Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 3 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

"ಖಂಡಿತವಾಗಿಯೂ ಅಲ್ಲಾಹು ನಿದ್ರಿಸುವುದಿಲ್ಲ, ಮತ್ತು ನಿದ್ರಿಸುವುದು ಅವನಿಗೆ ತಕ್ಕುದಲ್ಲ. ಅವನು ತಕ್ಕಡಿಯನ್ನು ತಗ್ಗಿಸುತ್ತಾನೆ ಮತ್ತು ಅದನ್ನು ಏರಿಸುತ್ತಾನೆ. ಹಗಲಿನ ಕರ್ಮಗಳಿಗಿಂತ ಮೊದಲು ರಾತ್ರಿಯ ಕರ್ಮಗಳು ಅವನ ಕಡೆಗೆ ಏರಿಸಲ್ಪಡುತ್ತವೆ, ಮತ್ತು (ಮುಂದಿನ) ರಾತ್ರಿಯ ಕರ್ಮಗಳಿಗಿಂತ ಮೊದಲು ಹಗಲಿನ ಕರ್ಮಗಳು (ಅವನ ಕಡೆಗೆ ಏರಿಸಲ್ಪಡುತ್ತವೆ). ಅವನ ಪರದೆಯು 'ಬೆಳಕಾಗಿದೆ' — ಇನ್ನೊಂದು ವರದಿಯಲ್ಲಿ: ಬೆಂಕಿ ಎಂದಿದೆ — ಒಂದು ವೇಳೆ ಅವನು ಅದನ್ನು (ಪರದೆಯನ್ನು) ಸರಿಸಿದರೆ, ಅವನ ಮುಖದ ಪ್ರಕಾಶವು ಸೃಷ್ಟಿಗಳಲ್ಲಿ ಅವನ ದೃಷ್ಟಿಯು ತಲುಪುವವರೆಗಿನ ಎಲ್ಲವನ್ನೂ ಸುಟ್ಟುಹಾಕುತ್ತಿತ್ತು".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ನೀವು ನನಗೆ, ಅಲ್ಲಾಹುವಿನೊಂದಿಗೆ ಯಾವುದನ್ನೂ ಸಹಭಾಗಿಯಾಗಿ (ಶಿರ್ಕ್) ಮಾಡುವುದಿಲ್ಲವೆಂದು, ಕಳ್ಳತನ ಮಾಡುವುದಿಲ್ಲವೆಂದು, ವ್ಯಭಿಚಾರ ಮಾಡುವುದಿಲ್ಲವೆಂದು, ನಿಮ್ಮ ಮಕ್ಕಳನ್ನು ಕೊಲ್ಲುವುದಿಲ್ಲವೆಂದು, ನಿಮ್ಮ ಕೈಕಾಲುಗಳ ನಡುವೆ (ಅಂದರೆ ನಿಮ್ಮ ಮುಂದೆಯೇ/ಸ್ವತಃ) ನೀವು ಸೃಷ್ಟಿಸುವ ಯಾವುದೇ ಸುಳ್ಳು ಆರೋಪವನ್ನು ತರುವುದಿಲ್ಲವೆಂದು, ಮತ್ತು ಒಳಿತಿನ ವಿಷಯದಲ್ಲಿ ಅವಿಧೇಯತೆ ತೋರುವುದಿಲ್ಲವೆಂದು ಬೈಅತ್ (ನಿಷ್ಠೆ ಪ್ರತಿಜ್ಞೆ) ಮಾಡಿರಿ. ನಿಮ್ಮಲ್ಲಿ ಯಾರು (ಈ ಪ್ರತಿಜ್ಞೆಯನ್ನು) ಪೂರೈಸುತ್ತಾನೋ, ಅವನ ಪ್ರತಿಫಲವು ಅಲ್ಲಾಹುವಿನ ಮೇಲಿದೆ. ಯಾರು ಇವುಗಳಲ್ಲಿ (ಶಿರ್ಕ್ ಹೊರತುಪಡಿಸಿ) ಯಾವುದನ್ನಾದರೂ ಮಾಡಿ, ಅದಕ್ಕಾಗಿ ಈ ಜಗತ್ತಿನಲ್ಲಿಯೇ ಶಿಕ್ಷಿಸಲ್ಪಡುತ್ತಾನೋ, ಅದು ಅವನಿಗಾಗಿ ಪ್ರಾಯಶ್ಚಿತ್ತವಾಗುತ್ತದೆ. ಆದರೆ ಯಾರು ಇವುಗಳಲ್ಲಿ ಯಾವುದನ್ನಾದರೂ ಮಾಡಿ, ನಂತರ ಅಲ್ಲಾಹು ಅದನ್ನು ಮರೆಮಾಚುತ್ತಾನೋ, ಅವನ ವಿಷಯವು ಅಲ್ಲಾಹುವಿನ ಬಳಿ ಇರುತ್ತದೆ. ಅವನು ಬಯಸಿದರೆ ಅವನನ್ನು ಕ್ಷಮಿಸುತ್ತಾನೆ, ಮತ್ತು ಅವನು ಬಯಸಿದರೆ ಅವನನ್ನು ಶಿಕ್ಷಿಸುತ್ತಾನೆ." (ಉಬಾದ ಹೇಳುತ್ತಾರೆ) ಆಗ ನಾವು ಈ ವಿಷಯಗಳಲ್ಲಿ ಅವರಿಗೆ ಬೈಅತ್ ಮಾಡಿದೆವು.
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಿಶ್ಚಯವಾಗಿಯೂ ಅಲ್ಲಾಹು ಹಗಲಿನಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ರಾತ್ರಿಯಲ್ಲಿ ಕೈ ಚಾಚುತ್ತಾನೆ. ರಾತ್ರಿಯಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ಹಗಲಿನಲ್ಲಿ ಕೈ ಚಾಚುತ್ತಾನೆ. ಎಲ್ಲಿಯವರೆಗೆಂದರೆ, ಸೂರ್ಯ ಪಶ್ಚಿಮದಿಂದ ಉದಯವಾಗುವವರೆಗೆ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.