Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 175 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

ವರದಿಗಾರ

ಎಲ್ಲಾ ವರದಿಗಾರರನ್ನು ತೋರಿಸಿ (56)
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು (ಐಚ್ಛಿಕ) ರಕ್‌ಅತ್‌ಗಳನ್ನು ನಿರ್ವಹಿಸಲು ತೋರುತ್ತಿದ್ದ ಕಾಳಜಿಯನ್ನು ಬೇರೆ ಯಾವುದೇ ಐಚ್ಛಿಕ ನಮಾಝ್‌ಗಳಲ್ಲಿ ತೋರುತ್ತಿರಲಿಲ್ಲ".
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيالسنن الرواتب
"(ರಮದಾನ್ ತಿಂಗಳ ಕೊನೆಯ) ಹತ್ತು ದಿನಗಳು ಪ್ರಾರಂಭವಾದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿಯನ್ನು ಜೀವಂತಗೊಳಿಸುತ್ತಿದ್ದರು, ತಮ್ಮ ಕುಟುಂಬವನ್ನು ಎಬ್ಬಿಸುತ್ತಿದ್ದರು, ಪರಿಶ್ರಮಪಡುತ್ತಿದ್ದರು ಮತ್ತು ತಮ್ಮ ಧೋತಿಯನ್ನು ಬಿಗಿಗೊಳಿಸುತ್ತಿದ್ದರು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيالعشر الأواخر من رمضان
ನಾನು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದೇ ಪಾತ್ರೆಯಿಂದ ಸ್ನಾನ ಮಾಡುತ್ತಿದ್ದೆವು. ಆಗ ನಾವಿಬ್ಬರೂ ದೊಡ್ಡ ಅಶುದ್ಧಿಯಲ್ಲಿದ್ದೆವು. ನಾನು ಮುಟ್ಟಿನಲ್ಲಿರುವ ಸಂದರ್ಭದಲ್ಲಿ ಅವರು ನನಗೆ ಸೊಂಟದ ಕೆಳಗಿನ ಬಟ್ಟೆ ಧರಿಸಲು ಆದೇಶಿಸುತ್ತಿದ್ದರು ಮತ್ತು ನನ್ನನ್ನು ಮುದ್ದಾಡುತ್ತಿದ್ದರು. ನಾನು ಮುಟ್ಟಿನಲ್ಲಿರುವ ಸಂದರ್ಭದಲ್ಲಿ ಅವರು ಮಸೀದಿಯಲ್ಲಿ ಈತಿಕಾಫ್ (ಧ್ಯಾನ) ನಿರತರಾಗಿದ್ದಾಗ ನನ್ನ ಕಡೆಗೆ ತಲೆ ತೂರಿಸುತ್ತಿದ್ದರು ಮತ್ತು ನಾನು ಅದನ್ನು ತೊಳೆಯುತ್ತಿದ್ದೆ.
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيالحيض والنفاس والاستحاضة، أحكام الغسل، الاعتكاف، العشرة بين الزوجينموضوعات الحديثالاعتكاف، أحكام الغسل، أحكام الحيض والنفاس
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಏಳು ವಿಷಯಗಳನ್ನು ಮಾಡಲು ಆದೇಶಿಸಿದರು ಮತ್ತು ಏಳು ವಿಷಯಗಳಿಂದ ನಮ್ಮನ್ನು ತಡೆದರು: ರೋಗಿಯನ್ನು ಸಂದರ್ಶಿಸುವುದು, ಜನಾಝಾವನ್ನು (ಮೃತ ದೇಹವನ್ನು) ಹಿಂಬಾಲಿಸುವುದು, ಸೀನಿದವನಿಗೆ (ಅವನು 'ಅಲ್-ಹಮ್ದುಲಿಲ್ಲಾಹ್' ಹೇಳಿದರೆ) ಪ್ರತ್ಯುತ್ತರಿಸುವುದು (ತಶ್ಮೀತ್ ಮಾಡುವುದು), ಆಣೆ ಮಾಡಿದವನ ಆಣೆಯನ್ನು ಪೂರ್ಣಗೊಳಿಸುವುದು (ಅಥವಾ ಆಣೆ ಮಾಡಿದವನಿಗೆ ಸಹಾಯ ಮಾಡುವುದು), ದಮನಿತನಿಗೆ ಸಹಾಯ ಮಾಡುವುದು, ಆಮಂತ್ರಣವನ್ನು ಸ್ವೀಕರಿಸುವುದು, ಸಲಾಮ್ ಹೇಳುವುದನ್ನು ಹಬ್ಬಿಸುವುದು - ಇವುಗಳನ್ನು ಅವರು ನಮಗೆ ಆದೇಶಿಸಿದರು. ಚಿನ್ನದ ಉಂಗುರಗಳನ್ನು ಧರಿಸುವುದರಿಂದ - ಅಥವಾ ಚಿನ್ನವನ್ನು ಧರಿಸುವುದರಿಂದ, ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯುವುದರಿಂದ, 'ಮಯಾಸಿರ್'ಗಳಿಂದ, 'ಅಲ್-ಖಸ್ಸೀ'ಯಿಂದ, (ಶುದ್ಧ) ರೇಷ್ಮೆಯನ್ನು ಧರಿಸುವುದರಿಂದ, 'ಇಸ್ತಬ್ರಖ್' ಧರಿಸುವುದರಿಂದ, 'ದೀಬಾಜ್' ಧರಿಸುವುದರಿಂದ ಅವರು ನಮ್ಮನ್ನು ತಡೆದರು.
