Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 5 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

ನಾವು ಮಳೆ ಮತ್ತು ತೀವ್ರ ಕತ್ತಲೆಯ ರಾತ್ರಿ ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗಾಗಿ ನಮಾಝ್ ಮಾಡಲು ಹುಡುಕುತ್ತಾ ಹೊರಟೆವು. ನಾನು ಅವರನ್ನು ಕಂಡಾಗ, ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ನಂತರ ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ಅವರು ಹೇಳಿದರು: “ಹೇಳು.” ನಾನು ಕೇಳಿದೆ: "ನಾನು ಏನು ಹೇಳಬೇಕು?" ಅವರು ಹೇಳಿದರು: ಸಂಜೆಯಾಗುವಾಗ ಮತ್ತು ಬೆಳಗಾಗುವಾಗ "ಕುಲ್ ಹುವಲ್ಲಾಹು ಅಹದ್" (ಸೂರ ಇಖ್ಲಾಸ್) ಮತ್ತು ರಕ್ಷೆ ಬೇಡುವ ಎರಡು ಸೂರಗಳನ್ನು (ಸೂರ ಫಲಕ್ ಮತ್ತು ಸೂರ ನಾಸ್) ಮೂರು ಬಾರಿ ಪಠಿಸು. ಅದು ನಿನಗೆ ಎಲ್ಲದ್ದಕ್ಕೂ ಸಾಕಾಗುತ್ತದೆ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ನಸಾಈ ವರದಿ ಮಾಡಿದ್ದಾರೆ.
"ಯಾರು ಮೂರು ಬಾರಿ, 'ಯಾರ ಹೆಸರಿನೊಂದಿಗೆ ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ ಯಾವುದೇ ವಸ್ತು ಹಾನಿ ಮಾಡುವುದಿಲ್ಲವೋ ಆ ಅಲ್ಲಾಹನ ಹೆಸರಿನಲ್ಲಿ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ' ಎಂದು ಹೇಳುತ್ತಾನೋ, ಅವನಿಗೆ ಬೆಳಗ್ಗಿನ ತನಕ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ. ಯಾರು ಇದನ್ನು ಬೆಳಗ್ಗೆ ಹೇಳುತ್ತಾನೋ, ಅವನಿಗೆ ಸಂಜೆಯ ತನಕ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ." ಅಬಾನ್ ಬಿನ್ ಉಸ್ಮಾನ್ ರಿಗೆ ಪಕ್ಷಪಾತ ಸಂಭವಿಸಿತ್ತು. ಅವರಿಂದ ಈ ಹದೀಸನ್ನು ಕೇಳಿದ ವ್ಯಕ್ತಿ ಅವರ ಕಡೆಗೆ ನೋಡತೊಡಗಿದನು. ಅವರು ಕೇಳಿದರು: "ನೀನೇಕೆ ನನ್ನನ್ನು ನೋಡುತ್ತಿರುವೆ? ಅಲ್ಲಾಹನಾಣೆ! ನಾನು ಉಸ್ಮಾನರ ಮೇಲೆ ಸುಳ್ಳು ಹೇಳಿಲ್ಲ. ಉಸ್ಮಾನ್ ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೂ ಸುಳ್ಳು ಹೇಳಿಲ್ಲ. ಆದರೆ ನಿಜಸಂಗತಿ ಏನೆಂದರೆ ನನಗೆ ಪಾರ್ಶ್ವವಾಯು ಬಾಧಿಸಿದ ದಿನ ನಾನು ಕೋಪದಲ್ಲಿದ್ದೆ ಮತ್ತು ಈ ಪ್ರಾರ್ಥನೆಯನ್ನು ಪಠಿಸಲು ಮರೆತಿದ್ದೆ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ (ಕುಬ್ರಾದಲ್ಲಿ), ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆ ಯಾವುದೆಂದರೆ ನೀವು ಹೀಗೆ ಪಠಿಸುವುದು: ಓ ಅಲ್ಲಾಹ್! ನೀನೇ ನನ್ನ ಪರಿಪಾಲಕ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ ಮತ್ತು ನಾನು ನಿನ್ನ ದಾಸನಾಗಿರುವೆ. ನಾನು ನನಗೆ ಸಾಧ್ಯವಾದಷ್ಟು ನಿನ್ನ ಕರಾರು ಮತ್ತು ವಾಗ್ದಾನಕ್ಕೆ ನಿಷ್ಠನಾಗಿರುತ್ತೇನೆ. ನಾನು ಮಾಡಿದ ಪಾಪಗಳ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನನ್ನ ಮೇಲಿರುವ ನಿನ್ನ ಅನುಗ್ರಹಗಳನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಾನು ಮಾಡಿದ ಪಾಪಗಳನ್ನೂ ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ನನ್ನನ್ನು ಕ್ಷಮಿಸು. ಏಕೆಂದರೆ, ನಿಶ್ಚಯವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ." ಅವರು (ಪ್ರವಾದಿ) ಮುಂದುವರಿದು ಹೇಳಿದರು: "ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ಹಗಲಿನಲ್ಲಿ ಪಠಿಸಿ, ನಂತರ ಅದೇ ದಿನ ಸಂಜೆಯಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ. ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ರಾತ್ರಿಯಲ್ಲಿ ಪಠಿಸಿ, ನಂತರ ಬೆಳಗಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ."
