Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 110 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

ವರದಿಗಾರ

ಎಲ್ಲಾ ವರದಿಗಾರರನ್ನು ತೋರಿಸಿ (48)
"ಓ ಅಲ್ಲಾಹ್! ನಿನ್ನ ಅನುಗ್ರಹಗಳ ನಿವಾರಣೆಯಿಂದ, ನಿನ್ನ ಸೌಖ್ಯದ ಬದಲಾವಣೆಯಿಂದ, ನಿನ್ನ ಹಠಾತ್ ಶಿಕ್ಷೆಯಿಂದ ಮತ್ತು ನಿನ್ನ ಸರ್ವ ಕ್ರೋಧಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಖಂಡಿತವಾಗಿಯೂ ಕರ್ಮಗಳು ಕೇವಲ ನಿಯ್ಯತ್‌ಗಳ (ಉದ್ದೇಶಗಳ) ಮೇಲೆ ಅವಲಂಬಿತವಾಗಿವೆ. ಖಂಡಿತವಾಗಿಯೂ ಪ್ರತಿಯೊಬ್ಬ ವ್ಯಕ್ತಿಗೂ ಅವನು ಉದ್ದೇಶಿಸಿದ್ದು ಮಾತ್ರ ಸಿಗುತ್ತದೆ. ಆದ್ದರಿಂದ, ಯಾರ ಹಿಜ್ರತ್ (ವಲಸೆ) ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗಾಗಿ ಆಗಿದೆಯೋ, ಅವನ ಹಿಜ್ರತ್ ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗಾಗಿಯೇ (ಪರಿಗಣಿಸಲಾಗುತ್ತದೆ). ಯಾರ ಹಿಜ್ರತ್ ಅವನು ಗಳಿಸಬೇಕೆಂದಿರುವ ಲೌಕಿಕ ಪ್ರಯೋಜನಕ್ಕಾಗಿ, ಅಥವಾ ಅವನು ವಿವಾಹವಾಗಬೇಕೆಂದಿರುವ ಮಹಿಳೆಗಾಗಿ ಆಗಿದೆಯೋ, ಅವನ ಹಿಜ್ರತ್ ಅವನು ಯಾವುದಕ್ಕಾಗಿ ವಲಸೆ ಹೋದನೋ ಅದಕ್ಕಾಗಿಯೇ (ಪರಿಗಣಿಸಲಾಗುತ್ತದೆ)".
ಸಹೀಹ್ ಇದನ್ನು ಹದೀಸ್ ವಿದ್ವಾಂಸರ ಇಬ್ಬರು ಇಮಾಮರುಗಳಾದ ಅಬೂ ಅಬ್ದುಲ್ಲಾಹ್ ಮುಹಮ್ಮದ್ ಬಿನ್ ಇಸ್ಮಾಯೀಲ್ ಬಿನ್ ಇಬ್ರಾಹೀಮ್ ಬಿನ್ ಅಲ್-ಮುಗೀರಾ ಬಿನ್ ಬರ್ದಿಝ್‌ಬಾ ಅಲ್-ಜುಅಫಿ ಅಲ್-ಬುಖಾರಿ, ಮತ್ತು ಅಬುಲ್ ಹುಸೈನ್ ಮುಸ್ಲಿಂ ಬಿನ್ ಅಲ್-ಹಜ್ಜಾಜ್ ಬಿನ್ ಮುಸ್ಲಿಂ ಅಲ್-ಖುಶೈರಿ ಅನ್ನೈಸಬೂರಿ ತಮ್ಮ ಅತ್ಯಂತ ವಿಶ್ವಾಸಾರ್ಹವೆಂದು ಪರಿಗಣಿಸಲಾಗಿರುವ ಎರಡು ಗ್ರಂಥಗಳಲ್ಲಿ (ಸಹೀಹುಲ್-ಬುಖಾರಿ ಮತ್ತು ಸಹೀಹ್ ಮುಸ್ಲಿಮ್) ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆ ಹೀಗಿತ್ತು: "ಓ ಅಲ್ಲಾಹ್! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ತನ್ನ ಪರಿಪಾಲಕನನ್ನು ಸ್ಮರಿಸುವವನ ಮತ್ತು ತನ್ನ ಪರಿಪಾಲಕನನ್ನು ಸ್ಮರಿಸದವನ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ ಉದಾಹರಣೆಯಂತಿದೆ." ಮುಸ್ಲಿಂರ ವರದಿಯಲ್ಲಿ ಹೀಗಿದೆ: "ಅಲ್ಲಾಹನನ್ನು ಸ್ಮರಿಸಲ್ಪಡುವ ಮನೆಯ ಉದಾಹರಣೆ ಮತ್ತು ಅಲ್ಲಾಹನನ್ನು ಸ್ಮರಿಸಲ್ಪಡದ ಮನೆಯ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ ಉದಾಹರಣೆಯಂತಿದೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ನಿಮ್ಮಲ್ಲಿ ಯಾರೂ ಅಲ್ಲಾಹನ ಬಗ್ಗೆ ಒಳ್ಳೆಯ ಭಾವನೆಯನ್ನಿಟ್ಟುಕೊಂಡಲ್ಲದೆ ಮರಣವನ್ನಪ್ಪಬಾರದು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ನಾನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕಸ್ಮಿಕ ನೋಟದ ಬಗ್ಗೆ ಕೇಳಿದೆ. ಆಗ ಅವರು ನನಗೆ ದೃಷ್ಟಿಯನ್ನು ತಿರುಗಿಸಲು ಹೇಳಿದರು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ನಿಶ್ಚಯವಾಗಿಯೂ ಇಹಲೋಕವು ಮಧುರವಾಗಿದೆ ಮತ್ತು ಹಸಿರಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ಅದರಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿ, ನೀವು ಹೇಗೆ ವರ್ತಿಸುತ್ತೀರಿ ಎಂದು ನೋಡುತ್ತಾನೆ. ಆದ್ದರಿಂದ ನೀವು ಇಹಲೋಕವನ್ನು ಭಯಪಡಿರಿ ಮತ್ತು ಸ್ತ್ರೀಯರನ್ನು ಭಯಪಡಿರಿ. ಏಕೆಂದರೆ, ಬನೂ ಇಸ್ರಾಈಲರ ಮೊತ್ತಮೊದಲ ಪರೀಕ್ಷೆಯು ಸ್ತ್ರೀಯರ ಮೂಲಕವಾಗಿತ್ತು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ರಹ್ಮಾನ್‌ನ (ಪರಮ ದಯಾಮಯನಾದ ಅಲ್ಲಾಹನ) ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಒಂದೇ ಹೃದಯದಂತೆ ಇವೆ. ಅವನು ತಾನು ಇಚ್ಛಿಸಿದಂತೆ ಅದನ್ನು ತಿರುಗಿಸುತ್ತಾನೆ." ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ಹೃದಯಗಳನ್ನು ತಿರುಗಿಸುವವನೇ, ನಮ್ಮ ಹೃದಯಗಳನ್ನು ನಿನ್ನ ವಿಧೇಯತೆಯ ಕಡೆಗೆ ತಿರುಗಿಸು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.