عربي - Arabic English Qafár af - Afar Afrikaans - Afrikanns Akan Shqip - Albanian አማርኛ - Amharic Հայերեն - Armenian অসমীয়া - Assamese Azərbaycanca - Azerbaijani Bamanankan - Bambara Bassa Bemba বাংলা - Bengali Bosanski - Bosnian Български - Bulgarian မြန်မာဘာသာ - Burmese Bisaya - Cebuano Cham Нохчий - Chechen chiCheŵa - Chewa 中文 - Chinese Адыгэбзэ - Circassian Hrvatski - Croatian Česky - Czech Dagbani Dansk - Danish فارسی دری - Dari Dendi ދިވެހި ބަސް - Dhivehi Nederlands - Dutch إستوني - Estonian Suomi - Finnish Français - French Fulfulde - Fula ქართული - Georgian Deutsch - German Ελληνικά - Greek ગુજરાતી - Gujrati Kreyòl ayisyen - Haitian Creole Hausa हिन्दी - Hindi Magyar - Hungarian Igbo Indonesia - Indonesian Italiano - Italian 日本語 - Japanese Jóola - Jola ಕನ್ನಡ - Kannada Қазақша - Kazakh ភាសាខ្មែរ - Khmer Kikuyu Ikinyarwanda - Kinyarwanda Ikirundi - Kirundi 한국어 - Korean كوردی سۆرانی - kurdish كوردي kurmancî - Kurmanji Kyrgyz ລາວ - Lao latviešu - Latvian Lingala lietuvių - Lithuanian Luganda Македонски - Macedonian Maguindanaon Malagasy - Malagasy Bahasa Melayu - Malay മലയാളം - Malayalam Mandinka मराठी - Marathi Mõõré - Moore नेपाली - Nepali أنكو - NKo Norwegian ଓଡ଼ିଆ - Odia oromoo - Oromo پښتو - Pashto فارسی - Persian Polski - Polish Portuguese ਪੰਜਾਬੀ - Punjabi Română - Romanian Русский - Russian Српски - Serbian Shona සිංහල - Sinhala Slovenščina - Slovenian Soomaaliga - Somali Soninke Sesotho - Sotho Español - Spanish Kiswahili - Swahili Svenska - Swedish Tagalog Тоҷикӣ - Tajik தமிழ் - Tamil తెలుగు - Telugu ไทย - Thai ትግረኛ - Tigrinya Türkçe - Turkish Ukrainian اردو - Urdu ئۇيغۇرچە - Uyghur Ўзбек - Uzbek Việt Nam - Vietnamese Wolof Yao Yorùbá - Yoruba Zarma زولو - Zulu
