"ಅಲ್ಲಾಹುಮ್ಮ ಇನ್ನೀ ಅಸ್ಅಲುಕಲ್ ಹುದಾ ವತ್ತುಖಾ ವಲ್-ಅಫಾಫ ವಲ್-ಗಿನಾ". (ಅರ್ಥ: ಓ ಅಲ್ಲಾಹ್, ಖಂಡಿತವಾಗಿಯೂ ನಾನು ನಿನ್ನಲ್ಲಿ ಮಾರ್ಗದರ್ಶನ, ದೇವಭಯ, ಪಾವಿತ್ರ್ಯ ಮತ್ತು ಸ್ವಾವಲಂಬನೆಯನ್ನು ಬೇಡುತ್ತೇನೆ.)
ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಪ್ರಾರ್ಥಿಸುತ್ತಿದ್ದರು:
"ಅಲ್ಲಾಹುಮ್ಮ ಇನ್ನೀ ಅಸ್ಅಲುಕಲ್ ಹುದಾ ವತ್ತುಖಾ ವಲ್-ಅಫಾಫ ವಲ್-ಗಿನಾ". (ಅರ್ಥ: ಓ ಅಲ್ಲಾಹ್, ಖಂಡಿತವಾಗಿಯೂ ನಾನು ನಿನ್ನಲ್ಲಿ ಮಾರ್ಗದರ್ಶನ, ದೇವಭಯ, ಪಾವಿತ್ರ್ಯ ಮತ್ತು ಸ್ವಾವಲಂಬನೆಯನ್ನು ಬೇಡುತ್ತೇನೆ.)
«اللهُمَّ إِنِّي أَسْأَلُكَ الْهُدَى وَالتُّقَى، وَالْعَفَافَ وَالْغِنَى».
ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥನೆಗಳಲ್ಲಿ ಇದೂ ಒಂದಾಗಿತ್ತು: "ಓ ಅಲ್ಲಾಹ್, ಖಂಡಿತವಾಗಿಯೂ ನಾನು ನಿನ್ನಲ್ಲಿ ಮಾರ್ಗದರ್ಶನವನ್ನು ಬೇಡುತ್ತೇನೆ" ಅಂದರೆ ಸತ್ಯವನ್ನು ಅರಿಯುವುದು ಮತ್ತು ಅದರಂತೆ ನಡೆಯುವ ನೇರವಾದ ಮಾರ್ಗ, "ಆರಾಧ್ಯನ ಭಯವನ್ನು" ಅಂದರೆ ಆದೇಶಗಳನ್ನು ಪಾಲಿಸುವುದು ಮತ್ತು ನಿಷೇಧಗಳಿಂದ ದೂರವಿರುವುದನ್ನು, "ಪಾವಿತ್ರ್ಯವನ್ನು" ಅಂದರೆ ಮಾತು ಅಥವಾ ಕೃತ್ಯದಲ್ಲಿ ಯಾವುದು ಹಲಾಲ್ (ಧರ್ಮಸಮ್ಮತ) ಅಲ್ಲವೋ ಮತ್ತು ಯಾವುದು ಹೊಂದಿಕೊಳ್ಳುವುದಿಲ್ಲವೋ ಅದರಿಂದ ದೂರವಿರುವುದು, "ಸ್ವಾವಲಂಬನೆಯನ್ನು" ಅಂದರೆ ಸೃಷ್ಟಿಗಳನ್ನು ಅವಲಂಬಿಸದಿರುವುದನ್ನು. ಅಂದರೆ ಅಲ್ಲಾಹುವಿನ ಹೊರತು ಬೇರೆ ಯಾರೊಬ್ಬರ ಅಗತ್ಯವೂ ಇಲ್ಲದಂತಾಗುವುದು.
ಸನ್ಮಾರ್ಗ, ಆರಾಧ್ಯನ ಭಯ, ಪಾವಿತ್ರ್ಯ ಮತ್ತು ಸ್ವಾವಲಂಬನೆ ಎಂಬ ಗುಣಲಕ್ಷಣಗಳ ಶ್ರೇಷ್ಠತೆಯನ್ನು ವಿವರಿಸಲಾಗಿದೆ ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಮಗಾಗಿ ಲಾಭವನ್ನಾಗಲೀ ನಷ್ಟವನ್ನಾಗಲೀ ಅಧೀನದಲ್ಲಿಟ್ಟುಕೊಂಡಿಲ್ಲ. ಅದನ್ನು ಅಧೀನದಲ್ಲಿಟ್ಟುಕೊಂಡಿರುವವನು ಸರ್ವಶಕ್ತನಾದ ಅಲ್ಲಾಹು ಮಾತ್ರ.
ಸೃಷ್ಟಿಗಳಿಗೆ ಲಾಭ, ನಷ್ಟ ಮತ್ತು ಸನ್ಮಾರ್ಗವನ್ನು ನೀಡುವವನು ಅಲ್ಲಾಹು ಮಾತ್ರ. ಅಲ್ಲಾಹುವಿನ ಸಾಮಿಪ್ಯ ಪಡೆದ ಯಾವುದೇ ಮಲಕ್ ದೂತರಿಗೆ ಅಥವಾ (ಸಂದೇಶವಾಹಕರಾಗಿ) ಕಳುಹಿಸಲ್ಪಟ್ಟ ಯಾವುದೇ ಪ್ರವಾದಿಗೆ ಅಥವಾ ಇತರ ಯಾರಿಗೂ ಇವುಗಳನ್ನು ನೀಡಲು ಸಾಧ್ಯವಿಲ್ಲ.
ಸಹೀಹ್ ಮುಸ್ಲಿಮ್. (4/ 2087) (2721).
ಇನ್ನಷ್ಟು (10)
بهجة الناظرين شرح رياض الصالحين.
لسليم الهلالي (1/ 146).
تطريز رياض الصالحين.
لفيصل المبارك (ص68).
كنوز رياض الصالحين.
لمجموعة من الباحثين (2/ 183).
شرح رياض الصالحين.
لابن عثيمين (1/ 528).
نزهة المتقين شرح رياض الصالحين.
مجموعة من الباحثين (1/ 104).