Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 97 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ವರದಿಗಾರ

ಎಲ್ಲಾ ವರದಿಗಾರರನ್ನು ತೋರಿಸಿ (49)
ಒಮ್ಮೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಬಿಸೀನಿಯಾದಲ್ಲಿ ನೋಡಿದ ಮಾರಿಯ ಎಂಬ ಹೆಸರಿನ ಇಗರ್ಜಿಯ ಬಗ್ಗೆ ಮತ್ತು ಅದರಲ್ಲಿ ಅವರು ನೋಡಿದ ಚಿತ್ರಗಳ ಬಗ್ಗೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನ ಸೆಳೆದಾಗ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವರು ಎಂತಹ ಜನರೆಂದರೆ, ಅವರಲ್ಲಿ ಒಬ್ಬ ನೀತಿವಂತ ದಾಸ ಅಥವಾ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಅವನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸುತ್ತಿದ್ದರು ಮತ್ತು ಅದರಲ್ಲಿ ಆ ಚಿತ್ರಗಳನ್ನು ರಚಿಸುತ್ತಿದ್ದರು. ಅವರು ಅಲ್ಲಾಹನ ದೃಷ್ಟಿಯಲ್ಲಿ ಸೃಷ್ಟಿಗಳಲ್ಲೇ ಅತ್ಯಂತ ನಿಕೃಷ್ಟರು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಅಲ್ಲಾಹನ ಸಹಾಯ ಮತ್ತು ವಿಜಯ ಬಂದಾಗ." [ಸೂರ ನಸ್ರ್: 1] ಎಂಬ ವಚನವು ಅವತೀರ್ಣವಾದ ಬಳಿಕ ಅವರು ಯಾವುದೇ ನಮಾಝ್ ಮಾಡಿದರೂ ಅದರಲ್ಲಿ "ಸುಬ್‌ಹಾನಕ ರಬ್ಬನಾ ವಬಿಹಮ್ದಿಕ್, ಅಲ್ಲಾಹುಮ್ಮಗ್‌ಫಿರ್ ಲೀ (ನಮ್ಮ ಪರಿಪಾಲಕನೇ, ನೀನು ಪರಮ ಪವಿತ್ರನು. ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು) ಎಂದು ಹೇಳದೇ ಇರುತ್ತಿರಲಿಲ್ಲ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
ಒಂದು ರಾತ್ರಿ ನಾನು ಅಲ್ಲಾಹನ ಸಂದೇಶವಾಹಕರನ್ನು ಹಾಸಿಗೆಯಲ್ಲಿ ಕಾಣದೆ ಹೋದಾಗ ಅವರನ್ನು ಹುಡುಕಿದೆ. ನನ್ನ ಕೈ ಅವರ ಪಾದಗಳ ನಡುಭಾಗಕ್ಕೆ ತಾಗಿತು. ಅವರು ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದರು ಮತ್ತು ಅವರ ಪಾದಗಳು ನೆಟ್ಟಗಿದ್ದವು (ಅವರು ಸಾಷ್ಟಾಂಗ ಮಾಡುತ್ತಿದ್ದರು). ಅವರು ಹೇಳುತ್ತಿದ್ದರು: "ಓ ಅಲ್ಲಾಹ್! ನಿನ್ನ ಕೋಪದಿಂದ ನಿನ್ನ ತೃಪ್ತಿಯಲ್ಲಿ ಮತ್ತು ನಿನ್ನ ಶಿಕ್ಷೆಯಿಂದ ನಿನ್ನ ಕ್ಷೇಮದಲ್ಲಿ ನಾನು ರಕ್ಷಣೆಯನ್ನು ಬೇಡುತ್ತೇನೆ. ನಿನಗೆ ವಿರುದ್ಧವಾಗಿ ನಿನ್ನಲ್ಲೇ ನಾನು ಆಶ್ರಯವನ್ನು ಬೇಡುತ್ತೇನೆ. ನೀನು ನಿನ್ನನ್ನು ಪ್ರಶಂಸಿಸಿದಂತೆ ನನಗೆ ನಿನ್ನ ಪ್ರಶಂಸೆಯನ್ನು ಎಣಿಸಲು ಸಾಧ್ಯವಿಲ್ಲ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ನಿಂತು ನಮಾಝ್ ನಿರ್ವಹಿಸಿ, ಅದು ಸಾಧ್ಯವಾಗದಿದ್ದರೆ ಕುಳಿತು ನಿರ್ವಹಿಸಿ, ಅದು ಕೂಡ ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಿ."