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸುಬ್ಹ್ (ಫಜ್ರ್) ನಮಾಝ್ ಮಾಡಿದ ನಂತರ ಮುಂಜಾನೆ ಬೇಗನೆ ಆಕೆಯ ಬಳಿಯಿಂದ ಹೊರಟು ಹೋದರು. ಆಗ ಆಕೆ ತನ್ನ ನಮಾಝ್ ಮಾಡುವ ಸ್ಥಳದಲ್ಲಿ (ಮುಸಲ್ಲಾದಲ್ಲಿ) ಇದ್ದರು. ನಂತರ, ಪೂರ್ವಾಹ್ನದ ಹೊತ್ತು (ದುಹಾ ಸಮಯ) ಕಳೆದ ಮೇಲೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹಿಂತಿರುಗಿದರು. ಆಕೆ ಆಗಲೂ (ಅದೇ ಸ್ಥಳದಲ್ಲಿ) ಕುಳಿತಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಾನು ನಿನ್ನನ್ನು ಬಿಟ್ಟು ಹೋದಾಗಿನಿಂದ ನೀನು ಇದೇ ಸ್ಥಿತಿಯಲ್ಲಿಯೇ ಇರುವೆಯಾ?". ಆಕೆ ಹೇಳಿದರು: "ಹೌದು". ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ನಿನ್ನನ್ನು ಬಿಟ್ಟುಹೋದ ನಂತರ ನಾಲ್ಕು ವಚನಗಳನ್ನು ಮೂರು ಬಾರಿ ಹೇಳಿದ್ದೇನೆ. ನೀನು ಬೆಳಗ್ಗಿನಿಂದ ಹೇಳಿದ್ದೆಲ್ಲವನ್ನೂ ಅದರೊಂದಿಗೆ ತೂಗಿ ನೋಡಿದರೆ, ಖಂಡಿತವಾಗಿಯೂ ಅವು (ನಾನು ಹೇಳಿದ ವಚನಗಳು) ಹೆಚ್ಚು ತೂಗುತ್ತಿದ್ದವು: 'ಸುಬ್‌ಹಾನಲ್ಲಾಹಿ ವಬಿ ಹಮ್‌ದಿಹಿ, ಅದದ ಖಲ್ಕಿಹಿ, ವ ರಿದಾ ನಫ್ಸಿಹಿ, ವ ಝಿನತ ಅರ್ಶಿಹಿ, ವ ಮಿದಾದ ಕಲಿಮಾತಿಹಿ' ". (ಅರ್ಥ: ಅಲ್ಲಾಹು ಪರಿಶುದ್ಧನು ಮತ್ತು ಅವನಿಗೆ ಸರ್ವ ಸ್ತುತಿಗಳು, ಅವನ ಸೃಷ್ಟಿಗಳ ಸಂಖ್ಯೆಯಷ್ಟು, ಅವನ ಆತ್ಮದ ತೃಪ್ತಿಯಷ್ಟು, ಅವನ 'ಅರ್ಶ್' (ಸಿಂಹಾಸನ) ನ ತೂಕದಷ್ಟು, ಮತ್ತು ಅವನ ವಚನಗಳ (ಬರೆಯಲು ಬೇಕಾದ) ಶಾಯಿಯಷ್ಟು.)
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಯಾರು ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸುತ್ತಾರೋ, ಅವರಿಗೆ ಅವೆರಡು ಸಾಕು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.