Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 110 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ವರದಿಗಾರ

ಎಲ್ಲಾ ವರದಿಗಾರರನ್ನು ತೋರಿಸಿ (48)
"ಯಾರು ಅಲ್ಲಾಹನೊಡನೆ ಪ್ರಾಮಾಣಿಕವಾಗಿ ಹುತಾತ್ಮತೆಯನ್ನು ಬೇಡುತ್ತಾನೋ ಅವನನ್ನು ಅಲ್ಲಾಹು ಹುತಾತ್ಮರ ಸ್ಥಾನಗಳಿಗೆ ತಲುಪಿಸುತ್ತಾನೆ. ಅವನು ತನ್ನ ಹಾಸಿಗೆಯಲ್ಲಿ ಪ್ರಾಣ ಬಿಟ್ಟರೂ ಸಹ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
“ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ” ಅವರು (ಸಂಗಡಿಗರು) ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?” ಅವರು ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು; ಮಾಟಗಾರಿಕೆ (ವಾಮಾಚಾರ) ಮಾಡುವುದು; ಅಲ್ಲಾಹು (ಹತ್ಯೆ ಮಾಡುವುದು) ನಿಷೇಧಿಸಿದ ಮನುಷ್ಯ ಜೀವಿಯನ್ನು ನೈತಿಕ ಹಕ್ಕಿನಿಂದಲ್ಲದೆ ಹತ್ಯೆ ಮಾಡುವುದು; ಬಡ್ಡಿ ತಿನ್ನುವುದು; ಅನಾಥರ ಆಸ್ತಿಯನ್ನು ತಿನ್ನುವುದು; ಯುದ್ಧಭೂಮಿಯಿಂದ ಪಲಾಯನ ಮಾಡುವುದು; ಮತ್ತು ಪರಿಶುದ್ಧ, ಮುಗ್ಧ ಹಾಗೂ ಸತ್ಯವಿಶ್ವಾಸಿಗಳಾದ ಮಹಿಳೆಯರ ಮೇಲೆ ದುರಾರೋಪ ಹೊರಿಸುವುದು.”
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಒಬ್ಬ ಘೋಷಕನು ಘೋಷಿಸುವನು: ನೀವು ಸದಾ ಆರೋಗ್ಯವಂತರಾಗಿರುವಿರಿ. ನೀವೆಂದೂ ರೋಗಿಗಳಾಗುವುದಿಲ್ಲ. ನೀವು ಸದಾ ಜೀವಂತವಾಗಿರುವಿರಿ. ನೀವೆಂದೂ ಮರಣಹೊಂದುವುದಿಲ್ಲ. ನೀವು ಸದಾ ಯುವಕರಾಗಿರುವಿರಿ. ನೀವೆಂದೂ ವೃದ್ಧರಾಗುವುದಿಲ್ಲ. ನೀವು ಸದಾ ಸುಖಭೋಗಿಗಳಾಗುವಿರಿ. ನೀವೆಂದೂ ನೋವು ಅನುಭವಿಸುವುದಿಲ್ಲ. ಇದೇ ಅಲ್ಲಾಹನ ಈ ವಚನದ ಅರ್ಥ: "ಆಗ ಅವರೊಡನೆ ಹೇಳಲಾಗುವುದು: ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ." [ಅಅ್‌ರಾಫ್:43]
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಅದ್ವಾ ಇಲ್ಲ, ತಿಯರ ಇಲ್ಲ, ಹಾಮ ಇಲ್ಲ, ಸಫರ್ ಇಲ್ಲ. ಆದರೆ, ಸಿಂಹವನ್ನು ಕಂಡು ಓಡುವಂತೆ ಕುಷ್ಠರೋಗಿಯಿಂದ ದೂರ ಓಡಿರಿ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಯಾರು ಇಸ್ಲಾಮ್ ಸ್ವೀಕರಿಸಿದನೋ (ಅಥವಾ ಅಲ್ಲಾಹುವಿಗೆ ಶರಣಾದನೋ), ಮತ್ತು ಅವನ ಅಗತ್ಯಕ್ಕೆ ತಕ್ಕಷ್ಟು (ಹೆಚ್ಚೂ ಇಲ್ಲದೆ, ಕಡಿಮೆಯೂ ಇಲ್ಲದೆ) ಅವನಿಗೆ ಜೀವನೋಪಾಯವನ್ನು ಒದಗಿಸಲಾಗಿದೆಯೋ, ಮತ್ತು ಅಲ್ಲಾಹು ಅವನಿಗೆ ನೀಡಿದ್ದರಲ್ಲಿ ಅವನು ಸಂತೃಪ್ತನಾಗುವಂತೆ ಮಾಡಿದ್ದಾನೋ (ಅವನು ಅದರಲ್ಲಿ ತೃಪ್ತನಾದನೋ) ಅವನು ಖಂಡಿತವಾಗಿಯೂ ಯಶಸ್ವಿಯಾದನು (ವಿಜಯಿಯಾದನು) ".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ನನಗೂ ಈ ಪ್ರಪಂಚಕ್ಕೂ ಏನು ಸಂಬಂಧ? ನಾನು ಈ ಪ್ರಪಂಚದಲ್ಲಿ ಒಬ್ಬ ಸವಾರನಂತೆ (ಜೀವಿಸಬೇಕಾದವನು). ಅವನು (ಸ್ವಲ್ಪ ಹೊತ್ತು) ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು, ನಂತರ ಅದನ್ನು ಬಿಟ್ಟು ಹೊರಟುಹೋಗುತ್ತಾನೆ".