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು (ಐಚ್ಛಿಕ) ರಕ್‌ಅತ್‌ಗಳನ್ನು ನಿರ್ವಹಿಸಲು ತೋರುತ್ತಿದ್ದ ಕಾಳಜಿಯನ್ನು ಬೇರೆ ಯಾವುದೇ ಐಚ್ಛಿಕ ನಮಾಝ್‌ಗಳಲ್ಲಿ ತೋರುತ್ತಿರಲಿಲ್ಲ".
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಅನ್ನು 'ತಕ್ಬೀರ್' (ಅಲ್ಲಾಹು ಅಕ್ಬರ್ ಎಂದು ಹೇಳುವ) ಮೂಲಕ ಮತ್ತು ಕುರ್‌ಆನ್ ಪಾರಾಯಣವನ್ನು 'ಅಲ್-ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್' (ಸೂರ ಅಲ್-ಫಾತಿಹಾ) ಮೂಲಕ ಆರಂಭಿಸುತ್ತಿದ್ದರು. ಅವರು 'ರುಕೂ' ಮಾಡಿದಾಗ, ತಮ್ಮ ತಲೆಯನ್ನು (ತುಂಬಾ) ಮೇಲಕ್ಕೆ ಎತ್ತುತ್ತಿರಲಿಲ್ಲ ಮತ್ತು (ತುಂಬಾ) ತಗ್ಗಿಸುತ್ತಿರಲಿಲ್ಲ, ಬದಲಿಗೆ (ಅವೆರಡರ) ನಡುವೆ (ಸಮವಾಗಿ) ಇರಿಸುತ್ತಿದ್ದರು. ಅವರು ರುಕೂವಿನಿಂದ ತಮ್ಮ ತಲೆಯನ್ನು ಎತ್ತಿದಾಗ, ನೇರವಾಗಿ ನಿಲ್ಲುವವರೆಗೆ ಸುಜೂದ್ ಮಾಡುತ್ತಿರಲಿಲ್ಲ. ಅವರು (ಮೊದಲ) ಸುಜೂದ್‌ನಿಂದ ತಮ್ಮ ತಲೆಯನ್ನು ಎತ್ತಿದಾಗ, ನೇರವಾಗಿ ಕುಳಿತುಕೊಳ್ಳುವವರೆಗೆ (ಎರಡನೇ) ಸುಜೂದ್ ಮಾಡುತ್ತಿರಲಿಲ್ಲ. ಅವರು ಪ್ರತಿ ಎರಡು ರಕಅತ್‌ಗಳಲ್ಲಿ (ಕುಳಿತಾಗ) 'ಅತ್ತಹಿಯ್ಯಾತ್' ಹೇಳುತ್ತಿದ್ದರು. ಅವರು ತಮ್ಮ ಎಡಗಾಲನ್ನು ಹಾಸಿ (ಅದರ ಮೇಲೆ ಕುಳಿತು), ತಮ್ಮ ಬಲಗಾಲನ್ನು ನೆಟ್ಟಗೆ ಇಡುತ್ತಿದ್ದರು. ಅವರು 'ಉಖ್ಬತು ಶ್ಶೈತಾನ್' (ಶೈತಾನನ ಕೂರುವಿಕೆ) ಅನ್ನು ನಿಷೇಧಿಸುತ್ತಿದ್ದರು. ಒಬ್ಬ ವ್ಯಕ್ತಿಯು ತನ್ನ ತೋಳುಗಳನ್ನು, ಕಾಡುಪ್ರಾಣಿಯು ಹಾಸುವಂತೆ (ನೆಲದ ಮೇಲೆ) ಹಾಸುವುದನ್ನು ನಿಷೇಧಿಸುತ್ತಿದ್ದರು. ಅವರು ನಮಾಝ್ ಅನ್ನು 'ತಸ್ಲೀಮ್' (ಸಲಾಮ್ ಹೇಳುವ) ಮೂಲಕ ಮುಗಿಸುತ್ತಿದ್ದರು".
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ನಮಾಝ್‌ಗೆ 'ಇಕಾಮತ್' ಕರೆಯಲಾದರೆ, ಕಡ್ಡಾಯ (ಫರ್ಝ್) ನಮಾಝ್ ಹೊರತುಪಡಿಸಿ ಬೇರೆ ಯಾವುದೇ ನಮಾಝ್ ಇಲ್ಲ."
ಸಹೀಹ್ ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ನಮಾಝನ್ನು ಮತ್ತು ಫಜ್ರ್ ನಮಾಝ್‌ಗೆ ಮೊದಲು ಎರಡು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಿದ್ದರು."
ಸಹೀಹ್ ಇದನ್ನು ಬುಖಾರಿ ವರದಿ ಮಾಡಿದ್ದಾರೆ.