Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 6 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ
"ಮಕ್ಕಳಿಗೆ ಏಳು ವರ್ಷ ಪ್ರಾಯವಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ, ಹತ್ತು ವರ್ಷ ಪ್ರಾಯವಾದಾಗ ಅದಕ್ಕಾಗಿ ಹೊಡೆಯಿರಿ ಮತ್ತು ಮಲಗುವ ಸ್ಥಳದಲ್ಲಿ ಅವರನ್ನು ಬೇರ್ಪಡಿಸಿರಿ."
ಹಸನ್. ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
"ಒಬ್ಬ ವ್ಯಕ್ತಿ ಸಾಲಿನಲ್ಲಿ ಒಬ್ಬಂಟಿಯಾಗಿ ನಿಂತು ನಮಾಝ್ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದರು. ಅವರು ಆತನಿಗೆ ನಮಾಝ್ ಅನ್ನು ಪುನರಾವರ್ತಿಸಲು ಆಜ್ಞಾಪಿಸಿದರು."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಅಲ್ಲಾಹನ ದಾಸಿಯರನ್ನು (ಮಹಿಳೆಯರನ್ನು) ಅಲ್ಲಾಹನ ಮಸೀದಿಗಳಿಂದ (ಅಲ್ಲಿಗೆ ಹೋಗದಂತೆ) ತಡೆಯಬೇಡಿ. ಆದರೆ ಅವರು ಸುಗಂಧ ಹಚ್ಚದೆ ಹೊರಡಲಿ."
ಹಸನ್. ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
"ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ನಮಾಝ್ ಮಾಡಿದೆ. ಅವರು ತಮ್ಮ ಬಲಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು' ಎಂದು ಸಲಾಂ ಹೇಳುತ್ತಿದ್ದರು, ಮತ್ತು ತಮ್ಮ ಎಡಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್' ಎಂದು ಸಲಾಂ ಹೇಳುತ್ತಿದ್ದರು."
ಹಸನ್. ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
"ನಿಮ್ಮಲ್ಲಿ ಯಾರಾದರೂ ಮಸೀದಿಯನ್ನು ಪ್ರವೇಶಿಸಿದರೆ, ಪ್ರವಾದಿಯವರ ಮೇಲೆ ಸಲಾಂ ಹೇಳಲಿ ಮತ್ತು ಹೀಗೆ ಹೇಳಲಿ: 'ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ' (ಓ ಅಲ್ಲಾಹ್, ನನಗಾಗಿ ನಿನ್ನ ಕರುಣೆಯ ಬಾಗಿಲುಗಳನ್ನು ತೆರೆ). ಮತ್ತು ಅವನು ಹೊರಬರುವಾಗ, ಪ್ರವಾದಿಯವರ ಮೇಲೆ ಸಲಾಂ ಹೇಳಲಿ ಮತ್ತು ಹೀಗೆ ಹೇಳಲಿ: 'ಅಲ್ಲಾಹುಮ್ಮ ಅ'ಅಸಿಮ್ನೀ ಮಿನ ಶ್ಶೈತಾನಿ ರ್ರಜೀಮ್' (ಓ ಅಲ್ಲಾಹ್, ಶಪಿಸಲ್ಪಟ್ಟ ಶೈತಾನನಿಂದ ನನ್ನನ್ನು ರಕ್ಷಿಸು)." ಅಲ್-ಹಾಕಿಮ್ ರವರ ವರದಿಯಲ್ಲಿ (ಹೀಗಿದೆ): "ಮತ್ತು ಅವನು ಹೊರಬರುವಾಗ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾಂ ಹೇಳಲಿ ಮತ್ತು ಹೀಗೆ ಹೇಳಲಿ: 'ಅಲ್ಲಾಹುಮ್ಮ ಅಜಿರ್‌ನೀ ಮಿನ ಶ್ಶೈತಾನಿ ರ್ರಜೀಮ್' (ಓ ಅಲ್ಲಾಹ್, ಶಪಿಸಲ್ಪಟ್ಟ ಶೈತಾನನಿಂದ ನನ್ನನ್ನು ಕಾಪಾಡು)."
ಹಸನ್. ಇದನ್ನು ಇಬ್ನ್ ಮಾಜ ಮತ್ತು ಹಾಕಿಂ ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ಅಲ್ಲಾಹುಮ್ಮಗ್ಫಿರ್ ಲೀ, ವರ್‌ಹಮ್‌ನೀ, ವಆಫಿನೀ, ವಹ್ದಿನೀ, ವರ್‌ಝುಕ್‌ನೀ" (ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನಗೆ ದಯೆತೋರು, ನನಗೆ ಸೌಖ್ಯವನ್ನು ನೀಡು, ನನಗೆ ಸನ್ಮಾರ್ಗವನ್ನು ತೋರಿಸು ಮತ್ತು ನನಗೆ ಜೀವನೋಪಾಯವನ್ನು ದಯಪಾಲಿಸು) ಎಂದು ಹೇಳುತ್ತಿದ್ದರು.
ಇತರ ಸಾಕ್ಷಿ ಹದೀಸ್‌ಗಳ ಆಧಾರದಿಂದ ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.