ಸಹೀಹ್ ಇದನ್ನು ತಿರ್ಮಿದಿ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ಒಳ್ಳೆಯ ಒಡನಾಡಿ ಮತ್ತು ಕೆಟ್ಟ ಒಡನಾಡಿಯ ಉದಾಹರಣೆಯು ಕಸ್ತೂರಿ ಮಾರುವವನ ಮತ್ತು ತಿದಿ ಊದುವವನಂತೆ. ಕಸ್ತೂರಿ ಮಾರುವವನು ನಿನಗೆ ಸ್ವಲ್ಪ ಕಸ್ತೂರಿಯನ್ನು ಕೊಡಬಹುದು. ಅಥವಾ ನೀನು ಅವನಿಂದ ಅದನ್ನು ಖರೀದಿಸಬಹುದು. ಅಥವಾ ನಿನಗೆ ಅವನಿಂದ ಉತ್ತಮ ಸುವಾಸನೆಯನ್ನು ಅನುಭವಿಸಬಹುದು. ಆದರೆ ತಿದಿ ಊದುವವನು ನಿನ್ನ ಬಟ್ಟೆಯನ್ನು ಸುಟ್ಟು ಹಾಕಬಹುದು. ಅಥವಾ ನಿನಗೆ ಅವನಿಂದ ಕೆಟ್ಟ ವಾಸನೆಯನ್ನು ಅನುಭವಿಸಬೇಕಾಗಬಹುದು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಖಂಡಿತವಾಗಿಯೂ ಅಲ್ಲಾಹು ನಿದ್ರಿಸುವುದಿಲ್ಲ, ಮತ್ತು ನಿದ್ರಿಸುವುದು ಅವನಿಗೆ ತಕ್ಕುದಲ್ಲ. ಅವನು ತಕ್ಕಡಿಯನ್ನು ತಗ್ಗಿಸುತ್ತಾನೆ ಮತ್ತು ಅದನ್ನು ಏರಿಸುತ್ತಾನೆ. ಹಗಲಿನ ಕರ್ಮಗಳಿಗಿಂತ ಮೊದಲು ರಾತ್ರಿಯ ಕರ್ಮಗಳು ಅವನ ಕಡೆಗೆ ಏರಿಸಲ್ಪಡುತ್ತವೆ, ಮತ್ತು (ಮುಂದಿನ) ರಾತ್ರಿಯ ಕರ್ಮಗಳಿಗಿಂತ ಮೊದಲು ಹಗಲಿನ ಕರ್ಮಗಳು (ಅವನ ಕಡೆಗೆ ಏರಿಸಲ್ಪಡುತ್ತವೆ). ಅವನ ಪರದೆಯು 'ಬೆಳಕಾಗಿದೆ' — ಇನ್ನೊಂದು ವರದಿಯಲ್ಲಿ: ಬೆಂಕಿ ಎಂದಿದೆ — ಒಂದು ವೇಳೆ ಅವನು ಅದನ್ನು (ಪರದೆಯನ್ನು) ಸರಿಸಿದರೆ, ಅವನ ಮುಖದ ಪ್ರಕಾಶವು ಸೃಷ್ಟಿಗಳಲ್ಲಿ ಅವನ ದೃಷ್ಟಿಯು ತಲುಪುವವರೆಗಿನ ಎಲ್ಲವನ್ನೂ ಸುಟ್ಟುಹಾಕುತ್ತಿತ್ತು".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.