Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 3 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝಿಗಾಗಿ ತಕ್ಬೀರ್ ಹೇಳಿದರೆ, ಕುರ್‌ಆನ್ ಪಠಿಸುವುದಕ್ಕೆ ಮೊದಲು ಸ್ವಲ್ಪ ಹೊತ್ತು ಮೌನವಾಗಿರುತ್ತಿದ್ದರು. ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನ್ನ ತಂದೆ-ತಾಯಿಗಳನ್ನು ನಿಮಗೆ ಅರ್ಪಿಸುತ್ತಿದ್ದೇನೆ. ತಕ್ಬೀರ್ ಮತ್ತು ಕುರ್‌ಆನ್ ಪಠಣದ ನಡುವೆ ನೀವು ಮೌನವಾಗಿರುತ್ತೀರಿ. ಆಗ ನೀವು ಏನು ಪಠಿಸುತ್ತೀರಿ? ಅವರು ಉತ್ತರಿಸಿದರು: "ನಾನು ಹೀಗೆ ಹೇಳುತ್ತೇನೆ: ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮಗಳ ನಡುವೆ ಅಂತರವಿಟ್ಟಂತೆ ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವಿಡು. ಓ ಅಲ್ಲಾಹ್! ಬಿಳಿಬಟ್ಟೆಯನ್ನು ಕೊಳೆಯಿಂದ ಶುಚಿಗೊಳಿಸುವಂತೆ ನನ್ನ ಪಾಪಗಳಿಂದ ನನ್ನನ್ನು ಶುಚಿಗೊಳಿಸು. ಓ ಅಲ್ಲಾಹ್! ಮಂಜು, ನೀರು ಮತ್ತು ಹಿಮದ ಮೂಲಕ ನನ್ನ ಪಾಪಗಳಿಂದ ನನ್ನನ್ನು ತೊಳೆದುಬಿಡು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಯಾರು ಎಲ್ಲಾ ನಮಾಝ್‌ಗಳ ನಂತರ ಮೂವತ್ತಮೂರು ಬಾರಿ ಸುಬ್‌ಹಾನಲ್ಲಾಹ್, ಮೂವತ್ತಮೂರು ಬಾರಿ ಅಲ್-ಹಮ್ದುಲಿಲ್ಲಾಹ್ ಮತ್ತು ಮೂವತ್ತಮೂರು ಬಾರಿ ಅಲ್ಲಾಹು ಅಕ್ಬರ್ ಹೇಳುತ್ತಾರೋ—ಇವು ಒಟ್ಟು ತೊಂಬತ್ತೊಂಬತ್ತು— ಮತ್ತು ನೂರನ್ನು ಪೂರ್ತಿ ಮಾಡಲು, ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್ ಎಂದು ಪಠಿಸುತ್ತಾರೋ, ಅವರ ಪಾಪಗಳೆಲ್ಲವನ್ನೂ ಕ್ಷಮಿಸಲಾಗುವುದು. ಅವು ಸಮುದ್ರದ ನೊರೆಗಳಷ್ಟಿದ್ದರೂ ಸಹ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸುತ್ತಾ ಹೇಳುತ್ತಿದ್ದರು: "ಓ ಅಲ್ಲಾಹ್! ನಾನು ನಿನ್ನಲ್ಲಿ ಸಮಾಧಿಯ ಶಿಕ್ಷೆಯಿಂದ, ನರಕ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ." ಮುಸ್ಲಿಂರ ಇನ್ನೊಂದು ವರದಿಯಲ್ಲಿ: "ನಿಮ್ಮಲ್ಲೊಬ್ಬನು ಕೊನೆಯ ತಶಹ್ಹುದ್ ಪಠಿಸಿದ ನಂತರ ನಾಲ್ಕು ವಿಷಯಗಳಿಂದ ಅಲ್ಲಾಹನಲ್ಲಿ ರಕ್ಷೆ ಬೇಡಲಿ. ನರಕ ಶಿಕ್ಷೆಯಿಂದ, ಸಮಾಧಿಯ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಕೆಡುಕಿನಿಂದ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.