Skip to content

“ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾಗಿ ಅನ್ಯರಿಲ್ಲ) ಅತಿಶ್ರೇಷ್ಠ ಸ್ಮರಣೆಯಾಗಿದೆ ಮತ್ತು ಅಲ್-ಹಮ್ದುಲಿಲ್ಲಾಹ್ (ಅಲ್ಲಾಹನಿಗೆ ಸರ್ವಸ್ತುತಿ) ಅತಿಶ್ರೇಷ್ಠ ಪ್ರಾರ್ಥನೆಯಾಗಿದೆ.”

ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:

“ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾಗಿ ಅನ್ಯರಿಲ್ಲ) ಅತಿಶ್ರೇಷ್ಠ ಸ್ಮರಣೆಯಾಗಿದೆ ಮತ್ತು ಅಲ್-ಹಮ್ದುಲಿಲ್ಲಾಹ್ (ಅಲ್ಲಾಹನಿಗೆ ಸರ್ವಸ್ತುತಿ) ಅತಿಶ್ರೇಷ್ಠ ಪ್ರಾರ್ಥನೆಯಾಗಿದೆ.”

«أَفْضَلُ الذِّكْرِ: لَا إِلَهَ إِلَّا اللهُ، وَأَفْضَلُ الدُّعَاءِ: الْحَمْدُ لِلهِ».

ಇದನ್ನು ತಿರ್ಮಿದಿ, ನಸಾಈ (ಕುಬ್ರಾದಲ್ಲಿ) ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
ಹಸನ್.
ವಿವರಣೆ

ಲಾಇಲಾಹ ಇಲ್ಲಲ್ಲಾಹ್ ಅತಿಶ್ರೇಷ್ಠ ಸ್ಮರಣೆ (ದಿಕ್ರ್) ಮತ್ತು ಅಲ್-ಹಮ್ದುಲಿಲ್ಲಾಹ್ ಅತಿಶ್ರೇಷ್ಠ ಪ್ರಾರ್ಥನೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಾರೆ. ಲಾಇಲಾಹ ಇಲ್ಲಲ್ಲಾಹ್ ಎಂದರೆ ಆರಾಧನೆಗೆ ಅಲ್ಲಾಹು ಮಾತ್ರ ಅರ್ಹನು ಎಂದು ನಂಬುವುದು. ಅಲ್-ಹಮ್ದುಲ್ಲಿಲ್ಲಾಹ್ ಎಂದರೆ ಅಲ್ಲಾಹು ಮಾತ್ರ ಅನುಗ್ರಹದಾತನು ಮತ್ತು ಅವನು ಎಲ್ಲಾ ಸಂಪೂರ್ಣ ಮತ್ತು ಸುಂದರ ವರ್ಣನೆಗಳಿಗೆ ಅರ್ಹನಾಗಿದ್ದಾನೆ ಎಂದು ನಂಬುವುದು.

ಪದಗಳ ಅರ್ಥ

...:

ಹದೀಸಿನ ಪ್ರಯೋಜನಗಳು

ಲಾಇಲಾಹ ಇಲ್ಲಲ್ಲಾಹ್ ಎಂದು ಹೇಳುತ್ತಾ ಅಲ್ಲಾಹನನ್ನು ಸ್ಮರಿಸುವುದು ಮತ್ತು ಅಲ್-ಹಮ್ದುಲಿಲ್ಲಾಹ್ ಎಂದು ಅಲ್ಲಾಹನನ್ನು ಕರೆದು ಪ್ರಾರ್ಥಿಸುವುದನ್ನು ಹೆಚ್ಚಿಸಬೇಕೆಂಬ ಒತ್ತಾಯ ಈ ಹದೀಸಿನಲ್ಲಿದೆ.

ಉಲ್ಲೇಖಗಳು

ಸುನನು ತ್ತಿರ್ಮಿದಿ. (5/ 393) (3383).

ಇನ್ನಷ್ಟು (4)

نزهة المتقين شرح رياض الصالحين.

لمصطفى الخِن وغيره (2/ 984).

زاد المعاد في هدي خير العباد.

ابن قيم الجوزية (1/ 36).