"ಯಾರು 'ರದೀತು ಬಿಲ್ಲಾಹಿ ರಬ್ಬನ್, ವ ಬಿಲ್-ಇಸ್ಲಾಮಿ ದೀನನ್, ವ ಬಿ-ಮುಹಮ್ಮದಿನ್ ರಸೂಲನ್' (ಅರ್ಥ: ನಾನು ಅಲ್ಲಾಹನನ್ನು ಪರಿಪಾಲಕನೆಂದು, ಇಸ್ಲಾಮನ್ನು ಧರ್ಮವೆಂದು, ಮತ್ತು ಮುಹಮ್ಮದ್ ರನ್ನು ಸಂದೇಶವಾಹಕರೆಂದು ಒಪ್ಪಿ ತೃಪ್ತನಾಗಿದ್ದೇನೆ) ಎಂದು ಹೇಳುತ್ತಾನೋ, ಅವನಿಗೆ ಸ್ವರ್ಗವು ಖಚಿತವಾಯಿತು."
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು 'ರದೀತು ಬಿಲ್ಲಾಹಿ ರಬ್ಬನ್, ವ ಬಿಲ್-ಇಸ್ಲಾಮಿ ದೀನನ್, ವ ಬಿ-ಮುಹಮ್ಮದಿನ್ ರಸೂಲನ್' (ಅರ್ಥ: ನಾನು ಅಲ್ಲಾಹನನ್ನು ಪರಿಪಾಲಕನೆಂದು, ಇಸ್ಲಾಮನ್ನು ಧರ್ಮವೆಂದು, ಮತ್ತು ಮುಹಮ್ಮದ್ ರನ್ನು ಸಂದೇಶವಾಹಕರೆಂದು ಒಪ್ಪಿ ತೃಪ್ತನಾಗಿದ್ದೇನೆ) ಎಂದು ಹೇಳುತ್ತಾನೋ, ಅವನಿಗೆ ಸ್ವರ್ಗವು ಖಚಿತವಾಯಿತು."
«مَنْ قَالَ: رَضِيتُ بِاللَّهِ رَبًّا، وَبِالْإِسْلَامِ دِينًا، وَبِمُحَمَّدٍ رَسُولًا، وَجَبَتْ لَهُ الْجَنَّةُ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಯಾರು "ನಾನು ಅಲ್ಲಾಹುವನ್ನು ಪರಿಪಾಲಕ, ದೇವರು, ಪೋಷಕ, ಮಾಲೀಕ, ಒಡೆಯ ಮತ್ತು ಸುಧಾರಕನೆಂದು ಒಪ್ಪಿ ತೃಪ್ತನಾಗಿದ್ದೇನೆ, ಮತ್ತು ಇಸ್ಲಾಮನ್ನು ಅದರ ಎಲ್ಲಾ ಆದೇಶಗಳು ಮತ್ತು ನಿಷೇಧಗಳೆಂಬ ಶಾಸನಗಳ ಮೂಲಕ ನಂಬಿಕೆ ಮತ್ತು ಶರಣಾಗತಿಯೊಂದಿಗೆ ಧರ್ಮ, ಮಾರ್ಗ ಮತ್ತು ಶರೀಅತ್ ಎಂದು ಒಪ್ಪಿ ತೃಪ್ತನಾಗಿದ್ದೇನೆ, ಮತ್ತು ಮುಹಮ್ಮದ್ ರನ್ನು ಅವರೊಂದಿಗೆ ಕಳುಹಿಸಲಾದ ಮತ್ತು ಅವರು ನಮಗೆ ತಲುಪಿಸಿದ ಎಲ್ಲದರೊಂದಿಗೆ ಸಂದೇಶವಾಹಕ ಮತ್ತು ಪ್ರವಾದಿಯೆಂದು ಒಪ್ಪಿ ತೃಪ್ತನಾಗಿದ್ದೇನೆ" ಎಂದು ಹೇಳುತ್ತಾನೋ ಅವನಿಗೆ ಸ್ವರ್ಗವು ಖಚಿತವಾಗದೇ ಇರದು.
ಈ ಪ್ರಾರ್ಥನೆಯನ್ನು (ದುಆ) ಪಠಿಸಲು ಪ್ರೋತ್ಸಾಹಿಸಲಾಗಿದೆ, ಮತ್ತು ಅದಕ್ಕಾಗಿ ದೊರೆಯುವ ಪ್ರತಿಫಲವನ್ನು ವಿವರಿಸಲಾಗಿದೆ.
ಅಲ್ಲಾಹುವನ್ನು ಪರಿಪಾಲಕನೆಂದು ಒಪ್ಪಿ ತೃಪ್ತನಾಗುವುದು, ಒಬ್ಬ ವ್ಯಕ್ತಿಯು ಅವನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬಾರದು ಎಂಬುದನ್ನು ಒಳಗೊಂಡಿರುತ್ತದೆ.
ಮುಹಮ್ಮದ್ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಪ್ರವಾದಿ ಮತ್ತು ಸಂದೇಶವಾಹಕರೆಂದು ಒಪ್ಪಿ ತೃಪ್ತನಾಗುವುದು, ಅವರಿಗೆ ವಿಧೇಯರಾಗುವುದು ಮತ್ತು ಅವರ ಸುನ್ನತ್‌ಗೆ (ಪ್ರವಾದಿಚರ್ಯೆಗೆ) ಶರಣಾಗುವುದನ್ನು ಒಳಗೊಂಡಿರುತ್ತದೆ.
ಇಸ್ಲಾಮನ್ನು ಧರ್ಮವೆಂದು ಒಪ್ಪಿ ತೃಪ್ತನಾಗುವುದು, ಅಲ್ಲಾಹು ತನ್ನ ದಾಸರಿಗಾಗಿ ಆಯ್ಕೆ ಮಾಡಿದ್ದರಲ್ಲಿ ತೃಪ್ತಿ ಹೊಂದುವುದಾಗಿದೆ.
ಇತರ ವರದಿಗಳಲ್ಲಿ ಬಂದಿರುವಂತೆ, ಅಝಾನ್ ಕೇಳುವಾಗ ಶಹಾದತೈನ್ (ಎರಡು ಸಾಕ್ಷ್ಯವಚನಗಳು) ನಂತರ ಈ ಪ್ರಾರ್ಥನೆಯನ್ನು ಹೇಳುವುದು ಅಪೇಕ್ಷಣೀಯವಾಗಿದೆ.
ಇನ್ನೊಂದು ಹದೀಸ್‌ನಲ್ಲಿ ಈ ಪ್ರಾರ್ಥನೆಯನ್ನು ಬೆಳಿಗ್ಗೆ ಮತ್ತು ಸಂಜೆ ಹೇಳುವುದು ಅಪೇಕ್ಷಣೀಯವೆಂದು ವರದಿಯಾಗಿದೆ.
ಸುನನ್ ಅಬೂ ದಾವೂದ್. (2/ 635) (1529).
ಇನ್ನಷ್ಟು (3)
شرح أبي داود للعيني (5/ 439).
شرح سنن أبي داود لابن رسلان (7/ 348).
المفهم لما أشكل من تلخيص كتاب مسلم (3/ 710).