Skip to content

"ಅಲ್ಲಾಹನ ದಾಸಿಯರನ್ನು (ಮಹಿಳೆಯರನ್ನು) ಅಲ್ಲಾಹನ ಮಸೀದಿಗಳಿಂದ (ಅಲ್ಲಿಗೆ ಹೋಗದಂತೆ) ತಡೆಯಬೇಡಿ. ಆದರೆ ಅವರು ಸುಗಂಧ ಹಚ್ಚದೆ ಹೊರಡಲಿ."

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ಅಲ್ಲಾಹನ ದಾಸಿಯರನ್ನು (ಮಹಿಳೆಯರನ್ನು) ಅಲ್ಲಾಹನ ಮಸೀದಿಗಳಿಂದ (ಅಲ್ಲಿಗೆ ಹೋಗದಂತೆ) ತಡೆಯಬೇಡಿ. ಆದರೆ ಅವರು ಸುಗಂಧ ಹಚ್ಚದೆ ಹೊರಡಲಿ."

«لَا تَمْنَعُوا إِمَاءَ اللَّهِ مَسَاجِدَ اللَّهِ، وَلَكِنْ لِيَخْرُجْنَ وَهُنَّ تَفِلَاتٌ».

ಇದನ್ನು ಅಬೂದಾವೂದ್ ವರದಿ ಮಾಡಿದ್ದಾರೆ.
ಹಸನ್.
ವಿವರಣೆ

ಮಹಿಳೆಯ ಪೋಷಕರು ಮತ್ತು ಆಕೆಯ ಜವಾಬ್ದಾರಿ ಹೊತ್ತವರು, ಮಹಿಳೆಯರನ್ನು ಮಸೀದಿಗಳಿಂದ ತಡೆಯುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಮಹಿಳೆಯರು ಹೊರಡುವಾಗ ಸುಗಂಧ ಹಚ್ಚದೆ ಮತ್ತು ಅಲಂಕಾರ ಮಾಡಿಕೊಳ್ಳದೆ ಹೊರಡುವಂತೆ ಆದೇಶಿಸಿದ್ದಾರೆ. ಇದು ಅವರು ಪುರುಷರಿಗೆ ಫಿತ್ನಾ (ಪಾಪದ ಆಕರ್ಷಣೆ) ಉಂಟಾಗಲು ಕಾರಣವಾಗಬಾರದು ಎಂಬ ಉದ್ದೇಶದಿಂದಾಗಿದೆ.

ಹದೀಸಿನ ಪ್ರಯೋಜನಗಳು

ಫಿತ್ನಾ (ಪಾಪದ ಭಯ) ಇಲ್ಲದಿದ್ದರೆ, ಮತ್ತು ಮಹಿಳೆ ಅಲಂಕಾರ ಅಥವಾ ಸುಗಂಧವಿಲ್ಲದೆ ಹೊರಡುವುದಾದರೆ, ಆಕೆಗೆ ಮಸೀದಿಯಲ್ಲಿ ನಮಾಝ್ ಮಾಡಲು ಅನುಮತಿಯಿದೆ.

ಮಹಿಳೆ ತನ್ನ ಪತಿಯ ಅನುಮತಿಯಿಲ್ಲದೆ ಅವನ ಮನೆಯಿಂದ ಹೊರಹೋಗಬಾರದು ಎಂಬುದಕ್ಕೆ ಇದರಲ್ಲಿ ಆಧಾರವಿದೆ. ಏಕೆಂದರೆ ಇಲ್ಲಿ ಪತಿಗಳಿಗೆ (ಅನುಮತಿ ನೀಡುವಂತೆ) ಆದೇಶ ನೀಡಲಾಗಿದೆ.

ಮಹಿಳೆಯರ ಬಗ್ಗೆ ಇಸ್ಲಾಂ ಹೊಂದಿರುವ ಕಾಳಜಿ, ಮತ್ತು ಜ್ಞಾನ ಕಲಿಯುವಂತಹ ಒಳಿತಿನ ಕಾರ್ಯಗಳಿಗೆ ಹೋಗುವುದರಿಂದ ಅವರನ್ನು ತಡೆಯಬಾರದು ಎಂದು ತಿಳಿಸಲಾಗಿದೆ.

ಮಹಿಳೆಯ ಮೇಲೆ ಪುರುಷನಿಗಿರುವ ಅಧಿಕಾರ ಮತ್ತು ಪೋಷಣೆಯ ಹಕ್ಕನ್ನು ದೃಢೀಕರಿಸಲಾಗಿದೆ.

ಉಲ್ಲೇಖಗಳು

ಸುನನ್ ಅಬೂ ದಾವೂದ್. (1/ 423) (565).

ಇನ್ನಷ್ಟು (3)

شرح سنن أبي داود للعباد (78/ 6).

شرح أبي داود للعيني (3/ 50).

النهاية في غريب الحديث والأثر ص(109).