839 ಹದೀಸ್ಗಳು
ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ
ವರ್ಗಗಳು
ಹದೀಸ್ನ ದರ್ಜೆ
ವರದಿಯಾದ ಗ್ರಂಥ
ವರದಿಗಾರ
ಎಲ್ಲಾ ವರದಿಗಾರರನ್ನು ತೋರಿಸಿ (12)
"ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಬಲಗಡೆಗೆ ಮತ್ತು ತಮ್ಮ ಎಡಗಡೆಗೆ ಸಲಾಂ ಹೇಳುವುದನ್ನು ನೋಡುತ್ತಿದ್ದೆನು. ಎಷ್ಟರಮಟ್ಟಿಗೆಂದರೆ (ಅವರು ತಿರುಗುವಾಗ) ನಾನು ಅವರ ಕೆನ್ನೆಯ ಬಿಳುಪನ್ನು ಕಾಣುತ್ತಿದ್ದೆನು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ನನಗೆ ಏಳು ಎಲುಬುಗಳ ಮೇಲೆ ಸಾಷ್ಟಾಂಗ ಮಾಡಲು ಆಜ್ಞಾಪಿಸಲಾಗಿದೆ. ಅವು: ಹಣೆ"—ಇದನ್ನು ಹೇಳುವಾಗ ಅವರು ತಮ್ಮ ಕೈಯಿಂದ ಮೂಗಿನ ಕಡೆಗೆ ತೋರಿಸಿದರು—"ಕೈಗಳು, ಮೊಣಕಾಲುಗಳು ಮತ್ತು ಪಾದಗಳ ತುದಿಗಳು. ಮತ್ತು ಬಟ್ಟೆ ಹಾಗೂ ಕೂದಲನ್ನು ಮಡಚಬಾರದೆಂದು ಕೂಡ ಆಜ್ಞಾಪಿಸಲಾಗಿದೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
ಒಮ್ಮೆ ಕೆಲವು ಜನರು ಸಹಲ್ ಬಿನ್ ಸಅದ್ ಸಾಇದೀಯವರ ಬಳಿಗೆ ಬಂದರು. ಮಿಂಬರ್ (ಪ್ರವಚನ ಪೀಠ) ವನ್ನು ಯಾವುದರಿಂದ ನಿರ್ಮಿಸಲಾಗಿದೆಯೆಂಬ ಬಗ್ಗೆ ಅವರಿಗೆ ತರ್ಕವಿತ್ತು. ಅವರು ಅದರ ಬಗ್ಗೆ ಕೇಳಿದಾಗ, ಸಹಲ್ ಉತ್ತರಿಸಿದರು: "ಅಲ್ಲಾಹನಾಣೆ! ಅದನ್ನು ಯಾವುದರಿಂದ ತಯಾರಿಸಲಾಗಿದೆಯೆಂದು ನನಗೆ ತಿಳಿದಿದೆ. ಅದನ್ನು ಸ್ಥಾಪಿಸಲಾದ ಮೊದಲನೇ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರಲ್ಲಿ ಕುಳಿತುಕೊಂಡ ಮೊದಲ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್ಗಳಲ್ಲಿ ಸೇರಿದ ಒಬ್ಬ ಮಹಿಳೆಗೆ—ಸಹಲ್ ಆ ಮಹಿಳೆಯ ಹೆಸರನ್ನು ಹೇಳಿದ್ದರು—ಹೇಳಿ ಕಳುಹಿಸಿದರು: "ನನಗೆ ಕೆಲವು ಮೆಟ್ಟಲುಗಳಿರುವ ಪೀಠವನ್ನು ತಯಾರಿಸಿಕೊಡಲು ನಿನ್ನ ಬಡಗಿ ಗುಲಾಮನಿಗೆ ಹೇಳು. ನಾನು ಅದರಲ್ಲಿ ಕುಳಿತು ಜನರೊಂದಿಗೆ ಮಾತನಾಡುವುದಕ್ಕಾಗಿ." ಅವಳು ತನ್ನ ಗುಲಾಮನಿಗೆ ಆದೇಶಿಸಿದಾಗ ಆತ ಅದನ್ನು ಗಾಬದ (ಮದೀನದ ಬಳಿಯ ಒಂದು ಸ್ಥಳ) ಮರದಿಂದ ತಯಾರಿಸಿ ಆಕೆಯ ಕೈಗೆ ನೀಡಿದನು. ಅವಳು ಅದನ್ನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಳುಹಿಸಿಕೊಟ್ಟಳು. ಅವರು ಅದನ್ನು ಅದರ ಸ್ಥಳದಲ್ಲಿ ಸ್ಥಾಪಿಸುವಂತೆ ಹೇಳಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಮೇಲೇರಿ ನಮಾಝ್ ನಿರ್ವಹಿಸುವುದನ್ನು ನಾನು ನೋಡಿದೆ. ಅವರು ಅದರ ಮೇಲಿಂದಲೇ ತಕ್ಬೀರ್ ಹೇಳಿದರು ಮತ್ತು ರುಕೂ ಮಾಡಿದರು. ನಂತರ ಹಿಂಭಾಗಕ್ಕೆ ಚಲಿಸುತ್ತಾ ಕೆಳಗಿಳಿದು ಪೀಠದ ಬುಡದಲ್ಲಿ ಸುಜೂದ್ ಮಾಡಿದರು. ನಂತರ ಪುನಃ ಅದರ ಮೇಲೇರಿದರು. ನಮಾಝ್ ಮುಗಿಸಿದ ನಂತರ ಅವರು ಜನರ ಕಡೆಗೆ ತಿರುಗಿ ಹೇಳಿದರು: "ಓ ಜನರೇ! ನಾನು ಹೀಗೆ ಮಾಡಿದ್ದು ನೀವು ನನ್ನನ್ನು ಅನುಸರಿಸುವುದಕ್ಕಾಗಿ ಮತ್ತು ನನ್ನ ನಮಾಝನ್ನು ಕಲಿಯುವುದಕ್ಕಾಗಿ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಅನ್ನು 'ತಕ್ಬೀರ್' (ಅಲ್ಲಾಹು ಅಕ್ಬರ್ ಎಂದು ಹೇಳುವ) ಮೂಲಕ ಮತ್ತು ಕುರ್ಆನ್ ಪಾರಾಯಣವನ್ನು 'ಅಲ್-ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್' (ಸೂರ ಅಲ್-ಫಾತಿಹಾ) ಮೂಲಕ ಆರಂಭಿಸುತ್ತಿದ್ದರು. ಅವರು 'ರುಕೂ' ಮಾಡಿದಾಗ, ತಮ್ಮ ತಲೆಯನ್ನು (ತುಂಬಾ) ಮೇಲಕ್ಕೆ ಎತ್ತುತ್ತಿರಲಿಲ್ಲ ಮತ್ತು (ತುಂಬಾ) ತಗ್ಗಿಸುತ್ತಿರಲಿಲ್ಲ, ಬದಲಿಗೆ (ಅವೆರಡರ) ನಡುವೆ (ಸಮವಾಗಿ) ಇರಿಸುತ್ತಿದ್ದರು. ಅವರು ರುಕೂವಿನಿಂದ ತಮ್ಮ ತಲೆಯನ್ನು ಎತ್ತಿದಾಗ, ನೇರವಾಗಿ ನಿಲ್ಲುವವರೆಗೆ ಸುಜೂದ್ ಮಾಡುತ್ತಿರಲಿಲ್ಲ. ಅವರು (ಮೊದಲ) ಸುಜೂದ್ನಿಂದ ತಮ್ಮ ತಲೆಯನ್ನು ಎತ್ತಿದಾಗ, ನೇರವಾಗಿ ಕುಳಿತುಕೊಳ್ಳುವವರೆಗೆ (ಎರಡನೇ) ಸುಜೂದ್ ಮಾಡುತ್ತಿರಲಿಲ್ಲ. ಅವರು ಪ್ರತಿ ಎರಡು ರಕಅತ್ಗಳಲ್ಲಿ (ಕುಳಿತಾಗ) 'ಅತ್ತಹಿಯ್ಯಾತ್' ಹೇಳುತ್ತಿದ್ದರು. ಅವರು ತಮ್ಮ ಎಡಗಾಲನ್ನು ಹಾಸಿ (ಅದರ ಮೇಲೆ ಕುಳಿತು), ತಮ್ಮ ಬಲಗಾಲನ್ನು ನೆಟ್ಟಗೆ ಇಡುತ್ತಿದ್ದರು. ಅವರು 'ಉಖ್ಬತು ಶ್ಶೈತಾನ್' (ಶೈತಾನನ ಕೂರುವಿಕೆ) ಅನ್ನು ನಿಷೇಧಿಸುತ್ತಿದ್ದರು. ಒಬ್ಬ ವ್ಯಕ್ತಿಯು ತನ್ನ ತೋಳುಗಳನ್ನು, ಕಾಡುಪ್ರಾಣಿಯು ಹಾಸುವಂತೆ (ನೆಲದ ಮೇಲೆ) ಹಾಸುವುದನ್ನು ನಿಷೇಧಿಸುತ್ತಿದ್ದರು. ಅವರು ನಮಾಝ್ ಅನ್ನು 'ತಸ್ಲೀಮ್' (ಸಲಾಮ್ ಹೇಳುವ) ಮೂಲಕ ಮುಗಿಸುತ್ತಿದ್ದರು".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು, ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು) ಎಂದು ಹೇಳುತ್ತಿದ್ದರು.
ಸಹೀಹ್ ಇದನ್ನು ಅಬೂದಾವೂದ್, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಕಳ್ಳತನ ಮಾಡುವವರಲ್ಲಿ ಅತಿಕೆಟ್ಟವರು ನಮಾಝ್ನಲ್ಲಿ ಕಳ್ಳತನ ಮಾಡುವವರು." ಸಹಾಬಿಗಳು ಕೇಳಿದರು: "ನಮಾಝ್ನಲ್ಲಿ ಕಳ್ಳತನ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅದರ ರುಕೂ ಮತ್ತು ಸುಜೂದ್ಗಳನ್ನು ಪೂರ್ಣಗೊಳಿಸದಿರುವುದು."
ಸಹೀಹ್ ಇದನ್ನು ಇಬ್ನ್ ಹಿಬ್ಬಾನ್ ವರದಿ ಮಾಡಿದ್ದಾರೆ.
"ನೀವು ಸಜ್ದಾ (ಸಾಷ್ಟಾಂಗ) ಮಾಡುವಾಗ, ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ಮೊಣಕೈಗಳನ್ನು ಎತ್ತಿಕೊಳ್ಳಿ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.