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيالآداب الشرعية، حمل الميت ودفنه
ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ರೋಗಿಯ ಬಳಿಗೆ ಬಂದು ಪ್ರಾರ್ಥಿಸುವಾಗ ಹೀಗೆ ಹೇಳುತ್ತಿದ್ದರು: "ಅದ್‌ಹಿಬಿಲ್ ಬಅ್‌ಸ್, ರಬ್ಬನ್ನಾಸ್, ವಶ್‌ಫಿ ಅಂತ ಶ್ಶಾಫೀ, ಲಾ ಶಿಫಾಅ ಇಲ್ಲಾ ಶಿಫಾಉಕ್, ಶಿಫಾಅನ್ ಲಾ ಯುಗಾದಿರು ಸಖಮಾ". (ಅರ್ಥ: ಓ ಮಾನವರ ಪರಿಪಾಲಕನೇ, ಕಾಯಿಲೆಯನ್ನು ದೂರ ಮಾಡು, ಮತ್ತು ಗುಣಪಡಿಸು, ನೀನೇ ಗುಣಪಡಿಸುವವನು. ನಿನ್ನ ಗುಣಪಡಿಸುವಿಕೆಯ ಹೊರತು ಬೇರೆ (ನೈಜ) ಗುಣಪಡಿಸುವಿಕೆ ಇಲ್ಲ. ಯಾವುದೇ ರೋಗವನ್ನು ಉಳಿಸದಂತಹ (ಸಂಪೂರ್ಣ) ಗುಣಪಡಿಸುವಿಕೆಯನ್ನು ನೀಡು.)
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيالرقية الشرعية وأحكامها، آداب عيادة المريض
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಹೀಗೆ ಹೇಳುತ್ತಿದ್ದರು: “ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಅ್‌ತಯ್ತ ವಲಾ ಮುಅ್‌ತಿಯ ಲಿಮಾ ಮನಅ್‌ತ, ವಲಾ ಯನ್‌ಫಉ ದಲ್-ಜದ್ದಿ ಮಿನ್ಕಲ್ ಜದ್ದ್."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيأذكار الصلاةموضوعات الحديثالذِّكْر، الأذكار الشرعية، الإيمان بالقدر خيره وشره
"ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ಸಹರಿ ಸೇವಿಸಿದೆವು. ನಂತರ ಅವರು ನಮಾಝ್ ಮಾಡಲು ನಿಂತರು. ನಾನು ಕೇಳಿದೆ: 'ಅದಾನ್ ಮತ್ತು ಸಹರಿಯ ನಡುವೆ ಎಷ್ಟು ಸಮಯವಿತ್ತು?' ಅವರು ಹೇಳಿದರು: 'ಸುಮಾರು ಐವತ್ತು ಆಯತ್‌ಗಳಷ್ಟು.'"
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيسنن الصيام
"ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ತಿಂದವರು ನಮ್ಮಿಂದ ದೂರವಿರಲಿ - ಅಥವಾ ಅವರು ಹೀಗೆ ಹೇಳಿದರು: ಅವರು ನಮ್ಮ ಮಸೀದಿಯಿಂದ ದೂರವಿರಲಿ - ಮತ್ತು ತಮ್ಮ ಮನೆಯಲ್ಲೇ ಉಳಿದುಕೊಳ್ಳಲಿ." ಒಮ್ಮೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತರಕಾರಿ ಸೊಪ್ಪುಗಳಿರುವ ಮಡಿಕೆಯನ್ನು ತರಲಾಯಿತು. ಅವರಿಗೆ ಅದರಿಂದ ಕೆಟ್ಟ ವಾಸನೆ ಅನುಭವವಾಯಿತು. ಅವರು ಅದರ ಬಗ್ಗೆ ವಿಚಾರಿಸಿದಾಗ, ಅದರಲ್ಲಿರುವ ಸೊಪ್ಪುಗಳ ಬಗ್ಗೆ ಅವರಿಗೆ ತಿಳಿಸಲಾಯಿತು. ಅವರು ಅದನ್ನು ಹತ್ತಿರ ತರುವಂತೆ ತಮ್ಮ ಬಳಿಯಲ್ಲಿದ್ದ ಒಬ್ಬ ಸಂಗಡಿಗರಿಗೆ ಆದೇಶಿಸಿದರು. ಅದನ್ನು ಕಂಡಾಗ ಅವರು ಅದನ್ನು ತಿನ್ನಲು ಅಸಹ್ಯಪಟ್ಟರು. ಅವರು ಹೇಳಿದರು: "ತಿನ್ನಿರಿ! ಏಕೆಂದರೆ, ನಿಶ್ಚಯವಾಗಿಯೂ ನೀವು ಸಂಭಾಷಣೆ ಮಾಡದವನೊಂದಿಗೆ ನಾನು ಸಂಭಾಷಣೆ ಮಾಡುತ್ತೇನೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيفضل صلاة الجماعة وأحكامها