Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 8 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

ವರದಿಗಾರ

ಎಲ್ಲಾ ವರದಿಗಾರರನ್ನು ತೋರಿಸಿ (56)
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮ್ಮುಖದಲ್ಲಿ ರಾತ್ರಿಯಿಡೀ ಮಲಗಿ ಬೆಳಿಗ್ಗೆಯವರೆಗೂ ಎದ್ದೇಳದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲಾಯಿತು. ಆಗ ಅವರು ಹೇಳಿದರು: “ಅವನು ಎಂತಹ ವ್ಯಕ್ತಿಯೆಂದರೆ, ಅವನ ಕಿವಿಗಳಲ್ಲಿ (ಅಥವಾ ಅವರು ಹೀಗೆ ಹೇಳಿದರು: ಅವನ ಕಿವಿಯಲ್ಲಿ) ಶೈತಾನನು ಮೂತ್ರ ವಿಸರ್ಜನೆ ಮಾಡಿದ್ದಾನೆ.”
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيوجوب الصلاة وفضلها وحكم تاركها
"ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيالقصاص، الحياة الآخرةموضوعات الحديثقتل النفس، الإيمان باليوم الآخرمحاور التعريف بالإسلامالحساب
ನಾನು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದೆ: "ಅಲ್ಲಾಹನ ದೃಷ್ಟಿಯಲ್ಲಿ ಅತಿದೊಡ್ಡ ಪಾಪ ಯಾವುದು?" ಅವರು ಉತ್ತರಿಸಿದರು: "ಅಲ್ಲಾಹು ನಿನ್ನನ್ನು ಸೃಷ್ಟಿಸಿದವನಾಗಿದ್ದೂ ಸಹ ನೀನು ಅವನೊಂದಿಗೆ ಇತರರನ್ನು ಸರಿಸಾಟಿಯಾಗಿ ಮಾಡುವುದು." ನಾನು ಹೇಳಿದೆ: "ಅದು ನಿಜಕ್ಕೂ ಗಂಭೀರ ಪಾಪವಾಗಿದೆ." ನಾನು ಕೇಳಿದೆ: " ನಂತರ ಯಾವುದು?" ಅವರು ಉತ್ತರಿಸಿದರು: "ನಿನ್ನ ಜೊತೆಗೆ ಆಹಾರ ಸೇವಿಸುವನು ಎಂಬ ಭಯದಿಂದ ನೀನು ನಿನ್ನ ಮಗುವನ್ನು ಹತ್ಯೆ ಮಾಡುವುದು." ನಾನು ಕೇಳಿದೆ: "ನಂತರ ಯಾವುದು?" ಅವರು ಉತ್ತರಿಸಿದರು: "ನಿನ್ನ ನೆರೆಮನೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيحد الزنا، ذم المعاصي، تربية الأولاد، توحيد الربوبية، الشركموضوعات الحديثقتل النفس، الزنا، أهمية التوحيد، أذى الجار، الشرك بالله وأقسامه، التوكلمحاور التعريف بالإسلامبطلان الشرك وصوره، بطلان عبادة غير الله
"ವಿವಾಹವಾಗುವ ಸಾಮರ್ಥ್ಯವಿರುವವರು ವಿವಾಹವಾಗಬೇಕು. ಏಕೆಂದರೆ, ದೃಷ್ಟಿಯನ್ನು ತಗ್ಗಿಸಲು ಮತ್ತು ಪರಿಶುದ್ಧತೆಯನ್ನು ಕಾಪಾಡಲು ಅದು ಹೆಚ್ಚು ಪರಿಣಾಮಕಾರಿಯಾಗಿದೆ. ವಿವಾಹವಾಗುವ ಸಾಮರ್ಥ್ಯವಿಲ್ಲದವರು ಉಪವಾಸ ಆಚರಿಸಬೇಕು. ಏಕೆಂದರೆ, ಅದು ಅವನಿಗೆ ಗುರಾಣಿಯಾಗಿದೆ."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيفضل الصيام، فضل النكاح وآدابه
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಅಂಗೈಯನ್ನು ಅವರ ಎರಡು ಅಂಗೈಗಳ ಮಧ್ಯದಲ್ಲಿಟ್ಟು, ಕುರ್‌ಆನಿನ ಒಂದು ಅಧ್ಯಾಯವನ್ನು ಕಲಿಸಿಕೊಡುವಂತೆ ನನಗೆ ತಶಹ್ಹುದ್ ಕಲಿಸಿಕೊಟ್ಟರು: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು." (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ಇನ್ನೊಂದು ವರದಿಯಲ್ಲಿ: "ನಿಶ್ಚಯವಾಗಿಯೂ ಅಲ್ಲಾಹು ಶಾಂತಿಯಾಗಿದ್ದಾನೆ. ಆದ್ದರಿಂದ ನಿಮ್ಮಲ್ಲೊಬ್ಬರು ನಮಾಝಿನಲ್ಲಿ ಕುಳಿತುಕೊಳ್ಳುವಾಗ ಹೀಗೆ ಹೇಳಲಿ: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ). ಹೀಗೆ ಹೇಳಿದರೆ ಭೂಮ್ಯಾಕಾಶಗಳಲ್ಲಿರುವ ಅಲ್ಲಾಹನ ಎಲ್ಲಾ ನೀತಿವಂತ ದಾಸರಿಗೂ ಅದು ಅನ್ವಯಿಸುತ್ತದೆ. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು. (ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ನಂತರ ಅವರಿಗೆ ಇಷ್ಟವಾದ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيصفة الصلاة، أذكار الصلاةموضوعات الحديثأركان الصلاة، صفة الصلاة
"ಯಾರು ಒಬ್ಬ ಮುಸ್ಲಿಂ ವ್ಯಕ್ತಿಯ ಸಂಪತ್ತನ್ನು ಕಸಿದುಕೊಳ್ಳಲು ಸುಳ್ಳು ಪ್ರಮಾಣವನ್ನು ಮಾಡುತ್ತಾನೋ, ಅವನು ಅಲ್ಲಾಹನನ್ನು ಭೇಟಿಯಾಗುವುದು ಅಲ್ಲಾಹು ಅವನ ಮೇಲೆ ಕೋಪಗೊಂಡಿರುವ ಸ್ಥಿತಿಯಲ್ಲಾಗಿದೆ". (ವರದಿಗಾರರು) ಹೇಳುತ್ತಾರೆ: ಆಗ ಅಶ್‌ಅಸ್ (ಇಬ್ನ್ ಖೈಸ್) ಹೇಳಿದರು: "ಅಲ್ಲಾಹನಾಣೆ, ಅದು ನನ್ನ ವಿಷಯದಲ್ಲಿಯೇ ಆಗಿತ್ತು! ನನಗೂ ಮತ್ತು ಯಹೂದಿಗಳಲ್ಲಿರುವ ಒಬ್ಬ ವ್ಯಕ್ತಿಗೂ ಒಂದು ಜಮೀನು ಇತ್ತು. ಅವನು ನನ್ನ ಹಕ್ಕನ್ನು ನೀಡಲು ನಿರಾಕರಿಸಿದನು. ನಾನು ಅವನನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕರೆತಂದೆನು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಹೇಳಿದರು: 'ನಿನ್ನ ಬಳಿ ಪುರಾವೆ ಇದೆಯೇ?'. ನಾನು ಹೇಳಿದೆನು: 'ಇಲ್ಲ'. (ವರದಿಗಾರರು) ಹೇಳುತ್ತಾರೆ: ಆಗ ಪ್ರವಾದಿಯವರು ಯಹೂದಿಗೆ ಹೇಳಿದರು: 'ಪ್ರಮಾಣ ಮಾಡು'. ಅಶ್‌ಅಸ್ ಹೇಳುತ್ತಾರೆ: ನಾನು ಹೇಳಿದೆನು: 'ಓ ಅಲ್ಲಾಹನ ಸಂದೇಶವಾಹಕರೇ, ಹಾಗಾದರೆ ಅವನು ಪ್ರಮಾಣ ಮಾಡಿ ನನ್ನ ಸಂಪತ್ತನ್ನು ತೆಗೆದುಕೊಂಡು ಹೋಗುತ್ತಾನೆ!'. ಆಗ ಸರ್ವಶಕ್ತನಾದ ಅಲ್ಲಾಹು (ಈ ವಚನವನ್ನು) ಅವತೀರ್ಣಗೊಳಿಸಿದನು: "ಖಂಡಿತವಾಗಿಯೂ ಯಾರು ಅಲ್ಲಾಹನ ಕರಾರು ಮತ್ತು ತಮ್ಮ ಪ್ರಮಾಣಗಳಿಗೆ ಬದಲಾಗಿ ಅಲ್ಪ ಮೌಲ್ಯವನ್ನು ಖರೀದಿಸುತ್ತಾರೋ..." [ಸೂರಃ ಆಲ್-ಇಮ್ರಾನ್: 77] ವಚನದ ಕೊನೆಯವರೆಗೆ.
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيالأيمان والنذور، الدعاوى والبيِّنات
ನಾನು ಪ್ರವಾದಿ(ಸ) ರೊಂದಿಗೆ ಕೇಳಿದೆ: “ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು.” ಇಬ್ನ್ ಮಸ್‌ಊದ್ ಹೇಳುತ್ತಾರೆ: "ಇವೆಲ್ಲವೂ ಅವರು ತಿಳಿಸಿದ್ದಾಗಿದೆ. ಒಂದು ವೇಳೆ ನಾನು ಇನ್ನೂ ಕೇಳುತ್ತಾ ಹೋದರೆ ಅವರು ಇನ್ನೂ ಉತ್ತರಿಸುತ್ತಿದ್ದರು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيفضائل بر الوالدين، فضائل الأعمال الصالحة، وجوب الصلاة وفضلها وحكم تاركها، حكم الجهاد وفضلهموضوعات الحديثبر الوالدين، فضل الجهاد، مكانة الصلاة وفضلها
"ಒಬ್ಬ ಮುಸ್ಲಿಂ ವ್ಯಕ್ತಿಯ ರಕ್ತವು (ಅವನ ಪ್ರಾಣ ತೆಗೆಯುವುದು) ಮೂರು (ಕಾರಣಗಳಲ್ಲಿ) ಒಂದರಿಂದ ಹೊರತು ಹಲಾಲ್ ಆಗುವುದಿಲ್ಲ: ವಿವಾಹಿತ ವ್ಯಭಿಚಾರಿ, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ (ಕೊಲೆಗೆ ಪ್ರತೀಕಾರ), ಮತ್ತು ತನ್ನ ಧರ್ಮವನ್ನು ತೊರೆದು ಜಮಾಅತ್ (ಮುಸ್ಲಿಂ ಸಮುದಾಯ) ದಿಂದ ಬೇರ್ಪಟ್ಟವನು".
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
التصنيف الشرعيأحكام الحدود، الأربعون النووية