Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 103 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ವರದಿಗಾರ

ಎಲ್ಲಾ ವರದಿಗಾರರನ್ನು ತೋರಿಸಿ (52)
"ಅಲ್ಲಾಹನ ದಾಸಿಯರನ್ನು (ಮಹಿಳೆಯರನ್ನು) ಅಲ್ಲಾಹನ ಮಸೀದಿಗಳಿಂದ (ಅಲ್ಲಿಗೆ ಹೋಗದಂತೆ) ತಡೆಯಬೇಡಿ. ಆದರೆ ಅವರು ಸುಗಂಧ ಹಚ್ಚದೆ ಹೊರಡಲಿ."
ಹಸನ್. ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
"ಜನರು ಮಸೀದಿಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುವವರೆಗೆ ಘಳಿಗೆಯು (ಪುನರುತ್ಥಾನ) ಸಂಭವಿಸುವುದಿಲ್ಲ".
ಸಹೀಹ್ ಇದನ್ನು ಅಬೂದಾವೂದ್, ನಸಾಈ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
"ಯಾರಾದರೂ ನಮಾಝನ್ನು ಮರೆತುಬಿಟ್ಟರೆ ನೆನಪಾದಾಗ ಅದನ್ನು ನಿರ್ವಹಿಸಲಿ. ಇದಲ್ಲದೆ ಅದಕ್ಕೆ ಬೇರೆ ಪ್ರಾಯಶ್ಚಿತ್ತವಿಲ್ಲ. "ನನ್ನ ನೆನಪಿಗಾಗಿ ನಮಾಝ್ ನಿರ್ವಹಿಸಿರಿ." [ತ್ವಾಹಾ 14]"
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಎರಡನೇ ತಾಸಿನಲ್ಲಿ ಹೊರಡುವವನು ಹಸುವನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಮೂರನೇ ತಾಸಿನಲ್ಲಿ ಹೊರಡುವವನು ಕೊಂಬುಗಳಿರುವ ಟಗರನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಾಲ್ಕನೇ ತಾಸಿನಲ್ಲಿ ಹೊರಡುವವನು ಕೋಳಿಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಐದನೇ ತಾಸಿನಲ್ಲಿ ಹೊರಡುವವನು ಮೊಟ್ಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಂತರ, ಇಮಾಮರು ಹೊರ ಬಂದರೆ ದೇವದೂತರುಗಳು ಪ್ರವಚನವನ್ನು ಕೇಳಲು ಹಾಜರಾಗುತ್ತಾರೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಉಸ್ಮಾನ್ ಬಿನ್ ಅಫ್ಫಾನ್ ಮಸೀದಿಯನ್ನು ಪುನರ್ ನಿರ್ಮಿಸಲು ಬಯಸಿದರು. ಆದರೆ ಜನರಿಗೆ ಅದು ಇಷ್ಟವಿರಲಿಲ್ಲ. ಮಸೀದಿ ಹೇಗಿತ್ತೋ ಹಾಗೆಯೇ ಇರುವುದು ಅವರಿಗೆ ಇಷ್ಟವಾಗಿತ್ತು. ಆಗ ಉಸ್ಮಾನ್ ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಲ್ಲಾಹನಿಗೋಸ್ಕರ ಒಂದು ಮಸೀದಿಯನ್ನು ನಿರ್ಮಿಸುತ್ತಾರೋ ಅವರಿಗೆ ಅಲ್ಲಾಹು ಸ್ವರ್ಗದಲ್ಲಿ ಅದಕ್ಕೆ ಸಮಾನವಾದುದನ್ನು ನಿರ್ಮಿಸುತ್ತಾನೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಜನರು ಜುಮುಅ (ಶುಕ್ರವಾರದ) ನಮಾಝ್‌ಗಳನ್ನು ಬಿಡುವುದನ್ನು ಖಂಡಿತವಾಗಿಯೂ ನಿಲ್ಲಿಸಬೇಕು. ಇಲ್ಲದಿದ್ದರೆ, ಅಲ್ಲಾಹು ಅವರ ಹೃದಯಗಳ ಮೇಲೆ ಖಂಡಿತವಾಗಿಯೂ ಮೊಹರು ಹಾಕುವನು. ನಂತರ ಅವರು ಖಂಡಿತವಾಗಿಯೂ ನಿರ್ಲಕ್ಷ್ಯರಾಗಿ ಬಿಡುವರು".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಬಲಗಡೆಗೆ ಮತ್ತು ತಮ್ಮ ಎಡಗಡೆಗೆ ಸಲಾಂ ಹೇಳುವುದನ್ನು ನೋಡುತ್ತಿದ್ದೆನು. ಎಷ್ಟರಮಟ್ಟಿಗೆಂದರೆ (ಅವರು ತಿರುಗುವಾಗ) ನಾನು ಅವರ ಕೆನ್ನೆಯ ಬಿಳುಪನ್ನು ಕಾಣುತ್ತಿದ್ದೆನು."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಮೂರು ಜನರ ಬಗ್ಗೆ ಲೇಖನಿಯನ್ನು ಎತ್ತಲಾಗಿದೆ. ನಿದ್ರೆ ಮಾಡುವವನು ಎದ್ದೇಳುವ ತನಕ, ಮಗು ಪ್ರೌಢನಾಗುವ ತನಕ ಮತ್ತು ಮಾನಸಿಕ ಅಸ್ವಸ್ಥನು ಸ್ವಸ್ಥ ಬುದ್ಧಿಯವನಾಗುವ ತನಕ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ (ಕುಬ್ರಾದಲ್ಲಿ), ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.