನಿಮ್ಮ ಸ್ವಲಾತ್ ನನ್ನನ್ನು ತಲುಪುತ್ತದೆ.”
ಹಸನ್. ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
“ಸರ್ವಶಕ್ತನಾದ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಹೆಚ್ಚು ಗೌರವಾರ್ಹವಾದ ಬೇರೆ ವಿಷಯವಿಲ್ಲ.”
ಹಸನ್. ಇದನ್ನು ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನಾನು ಉತ್ತಮ ಗುಣನಡವಳಿಕೆಗಳನ್ನು (ಮಕಾರಿಮಲ್ ಅಖ್ಲಾಖ್) ಪರಿಪೂರ್ಣಗೊಳಿಸುವುದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ".
ಹಸನ್. ಇದನ್ನು ಬುಖಾರಿ (ಅಲ್-ಅದಬುಲ್-ಮುಫ್ರದ್‌ನಲ್ಲಿ), ಅಹ್ಮದ್ ಮತ್ತು ಬೈಹಕಿ ವರದಿ ಮಾಡಿದ್ದಾರೆ.