Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 3 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

“ಸೌಮ್ಯವಾಗಿ ಮಾರಾಟ ಮಾಡುವ, ಖರೀದಿಸುವ ಮತ್ತು ಸಾಲ ಮರುಪಾವತಿಯನ್ನು ಕೇಳುವ ವ್ಯಕ್ತಿಗೆ ಅಲ್ಲಾಹು ದಯೆ ತೋರಲಿ.”
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
"ಎಲ್ಲಾ ಒಳ್ಳೆಯ ಕಾರ್ಯಗಳು ದಾನವಾಗಿವೆ."
ಸಹೀಹ್ ಇದನ್ನು ಬುಖಾರಿ ಜಾಬಿರ್ ರಿಂದ ಮತ್ತು ಮುಸ್ಲಿಂ ಹುದೈಫಾ ರಿಂದ ವರದಿ ಮಾಡಿದ್ದಾರೆ.
"ನಾವು ಒಂದು ಯುದ್ಧದ ಪ್ರಯಾಣದಲ್ಲಿದ್ದೆವು. ಆಗ ಮುಹಾಜಿರ್‌ಗಳಲ್ಲಿ ಒಬ್ಬ ವ್ಯಕ್ತಿ ಅನ್ಸಾರಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿಯ ಪೃಷ್ಠಕ್ಕೆ (ಹಿಂಬದಿಗೆ) ಒದ್ದನು (ಅಥವಾ ಹೊಡೆದನು). ಆಗ ಅನ್ಸಾರಿ ವ್ಯಕ್ತಿ: 'ಓ ಅನ್ಸಾರಿಗಳೇ (ಸಹಾಯಕ್ಕೆ ಬನ್ನಿ)!' ಎಂದು ಕೂಗಿದನು. ಮತ್ತು ಮುಹಾಜಿರ್ ವ್ಯಕ್ತಿ: 'ಓ ಮುಹಾಜಿರ್‌ಗಳೇ (ಸಹಾಯಕ್ಕೆ ಬನ್ನಿ)!' ಎಂದು ಕೂಗಿದನು. ಅಲ್ಲಾಹು, ತನ್ನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದು ಕೇಳಿಸುವಂತೆ ಮಾಡಿದನು. ಆಗ ಅವರು: 'ಏನಿದು?' ಎಂದು ಕೇಳಿದರು. ಅವರು (ಜನರು) ಹೇಳಿದರು: 'ಒಬ್ಬ ಮುಹಾಜಿರ್ ಅನ್ಸಾರಿಯೊಬ್ಬನ ಪೃಷ್ಠಕ್ಕೆ ಹೊಡೆದನು. ಆಗ ಅನ್ಸಾರಿ: ಓ ಅನ್ಸಾರಿಗಳೇ! ಎಂದೂ, ಮುಹಾಜಿರ್: ಓ ಮುಹಾಜಿರ್‌ಗಳೇ! ಎಂದೂ ಕೂಗಿದರು'. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ಅದನ್ನು (ಆ ಕರೆಯನ್ನು) ಬಿಟ್ಟುಬಿಡಿ. ಖಂಡಿತವಾಗಿಯೂ ಅದು ದುರ್ನಾತ ಬೀರುವಂತಹುದು (ಅಸಹ್ಯವಾದುದು)'." ಜಾಬಿರ್ ಹೇಳುತ್ತಾರೆ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಬಂದಾಗ ಅನ್ಸಾರಿಗಳು ಹೆಚ್ಚಿದ್ದರು. ನಂತರ ಮುಹಾಜಿರ್‌ಗಳ ಸಂಖ್ಯೆ ಹೆಚ್ಚಾಯಿತು. (ಈ ಘಟನೆ ನಡೆದಾಗ) ಅಬ್ದುಲ್ಲಾ ಬಿನ್ ಉಬೈ ಹೇಳಿದನು: 'ಅವರು ಹೀಗೆ ಮಾಡಿದರೇ? ಅಲ್ಲಾಹನ ಆಣೆ, ನಾವು ಮದೀನಕ್ಕೆ ಮರಳಿದರೆ, ಗೌರವವುಳ್ಳವರು ಅವಮಾನಿತರನ್ನು ಅಲ್ಲಿಂದ ಹೊರಹಾಕುತ್ತಾರೆ'. ಆಗ ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: 'ಓ ಅಲ್ಲಾಹನ ಸಂದೇಶವಾಹಕರೇ, ನನ್ನನ್ನು ಬಿಡಿ, ಈ ಮುನಾಫಿಕ್‌ನ (ಕಪಟವಿಶ್ವಾಸಿಯ) ಕತ್ತನ್ನು ಕಡಿಯುತ್ತೇನೆ'. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ಅವನನ್ನು ಬಿಡಿ. ಮುಹಮ್ಮದ್ ತಮ್ಮ ಸಂಗಾತಿಗಳನ್ನೇ ಕೊಲ್ಲುತ್ತಾರೆ ಎಂದು ಜನ ಮಾತನಾಡಿಕೊಳ್ಳಬಾರದು'."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.