Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 28 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"ಬದ್ರ್ (ಯುದ್ಧ) ದಲ್ಲಿ ಮತ್ತು ಹುದೈಬಿಯ್ಯ (ಒಪ್ಪಂದ) ದಲ್ಲಿ ಭಾಗವಹಿಸಿದ ವ್ಯಕ್ತಿಯು ಖಂಡಿತವಾಗಿಯೂ ನರಕವನ್ನು ಪ್ರವೇಶಿಸುವುದಿಲ್ಲ".
ಸಹೀಹ್ ಇದನ್ನು ಅಹ್ಮದ್ ವರದಿ ಮಾಡಿದ್ದಾರೆ. ಇದರ ಮೂಲವು ಸಹೀಹ್ ಮುಸ್ಲಿಮ್‌ನಲ್ಲಿದೆ.
ಒಮ್ಮೆ ನಾನು ಒಂದು ಯಾತ್ರೆಯಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಹೀಗಿರುವಾಗ, ಒಂದಿನ ಬೆಳಗ್ಗೆ ನಾನು ಅವರಿಗೆ ಸಮೀಪದಲ್ಲಿದ್ದು ಸವಾರಿ ಮಾಡುತ್ತಿದ್ದೆ. ಆಗ ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನ್ನನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವ ಮತ್ತು ನನ್ನನ್ನು ನರಕದಿಂದ ದೂರವಿರಿಸುವ ಒಂದು ಕರ್ಮದ ಬಗ್ಗೆ ತಿಳಿಸಿಕೊಡಿ." ಅವರು ಹೇಳಿದರು: "ನೀನು ನನ್ನೊಂದಿಗೆ ಬಹಳ ದೊಡ್ಡ ವಿಷಯವನ್ನೇ ಕೇಳಿರುವೆ. ಆದರೆ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭವಾಗಿದೆ. ನೀನು ಅಲ್ಲಾಹನನ್ನು ಆರಾಧಿಸು ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡಬೇಡ, ನಮಾಝ್ ಸಂಸ್ಥಾಪಿಸು, ಝಕಾತ್ ನೀಡು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸು ಮತ್ತು ಅಲ್ಲಾಹನ ಭವನಕ್ಕೆ ಹಜ್ಜ್ ನಿರ್ವಹಿಸು." ನಂತರ ಅವರು ಕೇಳಿದರು: "ನಾನು ನಿನಗೆ ಒಳಿತಿನ ಬಾಗಿಲುಗಳ ಬಗ್ಗೆ ತಿಳಿಸಿಕೊಡಲೇ? ಉಪವಾಸವು ಗುರಾಣಿಯಾಗಿದೆ, ನೀರು ಬೆಂಕಿಯನ್ನು ನಂದಿಸುವಂತೆ ದಾನಧರ್ಮವು ಪಾಪಗಳನ್ನು ನಂದಿಸುತ್ತದೆ ಮತ್ತು ಮನುಷ್ಯನು ರಾತ್ರಿಯ ಅಂತ್ಯ ಯಾಮದಲ್ಲಿ ನಿರ್ವಹಿಸುವ ನಮಾಝ್." ನಂತರ ಅವರು: "ಅವರ ಪಾರ್ಶ್ವಗಳು ಹಾಸಿಗೆಗಳಿಂದ ದೂರವಾಗುತ್ತವೆ" ಎಂಬಲ್ಲಿಂದ ಕೊನೆಯವರೆಗೆ ಕುರ್‌ಆನ್ ವಚನವನ್ನು ಪಠಿಸಿದರು. ನಂತರ ಅವರು ಕೇಳಿದರು: "ನಾನು ನಿನಗೆ ಈ ಸಂಪೂರ್ಣ ವಿಷಯದ (ಧರ್ಮದ) ಶಿರೋಭಾಗ, ಸ್ತಂಭಗಳು ಮತ್ತು ಶಿಖರಾಗ್ರಗಳ ಬಗ್ಗೆ ತಿಳಿಸಿಕೊಡಲೇ?" ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ತಿಳಿಸಿಕೊಡಿ." ಅವರು ಹೇಳಿದರು: "ವಿಷಯದ (ಧರ್ಮದ) ಶಿರೋಭಾಗವು ಇಸ್ಲಾಂ, ಅದರ ಸ್ತಂಭಗಳು ನಮಾಝ್ ಮತ್ತು ಅವರ ಶಿಖರಾಗ್ರವು ಜಿಹಾದ್ ಆಗಿದೆ." ನಂತರ ಅವರು ಕೇಳಿದರು: "ನಾನು ನಿನಗೆ ಇವೆಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುವ ಒಂದರ ಬಗ್ಗೆ ತಿಳಿಸಿಕೊಡಲೇ?" ನಾನು ಹೇಳಿದೆ: "ಓ ಪ್ರವಾದಿಯವರೇ! ತಿಳಿಸಿಕೊಡಿ." ಆಗ ಅವರು ತಮ್ಮ ನಾಲಿಗೆಯನ್ನು ಹಿಡಿದು ಹೇಳಿದರು: "ಇದನ್ನು ನಿಯಂತ್ರಣದಲ್ಲಿಡು." ನಾನು ಕೇಳಿದೆ: "ಓ ಅಲ್ಲಾಹನ ಪ್ರವಾದಿಯವರೇ! ನಾವು ಹೇಳಿದ ಮಾತುಗಳ ಕಾರಣದಿಂದ ನಮ್ಮನ್ನು ಶಿಕ್ಷಿಸಲಾಗುವುದೇ?" ಅವರು ಉತ್ತರಿಸಿದರು: "ಓ ಮುಆದ್! ನಿನ್ನ ತಾಯಿ ನಿನ್ನನ್ನು ಕಳೆದುಕೊಳ್ಳಲಿ! ಮನುಷ್ಯರನ್ನು ಅವರ ಮುಖದ ಮೇಲೆ ಅಥವಾ ಅವರ ಮೂಗುಗಳ ಮೇಲೆ ನರಕದಲ್ಲಿ ಬೀಳಿಸುವುದು ಅವರ ನಾಲಗೆಯ ಕೊಯ್ಲುಗಳೇ ಹೊರತು ಬೇರೇನಾದರೂ ಆಗಿವೆಯೇ?"
ಎಲ್ಲಾ ವರದಿಗಳ ಆಧಾರದಿಂದ ಸಹೀಹ್. ಇದನ್ನು ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು, ಅವರು ಅಲ್ಲಾಹನನ್ನು ಭೇಟಿಯಾಗುವವರೆಗೂ ಸ್ವತಃ ಅವರಲ್ಲಿ, ಅವರ ಮಕ್ಕಳಲ್ಲಿ ಮತ್ತು ಅವರ ಸಂಪತ್ತಿನಲ್ಲಿ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ; ಎಲ್ಲಿಯವರೆಗೆಂದರೆ, ಅವರು ಸಂಪೂರ್ಣ ಪಾಪರಹಿತರಾಗುವ ತನಕ."
ಹಸನ್. ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನಿಶ್ಚಯವಾಗಿಯೂ ರಾತ್ರಿ ಮತ್ತು ಹಗಲು ತಲುಪುವ ಎಲ್ಲಾ ಸ್ಥಳಗಳಿಗೂ ಈ ವಿಷಯವು ತಲುಪಲಿದೆ. ಅಲ್ಲಾಹು ಪಟ್ಟಣದಲ್ಲಿ ಅಥವಾ ಮರುಭೂಮಿಯಲ್ಲಿರುವ ಯಾವುದೇ ಮನೆಗೂ ಈ ಧರ್ಮವು ಪ್ರವೇಶವಾಗುವಂತೆ ಮಾಡದೆ ಬಿಡಲಾರ. ಅದು ಗೌರವಾನ್ವಿತರಿಗೆ ಗೌರವವನ್ನು ಅಥವಾ ಅವಮಾನಿತರಿಗೆ ಅವಮಾನವನ್ನು ತರಲಿದೆ. ಅದು ಅಲ್ಲಾಹು ಇಸ್ಲಾಂ ಧರ್ಮದ ಮೂಲಕ ನೀಡುವ ಗೌರವ ಮತ್ತು ಸತ್ಯನಿಷೇಧದ ಮೂಲಕ ನೀಡುವ ಅವಮಾನವಾಗಿದೆ." ತಮೀಮುದ್ದಾರಿ ಹೇಳುತ್ತಿದ್ದರು: ನಾನು ಅದನ್ನು ನನ್ನ ಕುಟುಂಬದವರಲ್ಲೇ ಗುರುತಿಸಿದ್ದೇನೆ. ಅವರಲ್ಲಿ ಇಸ್ಲಾಂ ಸ್ವೀಕರಿಸಿದವರೆಲ್ಲರಿಗೂ ಒಳಿತು, ಘನತೆ ಮತ್ತು ಗೌರವಗಳು ಉಂಟಾಗಿವೆ. ಅವರಲ್ಲಿ ಸತ್ಯನಿಷೇಧಿಗಳಾದ ಎಲ್ಲರಿಗೂ ಅವಮಾನ, ತಿರಸ್ಕಾರ ಮತ್ತು ತೆರಿಗೆ ಉಂಟಾಗಿವೆ.
ಸಹೀಹ್ ಇದನ್ನು ಅಹ್ಮದ್ ವರದಿ ಮಾಡಿದ್ದಾರೆ.