Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 1 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

ವರದಿಯಾದ ಗ್ರಂಥ

"ಚಾಪೆಯನ್ನು ನೇಯುವಾಗ ಒಂದೊಂದೇ ಹುಲ್ಲನ್ನು ಸೇರಿಸುವಂತೆ ಹೃದಯಗಳ ಮೇಲೆ ಫಿತ್ನಾಗಳು ಪ್ರದರ್ಶಿತವಾಗುತ್ತವೆ. ಯಾವ ಹೃದಯವು ಅದನ್ನು ಹೀರಿಕೊಳ್ಳುತ್ತದೆಯೋ, ಅದರಲ್ಲಿ ಒಂದು ಕಪ್ಪು ಚುಕ್ಕೆ ಹಾಕಲ್ಪಡುತ್ತದೆ. ಯಾವ ಹೃದಯವು ಅದನ್ನು ನಿರಾಕರಿಸುತ್ತದೆಯೋ, ಅದರಲ್ಲಿ ಒಂದು ಬಿಳಿ ಚುಕ್ಕೆ ಹಾಕಲ್ಪಡುತ್ತದೆ. ಕೊನೆಗೆ ಹೃದಯಗಳು ಎರಡು ವಿಧಗಳಾಗುತ್ತವೆ: ಒಂದು ನುಣುಪಾದ ಬಂಡೆಯಂತೆ ಬಿಳುಪಾಗಿರುತ್ತದೆ. ಆಕಾಶಗಳು ಮತ್ತು ಭೂಮಿ ಇರುವವರೆಗೆ ಯಾವುದೇ ಫಿತ್ನಾ ಅದಕ್ಕೆ ಹಾನಿ ಮಾಡುವುದಿಲ್ಲ. ಇನ್ನೊಂದು ಕಪ್ಪು ಮತ್ತು ವಿವರ್ಣವಾಗಿ, ಕವುಚಿ ಹಾಕಿದ ಲೋಟದಂತೆ ಇರುತ್ತದೆ. ಅದು ಒಳಿತನ್ನು ಸ್ವೀಕರಿಸುವುದಿಲ್ಲ ಮತ್ತು ಕೆಡುಕನ್ನು ತಿರಸ್ಕರಿಸುವುದಿಲ್ಲ. ತನ್ನ ಮನದ ಇಚ್ಛೆಯು ಕುಡಿಸಿದ್ದನ್ನು ಹೊರತುಪಡಿಸಿ". ಹುದೈಫಾ ಹೇಳುತ್ತಾರೆ: "ಮತ್ತು ನಾನು ಅವರಿಗೆ (ಉಮರ್‌ಗೆ) ಹೇಳಿದೆನು: ನಿಮ್ಮ ಮತ್ತು ಅದರ ನಡುವೆ ಮುಚ್ಚಿದ ಒಂದು ಬಾಗಿಲಿದೆ, ಅದು ಮುರಿಯುವ ಸಮಯ ಹತ್ತಿರದಲ್ಲಿದೆ." ಉಮರ್ ಕೇಳಿದರು: "ಅದು ಮುರಿಯುವುದೇ? ನಿನಗೆ ತಂದೆಯಿಲ್ಲದಿರಲಿ! ಒಂದು ವೇಳೆ ಅದನ್ನು ತೆರೆಯಲಾಗಿದ್ದರೆ, ಬಹುಶಃ ಅದನ್ನು ಮತ್ತೆ ಮುಚ್ಚಬಹುದಿತ್ತೇನೋ?" ನಾನು ಹೇಳಿದೆನು: "ಇಲ್ಲ, ಬದಲಿಗೆ ಅದು ಮುರಿಯಲ್ಪಡುತ್ತದೆ". ನಾನು ಅವರಿಗೆ (ಉಮರ್‌ಗೆ) ಹೇಳಿದೆನು: ಆ ಬಾಗಿಲು ಎಂದರೆ ಒಬ್ಬ ವ್ಯಕ್ತಿ, ಅವನು ಕೊಲ್ಲಲ್ಪಡುತ್ತಾನೆ ಅಥವಾ ಮರಣ ಹೊಂದುತ್ತಾನೆ - ಇದು ಕಟ್ಟು ಕಥೆಗಳಲ್ಲದ (ನಿಜವಾದ) ಹದೀಸ್ ಆಗಿದೆ. (ವರದಿಗಾರ) ಅಬೂ ಖಾಲಿದ್ ಹೇಳುತ್ತಾರೆ: ನಾನು ಸಅದ್ (ಇನ್ನೊಬ್ಬ ವರದಿಗಾರ) ರಲ್ಲಿ ಕೇಳಿದೆನು: ಓ ಅಬೂ ಮಾಲಿಕ್, 'ಅಸ್ವದ್ ಮುರ್ಬಾದ್' ಎಂದರೇನು? ಅವರು ಹೇಳಿದರು: ಕಪ್ಪಿನಲ್ಲಿ ಗಡುಸಾದ ಬಿಳುಪು ಮಿಶ್ರಿತವಾಗಿರುವುದು. ನಾನು ಕೇಳಿದೆನು: ಹಾಗಾದರೆ 'ಅಲ್-ಕೂಝು ಮುಝಖ್ಖಿಯ್ಯನ್' ಎಂದರೇನು? ಅವರು ಹೇಳಿದರು: ಕವುಚಿ ಹಾಕಿದ್ದು.
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.